ವಿವಿ ಕುಲಪತಿಗಳ ನೇಮಕ ಅಖಾಡಕ್ಕಿಳಿದ ಸಿದ್ರಾಮಯ್ಯ

ವಿಶ್ವವಿದ್ಯಾಲಯ ಕುಲಪತಿ ನೇಮಕ ವಿಚಾರ ದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರ ಮುಗುಮ್ ನಿಲುವು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ವಿಶ್ವವಿದ್ಯಾಲಯ ಕುಲಪತಿ ನೇಮಕ ವಿಚಾರ ದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರ ಮುಗುಮ್ ನಿಲುವು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ರಾಜ್ಯಪಾಲರ ಜತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚರ್ಚೆ ನಡೆಸಲು ಮುಂದಾಗಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಸಮಯಾವಕಾಶ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ರಾಜ್ಯದ ಆರು ವಿಶ್ವವಿದ್ಯಾಲ ಯಗಳಲ್ಲಿ ಕುಲಪತಿ ಹುದ್ದೆ ತುಂಬಲು ವಿಳಂಬ ವಾಗಿರುವುದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರು ಪರೋಕ್ಷವಾಗಿ  ರಾಜ್ಯಪಾಲರೇ ಕಾರಣ ಎಂದು ಹೇಳಿದ್ದಾರೆ. ಕರ್ನಾಟಕ ಸಂಸ್ಕೃತ ವಿವಿ, ಶಿವಮೊಗ್ಗ ಕುವೆಂಪು ವಿವಿ, ಧಾರವಾಡದ ಕರ್ನಾಟಕ ವಿವಿ, ಬೆಳಗಾವಿ ರಾಣಿ ಚನ್ನಮ್ಮ ವಿವಿ, ಬಳ್ಳಾರಿಯ ಕೃಷ್ಣದೇವರಾಯ ವಿವಿ ಹಾಗೂ ಕಲಬುರಗಿ ವಿವಿಗೆ ಕುಲಪತಿ ನೇಮಕಕ್ಕೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ವರದಿ ಕಳುಹಿಸಿತ್ತು. ಆದರೆ ಇದಕ್ಕೆ ರಾಜ್ಯಪಾಲರು ಕೆಲ ಸ್ಪಷ್ಟೀಕರಣ ಕೇಳಿದ್ದರು. ಉನ್ನತ ಶಿಕ್ಷಣ ಇಲಾಖೆಯಿಂದ ಅಗತ್ಯ ಉತ್ತರವನ್ನೂ ಕಳುಹಿಸಲಾಗಿತ್ತು.ಆದರೆ ರಾಜ್ಯಪಾಲರು ಸರ್ಕಾರ ನೀಡಿದ ಸ್ಪಷ್ಟನೆ ನಂತರವೂ ಕುಲಪತಿ ನೇಮಕ ವಿಚಾರ ದಲ್ಲಿ ಯಾವುದೇ ನಿಲುವು ಪ್ರಕಟಿಸಿಲ್ಲ. ಸರ್ಕಾರ ಕೊಟ್ಟ ಪಟ್ಟಿಯನ್ನು ಇದುವರೆಗೆ ತಿರಸ್ಕರಿ ಸಿಯೂ ಇಲ್ಲ, ಅಂಗೀಕಾರವನ್ನೂ ನೀಡಿಲ್ಲ.ರಾಜ್ಯಪಾಲರ ಈ ಮುಗುಮ್ ನಿರ್ಧಾರ ಸರ್ಕಾರಕ್ಕೆ ತೀವ್ರ ಇರಸುಮುರುಸು ಉಂಟು ಮಾಡಿದೆ. ಇನ್ನೊಂದೆಡೆ ಕಳೆದ ಒಂದು ವರ್ಷದಿಂದ ಕುಲಪತಿ ನೇಮಕದಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟ ಶೈಕ್ಷಣಿಕ ವಲಯದಲ್ಲಿ ಅಪಸ್ವರ
ಮೂಡುವುದಕ್ಕೆ ಕಾರಣವಾಗಿದೆ.


ರಾಜ್ಯದ ಆರು ವಿ.ವಿ.ಗಳಲ್ಲಿ ಒಂದು ವರ್ಷ ದಿಂದಲೂ ಹಂಗಾಮಿ ಕುಲಪತಿಗಳ ಕಾರುಬಾರು ನಡೆಯುತ್ತಿದ್ದು, ಅದರಿಂದ ಶೈಕ್ಷಣಿಕ ಚಟುವಟಿಕೆ ಗಳು ಕುಂಠಿತವಾಗುತ್ತಿರುವ ಕುರಿತು  ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ರಾಜ್ಯಪಾಲರ ರಾಜ್ಯದ ಆರು ವಿಶ್ವವಿದ್ಯಾಲಯ ಗಳಲ್ಲಿ ಕುಲಪತಿ ಹುದ್ದೆ ತುಂಬಲು ವಿಳಂಬವಾಗಿರುವುದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ. ಸಾಮಾಜಿಕ ನ್ಯಾಯ, ಶೈಕ್ಷಣಿಕ ಅರ್ಹತೆ, ಅವರ ಹಿನ್ನೆಲೆ ಆಧರಿಸಿ ರಾಜ್ಯ ಸರ್ಕಾರ ಅರ್ಹರ ಹೆಸರುಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಎರಡೂವರೆ ತಿಂಗಳ ಹಿಂದೆಯೇ ಕಳುಹಿಸಿದೆ. ಈ ವಿಷಯದಲ್ಲಿ ಸರ್ಕಾರ ವಿಳಂಬ ಮಾಡಿಲ್ಲ. ಯಾವ ಕಾರಣಕ್ಕಾಗಿ ಕುಲಪತಿ ನೇಮಕ ಮಾಡಿಲ್ಲವೆಂದು ನೀವು (ಮಾಧ್ಯಮದವರು) ರಾಜ್ಯಪಾಲರನ್ನೇ ಕೇಳಬೇಕು.
- ಆರ್.ವಿ.ದೇಶಪಾಂಡೆ, ಉನ್ನತ ಶಿಕ್ಷಣ ಸಚಿವ



ಇದೇ ಮೊದಲಲ್ಲ
ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಪ್ರಮುಖ ಆಡಳಿತಾತ್ಮಕ ವಿಚಾರ ಸಂಬಂಧ ಬಿಕ್ಕಟ್ಟು ಸೃಷ್ಟಿಯಾಗಿರುವುದು ಇದೇ ಮೊದಲಲ್ಲ. ವಿ.ಆರ್.ವಾಲಾ ಕರ್ನಾಟಕದ ರಾಜ್ಯ ಪಾಲರಾದ ನಂತರ ಏಳು ಬಾರಿ ಸರ್ಕಾರದ ಪ್ರಸ್ತಾಪವನ್ನು ಪ್ರಶ್ನಿಸಿದ್ದರು. ಇದು ರಾಜ ಭವನ ಮತ್ತು ಸರ್ಕಾರದ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

 ಕೆಪಿಎಸ್‍ಸಿ ಅಧ್ಯಕ್ಷರು, ಸದಸ್ಯರನೇಮಕ ಸಂಬಂಧ ಸರ್ಕಾರದ ಪ್ರಸ್ತಾಪಕ್ಕೆ ಸ್ಪಷ್ಟೀಕರಣ ಕೇಳಿದ್ದರು ಹಿಂದಿನ ಕೆಪಿಎಸ್‍ಸಿ ಸದಸ್ಯರವಿರುದ್ಧ ಅಭಿಯೋಜನೆಗೆ ಸರ್ಕಾರ ಮಾಡಿದ್ದ ಶಿಫಾರಸು ವಾಪಸ್

 ಬಿಬಿಎಂಪಿ ವಿಭಜನೆ ಸುಗ್ರೀವಾಜ್ಞೆ ವಾಪಸ್  ಪಂಚಾಯತ್ ರಾಜ್ ತಿದ್ದುಪಡಿವಿಧೇಯಕಕ್ಕೆ ಸ್ಪಷ್ಟೀಕರಣ ಕೋರಿಕೆ ಅಕ್ರಮ-ಸಕ್ರಮ ವಿಧೇಯಕವನ್ನು ಎರಡು ಬಾರಿ ವಾಪಸ್ ಕಳಿಸಿ ಮೂರನೇ ಬಾರಿಗೆ ಒಪ್ಪಿಗೆ  ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇಮಕ ತಿರಸ್ಕಾರ ವಿಶ್ವವಿದ್ಯಾಲಯ ಕುಲಪತಿನೇಮಕದಲ್ಲಿ ಸ್ಪಷ್ಟೀಕರಣ ಕೋರಿಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com