ಶಿವಮೊಗ್ಗ: ಅಗ್ನಿಶಾಮಕ ಅಧಿಕಾರಿಯಿಂದ 9 ಲಕ್ಷ ರೂಪಾಯಿ ವಂಚನೆ; ಆರ್ ಟಿಐ ಕಾರ್ಯಕರ್ತ ಆರೋಪ

ಶಿವಮೊಗ್ಗದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ. ಶಿವಕುಮಾರ್ ಅವರು ದೇವಸ್ಥಾನ ನಿರ್ಮಿಸುತ್ತೇನೆಂದು ಹೇಳಿ, ಸಾರ್ವಜನಿಕರಿಂದ ಲಕ್ಷಾಂತರ...
ಪತ್ರಿಕಾಗೋಷ್ಠಿ ನಡೆಸಿದ ಆರ್ ಟಿಐ ಕಾರ್ಯಕರ್ತ ಉಮೇಶ್
ಪತ್ರಿಕಾಗೋಷ್ಠಿ ನಡೆಸಿದ ಆರ್ ಟಿಐ ಕಾರ್ಯಕರ್ತ ಉಮೇಶ್

ಬೆಂಗಳೂರು: ಶಿವಮೊಗ್ಗದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ. ಶಿವಕುಮಾರ್ ಅವರು ದೇವಸ್ಥಾನ ನಿರ್ಮಿಸುತ್ತೇನೆಂದು ಹೇಳಿ, ಸಾರ್ವಜನಿಕರಿಂದ ಲಕ್ಷಾಂತರ ರು. ಹಣ ಪಡೆದು ವಂಚಿಸಿರುವ ಹಿನ್ನಲೆಯಲ್ಲಿ ಅವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರ್ ಟಿಐ ಕಾರ್ಯಕರ್ತ ಉಮೇಶ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಮೆಲ್ಲಕಟ್ಟ ಎಂಬಲ್ಲಿ ಗಣೇಶ ದೇವಸ್ಥಾನ ನಿರ್ಮಿಸುತ್ತೇನೆ ಎಂದು ಹೇಳಿ ಅಧಿಕಾರಿ ಕೆ. ಶಿವಕುಮಾರ್ ಅವರು ಸುಮಾರು 9 ಲಕ್ಷ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ವಂಚಿಸಿದ್ದಾರೆ.  ಈ ಬಗ್ಗೆ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಕೆ. ಶಿವಕುಮಾರ್ ಅವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ಜಂಟಿ ನಿರ್ದೇಶಕರು ತನಿಖೆಗೆ ಆದೇಶಿಸಿದ್ದರು. ತನಿಖೆಗೆ ಉಪ ನಿರ್ದೇಶಕ ಕೆ.ಯು. ರಮೇಶ್ ಅವರನ್ನು ನೇಮಿಸಲಾಗಿತ್ತು. ಕಳೆದ ವರ್ಷ ಜೂ.27ರಂದು ಅವರು ದೋಷಾರೋಪವನ್ನು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಆರೋಪಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ತನಿಖೆ ವೇಳೆ ಆರು ಜನ ಸಾರ್ವಜನಿರು ಮತ್ತು 43 ಜನ ಇಲಾಖೆಯ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಯಾವುದೇ ಒಬ್ಬ ಅಧಿಕಾರಿ ವಂತಿಗೆ ಸಂಗ್ರಹಿಸಬೇಕಾದರೆ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಇವರು ಮಾತ್ರ ಯಾವುದೇ ಅನುಮತಿ ಇಲ್ಲದೆ ನಿಯಮ ಉಲ್ಲಂಘಿಸಿ ದೇಣಿಗೆ ಪಡೆದಿದ್ದಾರೆ.

ತದ ನಂತರ ಶಿವಕುಮಾರ್ ಅವರ ಒತ್ತಡಕ್ಕೆ ಮಣಿದ ವಿಚಾರಣಾಧಿಕಾರಿಯೊಬ್ಬರು ಆರೋಪ ಸಾಬೀತಾಗಿಲ್ಲ ಎಂದು ವರದಿ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ, ವಿಚಾರಣಾಧಿಕಾರಿ ಆರೋಪಿಯ ಒತ್ತಡಕ್ಕೆ ಮಣಿದಿರುವುದರಿಂದ ಡಿಐಜಿ ಮಟ್ಟದ ಅಧಿಕಾರಿಯಿಂದ ಈ ಪ್ರಕರಣವನ್ನು ಮರು ವಿಚಾರಣೆ ನಡೆಸಬೇಕು ಎಂದು ಉಮೇಶ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com