ಬೆಂಗಳೂರಿನಲ್ಲಿರುವ ಬಾತ್ರೂಮ್ ಸಿಂಗರ್ಸ್ ಗೆ ವೇದಿಕೆ ಸಜ್ಜು

ಬಾತ್ರೂಮ್ ಸಿಂಗರ್ಸ್ ಪ್ರತಿಭೆ ಹೊರ ಹಾಕುತ್ತಿರುವ ಮಗ್ ಟು ಮೈಕ್ ಸಂಸ್ಥೆ ಬೆಂಗಳೂರಿನಲ್ಲಿ ಜೂನ್ 13 ಮತ್ತು 14ರಂದು ಹೊಸ ಗಾಯಕ ಪ್ರತಿಭೆಗಳನ್ನು ಆಯ್ಕೆ...
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಗ್ ಟು ಮೈಕ್ ಸಂಸ್ಥೆಯ ಮುಖ್ಯಸ್ಥ ಸುನಿಲ್ ಕೋಶಿ ಮತ್ತು ದನಂಜಯ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಗ್ ಟು ಮೈಕ್ ಸಂಸ್ಥೆಯ ಮುಖ್ಯಸ್ಥ ಸುನಿಲ್ ಕೋಶಿ ಮತ್ತು ದನಂಜಯ್

ಬೆಂಗಳೂರು: ಬಾತ್ರೂಮ್ ಸಿಂಗರ್ಸ್ ಪ್ರತಿಭೆ ಹೊರ ಹಾಕುತ್ತಿರುವ ಮಗ್ ಟು ಮೈಕ್ ಸಂಸ್ಥೆ ಬೆಂಗಳೂರಿನಲ್ಲಿ ಜೂನ್ 13 ಮತ್ತು 14ರಂದು ಹೊಸ ಗಾಯಕ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲು ಕೋರಮಂಗಲದ ಕ್ಲಬ್ ನಲ್ಲಿ ಆಡಿಶನ್ ಏರ್ಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಸುನಿಲ್ ಕೋಶಿ, ಜೂನ್ 17 ಮತ್ತು 18 ರಂದು ಬೆಂಗಳೂರಿನಲ್ಲಿ ಫೈನಲ್ಸ್ ನಡೆಯಲಿದ್ದು, ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಮತ್ತು ಬೆಂಗಳೂರಿನಲ್ಲಿ ಶೋಧಿಸಲಾದ ಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗೀತ ರಚನೆ, ಗೀತ ಗಾಯನ ಮತ್ತು ವಾದ್ಯ ನುಡಿಸುವವರಿಗೆ ಅವಕಾಶವಿದೆ. ಚಲನಚಿತ್ರ, ಜಾನಪದ, ಭಾವಗೀತೆ, ಹೀಗೆ ಎಲ್ಲಾ ಪ್ರಕಾರದ ಹಾಡುಗಾರರಿಗೆ ಅವಕಾಶವಿದ್ದು, ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ. 

ಗ್ರಾಂಡ್ ಫಿನಾಲೆ ಮತ್ತು ವಿಶ್ವ ಸಂಗೀತ ದಿನವನ್ನು ಜೂನ್ 21ರಂದು ಬೆಂಗಳೂರಿನ ವೈಟ್ ಫೀಲ್ಡ್ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸುತ್ತಿದ್ದು, ಸ್ಪರ್ಧೆ ವಿಜೇತರಿಗೆ ಈ ಕಾಯಕ್ರಮದಲ್ಲಿ ಹಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ಮನೋಮೂರ್ತಿ, ಪ್ರಧಾನಿ ಗೌಡ ಮತ್ತಿತರರು ಹಾಜರಿರುತ್ತಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 9845286308

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com