ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ: ವಜುಬಾಯಿ ವಾಲಾ

ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಜ್ಞಾನವನ್ನು ನೀಡಿದರೆ ಅದು ಶಿಕ್ಷಣವಾಗುವುದಿಲ್ಲ. ಜೊತೆಗೆ ಸಂಸ್ಕಾರವನ್ನು ಕೂಡ ನೀಡುವುದು ಅವಶ್ಯವೆಂದು ರಾಜ್ಯಪಾಲ ವಿ.ಆರ್. ವಾಲಾ ಹೇಳಿದರು...
ವಜುಭಾಯಿ ವಾಲಾ
ವಜುಭಾಯಿ ವಾಲಾ
Updated on

ಬೆಂಗಳೂರು:ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಜ್ಞಾನವನ್ನು ನೀಡಿದರೆ ಅದು ಶಿಕ್ಷಣವಾಗುವುದಿಲ್ಲ. ಜೊತೆಗೆ ಸಂಸ್ಕಾರವನ್ನು ಕೂಡ ನೀಡುವುದು ಅವಶ್ಯವೆಂದು ರಾಜ್ಯಪಾಲ ವಿ.ಆರ್. ವಾಲಾ ಹೇಳಿದರು.

ಜೈನ್ ವಿಶ್ವಭಾರತಿ ವಿಶ್ವವಿದ್ಯಾಲಯ ತನ್ನ ಬೆಳ್ಳಿಹಬ್ಬದ ಅಂಗವಾಗಿ ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಷರ ಜ್ಞಾನ ಮನುಷ್ಯನನ್ನು ವಿದ್ಯಾವಂತರನ್ನಾಗಿ ಮಾಡುತ್ತದೆ ವಿನಃ ಸಂಸ್ಕಾರವತರನ್ನಾಗಿ ಅಲ್ಲ, ನಮ್ಮ ಚಾರಿತ್ರ್ಯವನ್ನು ಕೇವಲ ಭಾಷೆಯಿಂದ ಅಳೆಯಲು ಸಾಧ್ಯವಿಲ್ಲ ಅದಕ್ಕೆ ಉತ್ತಮ ಮಾರ್ಗದರ್ಶನ ಬೇಕು. ವಿದ್ಯಾರ್ಥಿಗಳಿಗೆ ಎಷ್ಟು ಅಂಕ ಬಂದಿದೆ ಎನ್ನುವುದು ಮುಖ್ಯವಲ್ಲ. ಅವನು ಸಮಾಜದಲ್ಲಿ ಎಲ್ಲರೊಂದಿಗೆ ಒಬ್ಬನಾಗಿ ಹೇಗೆ ಬಾಳುತ್ತಾನೆ ಎನ್ನುವುದು ಮುಖ್ಯ, ಸಂಸ್ಕಾರವೇ ಸರ್ವ ಶ್ರೇಷ್ಠವಾದದ್ದು. ಜೈನ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕೇವಲ ವಿದ್ಯಾರ್ಜನೆ ಮಾತ್ರವಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿಳಲ್ಲೂ ಸಂಸ್ಕಾರ ವನ್ನು ತುಂಬುತ್ತಿದೆ ಎಂದರು.

ಯಾರು ಹೆಚ್ಚು ಓದಿರುತ್ತಾರೋ ಅವರನ್ನೇ ಪಂಡಿತರು ಎಂದು ತಿಳಿದಿದ್ದೇವೆ.ಅದು ತಪ್ಪು ಕಲ್ಪನೆ ಜ್ಞಾನ ಕೇವಲ ಓದಿನಿಂದ ಬರುವಂತಹದ್ದಲ್ಲ. ಅದು ನಮ್ಮ ಹುಟ್ಟಿನಿಂದ ನಮ್ಮ ಸಂಸ್ಕಾರದಲ್ಲಿರುತ್ತದೆ. ಯಾರಿಗೆ ದಾನ ಮಾಡುವ ಮನಸ್ಸಿರುತ್ತದೋ ಆತನಿಗೆ ಯಾವತ್ತೂ ಹಣದ ಕೊರತೆಯುಂಟಾಗುವುದಿಲ್ಲ, ಯಾರಿಗೆ ಮತ್ತಷ್ಟು ಪಡೆಯಬೇಕು ಎನ್ನುವ ಅತಿ ಆಸೆ ಇರುತ್ತದೋ ಆತನಿಗೆ ಎಂದೂ ಯಶಸ್ಸು ಸಿಗುವುದಿಲ್ಲ.ಸಿಗದಿರುವ ವಸ್ತುಗಳ ಬಗ್ಗೆ ಚಿಂತೆ
ಮಾಡುವುದಕ್ಕಿಂತ ನಮ್ಮ ಮುಂದಿರುವುದನ್ನು ಬಳಸಿ ನೆಮ್ಮದಿಯನ್ನು ಕಾಣಬೇಕು ಎಂದರು.

ರಾಜಸ್ಥಾನದ ಉನ್ನ ಶಿಕ್ಷಣ ಮಂತ್ರಿ ಕಾಳಿಚರಣ ಸರಾ ಮಾತನಾಡಿ, ಜೀವನದಲ್ಲಿ ಪ್ರಯೋಗವಿರಬೇಕೆ ವಿನಃ ನಮ್ಮ ಜೀವನವನ್ನೇ ಪ್ರಯೋಗವೆಂದು ತಿಳಿಯಬಾರದು. ತುಳಸಿದಾಸರ ಹಾಗೆ ಕಣ್ತೆರೆದು ಕನಸು ಕಾಣಬೇಕು. ನಿದ್ರೆಯಲ್ಲಿ ಅಥವಾ ಕತ್ತಲೆಯಲ್ಲಿ ಕಂಡ ಕನಸು ಕನಸಾಗೇ ಉಳಿಯುತ್ತದೆ. ಶಿಕ್ಷಣ ಮನುಷ್ಯನನ್ನು ಉನ್ನತ ಸ್ಥಾನಕ್ಕೆ  ಕೊಂಡೊಯ್ಯುತ್ತದೆ. ಅದರಿಂದ ತಂತಾನೆ ಉದ್ಯೋಗದ ಹಾದಿ ತೆರೆದುಕೊಳ್ಳುತ್ತದೆ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಕೂಡ ಮಹಿಳೆಯಾಗಿದ್ದಾರೆ. ಸ್ತ್ರೀಯರ ಸಬಲೀಕರಣಕ್ಕೋಸ್ಕರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಏನೇ ಕುಂದುಕೊರತೆ,ಬೇಡಿಕೆಗಳಿದ್ದರೂ ಮುಕ್ತವಾಗಿ ಮಾತನಾಡಬಹುದು. ಸರ್ಕಾರದಿಂದ ಆಗುವ ಎಲ್ಲಾ ಸೌಲಭ್ಯವನ್ನೂ ಒದಗಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com