ಆಚಾರ್ಯ ಕಾಲೇಜಿಗೆ ಭೂಮಿ ನೀಡಿದ್ದು ಹೇಗೆ?

ನಗರದ ಹೆಸರಘಟ್ಟದ ಸೋಲದೇವನಹಳ್ಳಿ ಬಳಿ ಇರುವ ಜೆಎಂಜೆ ಶಿಕ್ಷಣ ಸಂಸ್ಥೆಗೆ (ಆಚಾರ್ಯ ತಾಂತ್ರಿಕ ವಿದ್ಯಾಲಯ) ಸರ್ಕಾರ ಯಾವ ಕಾನೂನಿನ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ನಗರದ ಹೆಸರಘಟ್ಟದ ಸೋಲದೇವನಹಳ್ಳಿ ಬಳಿ ಇರುವ ಜೆಎಂಜೆ ಶಿಕ್ಷಣ ಸಂಸ್ಥೆಗೆ (ಆಚಾರ್ಯ ತಾಂತ್ರಿಕ ವಿದ್ಯಾಲಯ) ಸರ್ಕಾರ ಯಾವ ಕಾನೂನಿನ ಅನ್ವಯ ಜಾಗವನ್ನು ಗುತ್ತಿಗೆಗೆ ನೀಡಲಾಗಿದೆ ಎಂಬುದನ್ನು ತಿಳಿಸಲು ಜಿಲ್ಲಾಧಿಕಾರಿ ಖುದ್ದು ಹೈಕೋರ್ಟ್‍ಗೆ ಹಾಜರಾಗುವಂತೆ ಆದೇಶಿಸಿದೆ.

ಜೆಎಂಜೆ ಶಿಕ್ಷಣ ಸಂಸ್ಥೆಗಳಿಗೆ 2003ರಲ್ಲಿ ಅಭಿವೃದ್ಧಿಗೆಂದು 13 ಎಕರೆ ಜಾಗವನ್ನು ಸರ್ಕಾರದಿಂದ ಗುತ್ತಿಗೆಗೆ ಪಡೆದುಕೊಂಡಿತ್ತು. ಈವರೆಗೂ ಯಾವುದೇ ರೀತಿ ಅಭಿವೃದ್ಧಿ ಕಾರ್ಯನಡೆಸದೆ ಖಾಲಿ ಬಿಟ್ಟ ಪರಿಣಾಮ ಸರ್ಕಾರ ಆ ಜಾಗವನ್ನು ಗುತ್ತಿಗೆಯಿಂದ ಹಿಂಪಡೆದಿತ್ತು. ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಶಿಕ್ಷಣ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

ವಿಚಾರಣೆ ನಡೆಸಿದ ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಜಿಲ್ಲಾ„ಕಾರಿ ಯಾವ ಕಾನೂನಿನ ಅಡಿಯಲ್ಲಿ ಈ ಜಾಗ ಗುತ್ತಿಗೆ ನೀಡಿದ್ದಾರೆ? ಗುತ್ತಿಗೆ ನೀಡಬೇಕಾದಲ್ಲಿ ಇದ್ದ ಆ ವಿಶೇಷ ಜಿಲ್ಲಾಧಿಕಾರಿ ಹೆಸರು ತಿಳಿಸಿ ಅವರು ಯಾರಿಗೆ, ಯಾವ ಉದ್ದೇಶಕ್ಕಾಗಿ ಮತ್ತು ಯಾರನ್ನು ಓಲೈಸಲು ಈ ರೀತಿ ಗುತ್ತಿಗೆ ನೀಡಿದ್ದಾರೆಂದು ಪತ್ತೆ ಹಚ್ಚುತ್ತೇನೆ ಎಂದು ಎಚ್ಚರಿಸಿದರು.
ಗುತ್ತಿಗೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕೋರ್ಟ್‍ಗೆ ಹಾಜರಾಗುವಂತೆ ಸೂಚಿಸಿ ಪೀಠ ವಿಚಾರಣೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com