ಉಲ್ಫಾ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಬೆಳಗಾವಿ ಯೋಧ

ಗುರುವಾರ ಬೆಳಗ್ಗೆ ಮಣಿಪುರದ ಮೋಲ್ಟುಕ್ ನಲ್ಲಿ ನಡೆದ ಸೈನಿಕರ ಮಾರಣಹೋಮದಲ್ಲಿ ಬೆಳಗಾವಿಯ ಯೋಧ ಭರತೇಶ್ವರ ಕೂಡ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಸ್ಥಳ
ಘಟನೆ ನಡೆದ ಸ್ಥಳ

ಬೆಳಗಾವಿ: ಗುರುವಾರ ಬೆಳಗ್ಗೆ ಮಣಿಪುರದ ಮೋಲ್ಟುಕ್ ನಲ್ಲಿ ನಡೆದ ಸೈನಿಕರ ಮಾರಣಹೋಮದಲ್ಲಿ ಬೆಳಗಾವಿಯ ಯೋಧ ಭರತೇಶ್ವರ ಕೂಡ ಸಾವನ್ನಪ್ಪಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗದ ರಾಯಪ್ಪ ಮತ್ತು ಗೋದಾವರಿ ದಂಪತಿಯ ಪುತ್ರ ಭರತೇಶ್ವರ. 2006 ರಲ್ಲಿ ಭಾರತೀಯ ಸೇನೆ ಸೇರಿದ್ದ ಭರತೇಶ್ವರ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಗೀತಾ ಎಂಬುವರ ಜೊತೆ ವಿವಾಹವಾಗಿತ್ತು. ಭರತೇಶ್ವರ ಅವರಿಗೆ ಚಿರಂಜೀವಿ ಮತ್ತು ಹೃತ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿಗೆ ಮತ ದೇಹ ಆಗಮಸಲಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಇಂಫಾಲದಿಂದ 20 ಕೀಮೀ ದೂರದಲ್ಲಿರುವ ತೆಂಗ್ ನೌಪಲ್- ನ್ಯೂರಸ್ತೆಯಲ್ಲಿ ಸೈನಿಕರ ವಾಹನ ವಾಹನ ಗಸ್ತು ತಿರುಗುತ್ತಿತ್ತು. ಈ ವೇಳೆ ಉಲ್ಫಾ ಉಗ್ರರು ಏಕಾಏಕಿ ದಾಳಿ ಸೈನಿಕರ ಗಸ್ತು ವಾಹನವನ್ನು ಸ್ಫೋಟ ಮಾಡಿದ್ದರು. ಇದರಿಂದ 20 ಮಂದಿ ಯೋಧರು ಸಾವನ್ನಪ್ಪಿದ್ದರು



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com