ಬೇಕಾಬಿಟ್ಟಿ ರಸ್ತೆ ದಾಟಿದರೆ ಪೊಲೀಸ್ ಕೇಸ್
ಬೆಂಗಳೂರು: ಪಾದಚಾರಿಗಳು ಇನ್ನು ಮುಂದೆ ಅಡ್ಡಾದಿಡ್ಡಿ, ಅಂತಹ ಪಾದಚಾರಿಗಳ ಮೇಲೆ ನಗರ ಸಂಚಾರ ಪೊಲೀಸರು ದೂರು ದಾಖಲಿಸಲಿದ್ದಾರೆ. ಅದಕ್ಕಾಗಿ ಜೇವಾಕಿಂಗ್ (ಅಡ್ಡಾದಿಡ್ಡಿಯಾಗಿ ರಸ್ತೆ ದಾಟುವ ಪಾದಚಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದು) ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.
ಇಂತಹ ನೂತನ ಯೋಜನೆಯನ್ನು ನಗರ ಸಂಚಾರ ಪೊಲೀಸರು ಜಾರಿಗೆ ತರಲು ನಿರ್ಧರಿಸಿದ್ದು, ಪ್ರಾಥಮಿಕ ಹಂತವಾಗಿ ಪಾದಚಾರಿಗಳಿಗೆ ಅಪಾಯಕಾರಿ ಎಂದು ಗುರುತಿಸಿರುವ ನಗರದ ಹೊಸೂರು ರಸ್ತೆಯಲ್ಲಿ ಈ ಯೋಜನೆ ಅಳವಡಿಸಲಿದ್ದಾರೆ.
ಈ ಯೋಜನೆಯಡಿ ಆರೋಪಿಗಳ (ಪಾದಚಾರಿಗಳ) ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲು ನಿರ್ಧರಿಸಿದ್ದು, ಜೂನ್ 15ರಿಂದ ಈ ಯೋಜನೆ ಪ್ರಾಯೋಗಿಕವಾಗಿ ಕಾರ್ಯಾರಂಭವಾಗಿದೆ. ಹೊಸೂರು ರಸ್ತೆಯಲ್ಲಿ ಎಲ್ಲೆಂದರಲ್ಲೇ ರಸ್ತೆ ದಾಟುತ್ತಿದ್ದ ಪಾದಚಾರಿಗಳ ವಿರುದಟಛಿ ಒಟ್ಟು 28 ಜೇವಾಕಿಂಗ್ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದು ಸಂಬಂಧಪಟ್ಟ ನ್ಯಾಯಾಲಯಗಳ ಮುಂದೆ ಹಾಜರುಪಡಿಸಿದ್ದಾರೆ.
ಈ ಮೂಲಕ ಪಾದಚಾರಿಗಳಲ್ಲಿ ಸುರಕ್ಷಿತವಾಗಿ ರಸ್ತೆಗಳನ್ನು ಉಪಯೋಗಿಸಿಕೊಳ್ಳಲು ಬೇಕಾದ ಶಿಸ್ತು ಮತ್ತು ಅರಿವನ್ನು ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪಾದಚಾರಿಗಳು ರಸ್ತೆ ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಲು ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಲು ಕೋರಲಾಗಿದೆ ಎಂದು ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


