ಪ್ರಶ್ನೆಗಳ ಮೂಲಕ ಓದುಗರಲ್ಲಿ ಚಿಂತನೆ: ಸಿ.ಎನ್. ರಾಮಚಂದ್ರನ್

ಪ್ರತಿ ಬರಹದಲ್ಲೂ ಪ್ರಶ್ನೆಗಳನ್ನು ಎತ್ತುವ ಮೂಲಕ ವಿ.ಸೀತಾರಾಮಯ್ಯ ಅವರು ಓದುಗರಲ್ಲಿ ಚಿಂತನೆಗೆ ಮೂಡಿಸುತ್ತಿದ್ದಾರೆ ಎಂದು ವಿಮರ್ಶಕ ಸಿ.ಎನ್. ರಾಮಚಂದ್ರನ್ ಅಭಿಪ್ರಾಯಪಟ್ಟರು...
ವಾಡಿಯಾ ಸಂಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ನಿವೃತ್ತ ನ್ಯಾ. ಎಂ.ಎನ್.ವೆಂಕಟಾಚಲಯ್ಯ, ನಾಡೋಜ ಎಂ.ಎಚ್. ಕೃಷ್ಣಯ್ಯ
ವಾಡಿಯಾ ಸಂಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ನಿವೃತ್ತ ನ್ಯಾ. ಎಂ.ಎನ್.ವೆಂಕಟಾಚಲಯ್ಯ, ನಾಡೋಜ ಎಂ.ಎಚ್. ಕೃಷ್ಣಯ್ಯ
Updated on

ಬೆಂಗಳೂರು: ಪ್ರತಿ ಬರಹದಲ್ಲೂ ಪ್ರಶ್ನೆಗಳನ್ನು ಎತ್ತುವ ಮೂಲಕ ವಿ.ಸೀತಾರಾಮಯ್ಯ ಅವರು ಓದುಗರಲ್ಲಿ ಚಿಂತನೆಗೆ ಮೂಡಿಸುತ್ತಿದ್ದಾರೆ ಎಂದು ವಿಮರ್ಶಕ ಸಿ.ಎನ್. ರಾಮಚಂದ್ರನ್ ಅಭಿಪ್ರಾಯಪಟ್ಟರು.

ವಾಡಿಯಾ ಸಭಾಂಗ ಆಯೋಜಿಸಿದ್ದ ವಿ.ಸೀ.ಸಮಗ್ರ ಸಾಹಿತ್ಯ ಮಾಲೆಯ 21ನೇ ಸಂಪುಟ `ಸಂಕೀರ್ಣ ಬರೆಹ ಸಂಪುಟ ಭಾಗ -2' ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿ.ಸೀ. ಅವರು ತಮ್ಮ ಬರಹಗಳಲ್ಲಿ  ಸಾಹಿತ್ಯ ವಿವಿಧ ಪ್ರಕಾರಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಆಳವಾದ ಅಧ್ಯಯನದ ಮೂಲಕ ಅನೇಕ ಪ್ರಶ್ನೆಗಳನ್ನು ಎತ್ತಿದ್ದು, ಇದು ಸಂಕೀರ್ಣವಾದ ವಿಚಾರಗಳ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಅನೇಕ ಸಾಂದರ್ಭಿಕ ಲೇಖನಗಳು, ವಿಶೇಷ ಉಪನ್ಯಾಸಗಳು ಕೃತಿ ಯಲ್ಲಿದ್ದು,ರೋಚಕವಾದ ಬರಹಗಳಿವೆ. ಕೆಲವು ಲೇಖನಗಳಲ್ಲಿ ಊರುಗಳ ಇತಿಹಾಸ, ಸಾಂಸ್ಕೃತಿಕ ಕಾಲಘಟ್ಟದ ಚಿತ್ರಣ, ಸ್ಥಳ, ಅವುಗಳ ಹೆಸರುಗಳ ಬಗ್ಗೆ ವಿವರಣೆ, ವಿವಿಧ ಕಾಲ ಘಟ್ಟದ ಜನಸಾಮಾನ್ಯರ ಜೀವನ ಸೇರಿ ದಂತೆ ಓದುಗರನ್ನು ಚಿಂತನೆಗೆ ಹಚ್ಚುವ ಬರಹ ಗಳಿವೆ. ಪತ್ರಿಕಾರಂಗ ಉದ್ಯಮವಾಗಿ ಬೆಳೆದ ಬಗೆ, ವಾಣಿಜ್ಯ ಉದ್ದೇಶದೊಂದಿಗೆ ಜ್ಞಾನ ಪ್ರಸಾರ ಮಾಡಿದ್ದು ಹೇಗೆ ಎಂಬ ಬಗ್ಗೆ ವಿಶ್ಲೇಷಣೆಗಳಿವೆ ಎಂದರು.

ಕೆ.ಎನ್.ಬಾಲಕೃಷ್ಣ, ವೆಂಕಟಾ ಚಲಪತಿ, ಎಚ್.ವಿ.ವೆಂಕಟಸುಬ್ಬಯ್ಯ,  ಬಿಎಸ್‍ಎಸ್ ಕೌಶಿಕ್, ವಿಮಲಾ ರಂಗಾಚಾರ್, ಡಾ.ಕೆ.ಎಲ್.ಗೋಪಾಲಕೃಷ್ಣಯ್ಯ, ಪ್ರೊ. ಎಂ.ರಾಮಚಂದ್ರ, ಎ. ಈಶ್ವರಯ್ಯ, ಡಾ. ಪಿ. ವಿ.ನಾರಾಯಣ, ಬೆ.ಗೊ.ರಮೇಶ್, ಡಾ.ಕೃಷ್ಣ ಪರಮೇಶ್ವರ ಭಟ್ ಅವರನ್ನು  ಇದೇ ವೇಳೆ ಗೌರವಿಸಲಾಯಿತು. ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ ನಾಡೋಜ ಎಂ.ಎಚ್.ಕೃಷ್ಣಯ್ಯ, ಇತಿಹಾಸ ತಜ್ಞ ಪ್ರೊ. ಸುರೇಶ್ ಮೂನ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com