ಬಂಡಿಪುರ ರಾತ್ರಿ ಸಂಚಾರ ಬೇಡ: ಕುಮಾರಸ್ವಾಮಿ

ಬಂಡಿಪುರ ರಸ್ತೆಗಳಲ್ಲಿ ವನ್ಯ ಜೀವಿಗಳ ಸ್ವತಂತ್ರ ಸಂಚಾರಕ್ಕೆ ತೊಂದರೆಯಾಗುವುದರಿಂದ ಕೇರಳದ ಕೋರಿಕೆಯಂತೆ ರಾತ್ರಿ ವೇಳೆ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ...
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬಂಡಿಪುರ ರಸ್ತೆಗಳಲ್ಲಿ ವನ್ಯ ಜೀವಿಗಳ ಸ್ವತಂತ್ರ ಸಂಚಾರಕ್ಕೆ ತೊಂದರೆಯಾಗುವುದರಿಂದ ಕೇರಳದ ಕೋರಿಕೆಯಂತೆ ರಾತ್ರಿ ವೇಳೆ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಭಾನುವಾರ ಚಿತ್ರಕಲಾ ಪರಿಷತ್‍ನಲ್ಲಿ ಆಯೋಜನೆಗೊಂಡಿದ್ದ ಛಾಯಾಗ್ರಾಹಕ ಸುಧೀರ್ ಶೆಟ್ಟಿಯವರು ತೆಗೆದಿರುವ `ಬಂಡಿಪುರ ಅಭಯಾರಣ್ಯದಲ್ಲಿ ವಾಹನಗಳಿಗೆ ಸಿಕ್ಕು ಸತ್ತ ವನ್ಯ ಜೀವಿಗಳ ಛಾಯಾಚಿತ್ರ' ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿ, ರಾತ್ರಿ ಹೊತ್ತು ವಾಹನಗಳ ಸಂಚಾರ ನಿಷೇಧ ಇದ್ದರೂ ವಾಹನಗಳು ಅಧಿಕಾರಿಗಳ ಕಣ್ತಪ್ಪಿ ಹೋಗುತ್ತಿವೆ. ಇದರ ಬಗ್ಗೆ ಸರ್ಕಾರ ಗಮನಕೊಡಬೇಕು. ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶೇ.50ಕ್ಕಿಂತ ಹೆಚ್ಚು ಸದಸ್ಯರು ಗೆದ್ದಿದ್ದಾರೆ ಅಂತ ಮುಖ್ಯಮಂತ್ರಿ ಹೇಳಿದ್ದಾರೆ.

ಬಿಜೆಪಿಯವರು ಶೇ.60ಕ್ಕಿಂತಲೂ ಹೆಚ್ಚು ಗೆದ್ದಿದ್ದೀವಿ ಅಂತ ಹೇಳುತ್ತಾರೆ. ಇವರಿಬ್ಬರ ಪಾಲೇ ಶೇ.100 ದಾಟಿ ಹೋಗಿದೆ. ಹಾಗಿದ್ದರೆ, ಜೆಡಿಎಸ್ ಮೈನಸ್ ಮಟ್ಟಕ್ಕೆ ಹೋಗಿದೆ ಅಂತ ಅರ್ಥವೇ? ಹಾಗಾದರೆ ರಾಜ್ಯದಲ್ಲಿ ನಮಗೆ ಸ್ಥಾನವೇ ಇಲ್ಲವೇ? ಬಿಜೆಪಿ, ಕಾಂಗ್ರೆಸ್ ನಾವು ಹೆಚ್ಚು ಸ್ಥಾನ ಪಡೆದಿದ್ದೇವೆ ಅಂತ ಬೀಗುತ್ತಿದ್ದಾರೆ. ಪಕ್ಷದ ಚಿನ್ಹೆಯಡಿ ನಡೆಯುವ ತಾಪಂ, ಜಿಪಂ ಚುನಾವಣೆಯಲ್ಲಿ ವಾಸ್ತವ ಗೊತ್ತಾಗಲಿದೆ. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್  ಬೆಂಬಲಿತ ಅಭ್ಯರ್ಥಿಗಳು ಕಳೆದ ಸಲಕ್ಕಿಂತ ಹೆಚ್ಚು ಗೆದ್ದಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com