ಉತ್ತಮ ಮಳೆ, ಚಂಡಮಾರುತ ಭೀತಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನ ನಂತರ ಮಳೆ ಬಂದಿದೆ. ಈ ಮಧ್ಯೆ ಕರಾವಳಿಯಲ್ಲಿ `ಅಶೋಬಾ' ಹೆಸರಿನ ಚಂಡ ಮಾರುತದ ಪ್ರಭಾವ ಬೀರುವ ಭೀತಿ ಎದುರಾಗಿದ್ದು, ಮೀನುಗಾರರು ಮತ್ತು ಕರಾವಳಿ...
ಉತ್ತಮ ಮಳೆ, ಚಂಡಮಾರುತ ಭೀತಿ (ಸಾಂದರ್ಭಿಕ ಚಿತ್ರ)
ಉತ್ತಮ ಮಳೆ, ಚಂಡಮಾರುತ ಭೀತಿ (ಸಾಂದರ್ಭಿಕ ಚಿತ್ರ)

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನ ನಂತರ ಮಳೆ ಬಂದಿದೆ. ಈ ಮಧ್ಯೆ ಕರಾವಳಿಯಲ್ಲಿ `ಅಶೋಬಾ' ಹೆಸರಿನ ಚಂಡ ಮಾರುತದ ಪ್ರಭಾವ ಬೀರುವ ಭೀತಿ ಎದುರಾಗಿದ್ದು, ಮೀನುಗಾರರು ಮತ್ತು ಕರಾವಳಿ ತೀರ ನಿವಾಸಿಗಳು ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರಾವಳಿ ಸಮುದ್ರದಲ್ಲಿ 70ರಿಂದ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಇದು 90 ಕಿ.ಮೀ.ವರೆಗೂ ವೇಗ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ 24 ಗಂಟೆ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಅಬ್ಬರ ಜೋರಾಗಿದ್ದು, ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಉತ್ತಮ ಮಳೆಯಾಗಿದೆ. ಇನ್ನೊಂದೆರಡು ದಿನ ಇದೇ ರೀತಿ ಮಳೆ ಮುಂದುವರಿಯುವ ಸಾಧ್ಯತೆ ಇದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com