ವೈದ್ಯರ ಹಳ್ಳಿ ಸೇವೆ 2 ವರ್ಷ?

ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಯನ್ನು ಎರಡು ವರ್ಷಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು...
ವೈದ್ಯರ ಗ್ರಾಮೀಣ ಸೇವೆ (ಸಾಂದರ್ಭಿಕ ಚಿತ್ರ)
ವೈದ್ಯರ ಗ್ರಾಮೀಣ ಸೇವೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಯನ್ನು ಎರಡು ವರ್ಷಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿ, ರಾಜ್ಯದಲ್ಲಿ ಪ್ರತಿವರ್ಷ 4 ಸಾವಿರ ವೈದ್ಯರು ವಿವಿಧ ವೈದ್ಯಕೀಯ ಕಾಲೇಜು ಗಳಿಂದ ಹೊರಬರುತ್ತಿದ್ದಾರೆ. ಸರ್ಕಾರದ ಹೊಸ ಕಾಯ್ದೆಯ ಪ್ರಕಾರ, ಕಡ್ಡಾಯವಾಗಿ ಎಲ್ಲರೂ ಒಂದು ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು. ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚಿನವೈದ್ಯರು ಒಪ್ಪುತ್ತಿಲ್ಲ. ಕಡ್ಡಾಯ ಸೇವೆಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿ, ಒಟ್ಟು 2 ವರ್ಷಗಳ ಕಾಲ ಕಡ್ಡಾಯ ಸೇವೆ ಮಾಡುವ ಕಾಯ್ದೆ ತರಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದರು. 1 ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕಾಯ್ದೆಗೆ 2ಅಥವಾ 3 ದಿನಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಹಿಂದೆ ದಂಡದ ಮೊತ್ತವನ್ನು ಸರ್ಕಾರ ಹೆಚ್ಚಿಸಿದರೂ, ದಂಡ ಕೊಟ್ಟು ವೈದ್ಯರು ಕಡ್ಡಾಯ ಸೇವೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಕಾಯ್ದೆಗೆ ಸರ್ಕಾರ ಅಧಿನಿಯಮ ರಚಿಸುವಾಗ ವೈದ್ಯ ಸಂಘಟನೆಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಜಯಚಂದ್ರ ಅವರು ತಿಳಿಸಿದರು.

ಎಸ್ಮಾ ಕಾಯ್ದೆಗೆ ಅಂಕಿತ
ಎಸ್ಮಾ ಕಾಯ್ದೆಗೆ ರಾಷ್ಟ್ರಪತಿಗಳಿಂದ ಮೇ 28ರಂದು ಅಂಕಿತ ದೊರೆತಿದ್ದು, ಎರಡು ದಿನಗಳಲ್ಲಿ ಅದಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಉಭಯ ಸದನಗಳಲ್ಲಿ ಚರ್ಚೆಯಾದ
ಮಸೂದೆ ಸರ್ಕಾರದ ಅಸ್ತ್ರವಾಗಿದೆ. ಆದರೆ ಸರ್ಕಾರ ಕಾಯ್ದೆಯನ್ನು ಅಸ್ತ್ರವಾಗಿ ಇಟ್ಟುಕೊಳ್ಳುತ್ತದೆಯೇ ಹೊರತು ಬಳಕೆ ಮಾಡುವ ಸಂದರ್ಭ ಬರುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com