
ಬೆಂಗಳೂರು : ಕನ್ನಿಂಗ್‍ಹ್ಯಾಮ್ ರಸ್ತೆಯ ಕ್ವೀನ್ಸ್ ಕಾರ್ನರ್ ಅಪಾರ್ಟ್‍ಮೆಂಟ್ ಬಿರುಕು ಬಿಟ್ಟ ಪ್ರಕರಣ ಸಂಬಂಧ ಲೆಗೆಸಿ ಬಿಲ್ಡರ್ಸ್ ವಿರುದ್ಧ ಅಪಾರ್ಟ್‍ಮೆಂಟ್ ನಿವಾಸಿಯೊಬ್ಬರು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮಧ್ಯೆ, ಕಟ್ಟಡ ಬಿರುಕು ಬಿಡಲು ಬಿಡಬ್ಲ್ಯೂಎಸ್‍ಎಸ್‍ಬಿಯ ಪೈಪ್ ಒಡೆದು ಮಣ್ಣು ಕುಸಿತವಾಗಿರುವುದೇ ಕಾರಣ ಎಂದು
ಆರೋಪಿಸಿರುವ ಲೆಗೆಸಿ ಬಿಲ್ಡರ್ಸ್, ರಿಪೇರಿ ಕಾರ್ಯ ಮುಗಿಯುವವರೆಗೆ ಅಪಾರ್ಟ್‍ಮೆಂಟ್ ವಾಸಿಗಳು ಉಳಿದುಕೊಳ್ಳಲು ಹೋಟೆಲ್‍ನಲ್ಲಿ ವ್ಯವಸ್ಥೆ ಮಾಡಿಕೊಡುವುದಾಗಿ
ಭರವಸೆ ನೀಡಿದೆ. ಲೆಗೆಸಿ ಬಿಲ್ಡರ್ಸ್ ನಿರ್ಮಿಸುತ್ತಿರುವ ಕಾಮಗಾರಿ ಜಾಗದ ಬಳಿ ಪೈಪ್‍ಲೈನ್‍ನ ಮಾರ್ಗವನ್ನೇ ಬದಲಿಸಿರುವುದನ್ನು ಅಧಿಕಾರಿಗಳು ಪರಿಶೀಲನೆ ವೇಳೆ ಪತ್ತೆಹಚ್ಚಿದ್ದಾರೆ. ಹೈಗ್ರೌಂಡ್ಸ್‍ನಿಂದ ಶಿವಾಜಿನಗರಕ್ಕೆ ಸೇರುವ 15 ಇಂಚು ಪೈಪ್ ಲೈನ್ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅಳವಡಿಸಲಾಗಿತ್ತು. ಲೆಗೆಸಿ ಬಿಲ್ಡರ್ಸ್‍ಗೆ ಸೇರಿದ ಆಸ್ತಿಯ ಮಧ್ಯಭಾಗದಲ್ಲಿ ಈ ಪೈಪ್‍ಲೈನ್ ಹಾದುಹೋಗಿದ್ದು, ಶಿವಾಜಿನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‍ಗಳಲ್ಲಿ ಇದೂ ಒಂದು. ಕಟ್ಟಡ ನಿರ್ಮಿಸುವ ಜಾಗದ ಕೆಳಗೆ ಪೈಪ್‍ಲೈನ್ 100-150 ಅಡಿ ಉದ್ದದಲ್ಲಿ
ನೇರವಾಗಿ ಹಾದುಹೋಗಿದೆ. ಕಟ್ಟಡ ನಿರ್ಮಿಸಲು ಅಡಿಪಾಯ ಹಾಕುವ ವೇಳೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸುಮಾರು ಮೂರು ವರ್ಷಗಳ ಹಿಂದೆ `ಯು' ಆಕಾರದಲ್ಲಿ ಪೈಪ್‍ಗೆ ಪ್ರತ್ಯೇಕ ಸಂಪರ್ಕ ನೀಡಿ ಬದಲಿಸಲಾಗಿದೆ. ಆದರೆ ಇದರಿಂದ ನೀರು ಸರಬರಾಜಿಗೆ ಯಾವುದೇ ತೊಂದರೆಯಾಗದಿರುವುದರಿಂದ ಅಧತಿಕಾರಿಗಳ ಗಮನಕ್ಕೆ ಬಂದಿಲ್ಲ. ಜಲಮಂಡಳಿಗೆ ಮಾಹಿತಿ ಇಲ್ಲ: ಜಲಮಂಡಳಿಗೆ ಯಾವುದೇ
ಮಾಹಿತಿ ನೀಡದೆ ಪೈಪ್‍ಲೈನ್ ಬದಲಿಸಲಾಗಿದೆ. ಈಗ ಕಾಂಪೌಂಡ್ ಕುಸಿದು ಪೈಪ್‍ಗೆ ಹಾನಿಯಾದ ನಂತರ ಪೈಪ್ ಬದಲಿಸಿರುವುದು ಕಂಡುಬಂದಿದೆ. ಹೈಗ್ರೌಂಡ್ಸ್‍ನಿಂದ ಶಿವಾಜಿನಗರಕ್ಕೆ ಮತ್ತೊಂದು 300 ಎಂಎಂ ಪೈಪ್‍ಲೈನ್ ಅಳವಡಿಸಲಾಗಿದೆ. ಟೆಂಡರ್‍ಶ್ಯೂರ್ ಕಾಮಗಾರಿಯಡಿ ಮತ್ತೊಂದು ಪೈಪ್‍ಲೈನ್ ಹಾಕಲಾಗುತ್ತಿದ್ದು, ನೀರು ಸರಬರಾಜಿಗೆ ತೊಂದರೆಯಾಗಿಲ್ಲ. ಹಾನಿಯಾಗಿರುವ ಹಳೆಯ ಪೈಪ್‍ಲೈನ್ ದುರಸ್ತಿಯನ್ನು ಎರಡು ದಿನಗಳಲ್ಲಿ ಮಾಡಿ ಮುಗಿಸುವಂತೆ ಜಲಮಂಡಳಿ ಅಧ್ಯಕ್ಷ ಅಂಜುಂ ಫರ್ವೇಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾನಿಯಾಗಿರುವ ಪೈಪ್‍ಲೈನ್ ತೆಗೆದು ಹೊಸ ಪೈಪ್ ಅಳವಡಿಸಲು ಬುಧವಾರದಿಂದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಲಿ ಅಸ್ಕರ್ ರಸ್ತೆಯಿಂದ ಕನ್ನಿಂಗ್‍ಹ್ಯಾಮ್ ರಸ್ತೆಯವರೆಗೆ 172 ಮೀ. ಉದ್ದ ಲಿಂಕ್ ಪೈಪ್ ಅಳವಡಿಸಲಾಗುತ್ತದೆ.
ಬಿಲ್ಡರ್ಸ್ ಪ್ರತ್ಯಾರೋಪ: ಬಿಡಬ್ಲ್ಯೂಎಸ್‍ಎಸ್‍ಬಿ ನಿರ್ಲಕ್ಷ್ಯತನದಿಂದಲೇ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ಕ್ವೀನ್ಸ್ ಕಾರ್ನರ್ ಅಪಾರ್ಟ್‍ಮೆಂಟ್ ಗೋಡೆ ಬಿರುಕು ಬಿಟ್ಟಿದೆ. ದೋಷಪೂರಿತ ದೊಡ್ಡ ಪ್ರಮಾಣದ ಪೈಪ್‍ಗಳಿಂದ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ಮಣ್ಣು ಸಡಿಲಗೊಂಡು, ಲೆಗೆಸಿ ಬಿಲ್ಡರ್ಸ್ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ನುಗ್ಗಿದ್ದವು. ಈ ಸಂಬಂಧ ಪೈಪ್‍ಲೈನ್ ದುರಸ್ತಿಗೊಳಿಸಿ ನೀರು ಸೋರಿಕೆ ತಡೆಗಟ್ಟುವಂತೆ ಬಿಡಬ್ಲ್ಯೂಎಸ್‍ಎಸ್‍ಬಿಗೆ 2015, ಜೂನ್ 12ರಂದು ದೂರು ನೀಡಲಾಗಿತ್ತು. ಈ ಬಗ್ಗೆ ಅ„ಕಾರಿಗಳ ಗಮನ ಸೆಳೆದು ಅಪಾಯದ ಬಗ್ಗೆ ಮುನ್ಸೂಚನೆ ನೀಡಲಾಗಿತ್ತು. ಆದರೆ, ನಮ್ಮ
ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಈ ಬಗ್ಗೆ ಸೂಕ್ತ ಮುಂಜಾಗೃತ ಕ್ರಮದಿಂದ ನಮ್ಮ ಎಚ್ಚರಿಕೆಯನ್ನು ಅವರು ಗಂಬಿsೀರವಾಗಿ ಪರಿಗಣಿಸಲೇ ಇಲ್ಲ. ಅಷ್ಟು ಮಾತ್ರವಲ್ಲದೇ
ಆ ದಿನ ರಾತ್ರಿಯೂ ಕೂಡಾ ದೋಷಪೂರಿತ ಪೈಪ್ ಮೂಲಕವೇ ಅವರು ನೀರು ಸರಬರಾಜು ಮಾಡಿದರು. ಈ ಬಗ್ಗೆ ಮತ್ತೆ ಬಿಡಬ್ಲ್ಯೂಎಸ್‍ಎಸ್‍ಬಿ ಗಮನಕ್ಕೆ ತರಲಾಗಿತ್ತು ಎಂದು ಲೆಗೆಸಿಬಿಲ್ಡರ್ಸ್‍ನ ಪ್ರತಿನಿಧಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಿಪೇರಿ ಮಾಡಿಕೊಡುತ್ತೇವೆ: ಇದೇ ವೇಳೆ ಮಾನವೀಯತೆ ದೃಷ್ಠಿಯಿಂದ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ 40 ಕುಟುಂಬಗಳಿಗೆ ತಾತ್ಕಾಲಿಕವಾಗಿ ಹೋಟೆಲ್‍ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಅಲ್ಲದೇ ಕಟ್ಟಡಕ್ಕೆ ಉಂಟಾಗಿರುವ ಬಿರುಕನ್ನು ಸರಪಡಿಸಿಕೊಡುವ ಜವಾಬ್ದಾರಿಯನ್ನು ಲೆಗೆಸಿ ಸಂಸ್ಥೆಯೇ ತೆಗೆದುಕೊಂಡಿದೆ. ಕುಸಿತಗೊಂಡಿರುವ ಜಾಗವನ್ನು ಸರಪಡಿಸಿ ಕಟ್ಟಡಕ್ಕೆ ಉಂಟಾಗಿರುವ ಸಂಪೂರ್ಣ ಹಾನಿಯನ್ನು ನಾವೇ ಸರಿಪಡಿಸುತ್ತೇವೆ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವವರು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗೆ ಒಳಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಲೆಗೆಸಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯಭಾಸ್ಕರ್ ಭೇಟಿ: ಲೆಗೆಸಿ ಬಿಲ್ಡರ್ಸ್‍ಗೆ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿ 13 ಮಹಡಿ ಕಟ್ಟಡ ನಿರ್ಮಿಸಲು ಅನುಮತಿ ನೀಡಿರುವ ದಾಖಲೆಗಳನ್ನು ಪರಿಶೀಲಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಸೂಚಿಸಿದ್ದಾರೆ. ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿಜಯಭಾಸ್ಕರ್, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅ„ಕಾರಿಗಳ ತಂಡ ಸ್ಥಳ ಪರಿಶೀಲನೆ ಹಾಗೂ ದಾಖಲೆಗಳನ್ನು ಪರಿಶೀಲಿಸಲಿದ್ದು, ಕ್ರೋಢೀಕರಿಸಿದ ಮಾಹಿತಿಯನ್ನು ಬಿಬಿಎಂಪಿಗೆ ಸಲ್ಲಿಸಲಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆದಿರುವುದರಿಂದ ಪಕ್ಕದಲ್ಲಿರುವ ಕ್ವೀನ್ಸ್ ಕಾರ್ನರ್ ಹಾಗೂ ಐಟಿ ಕಂಪನಿ ಕಟ್ಟಡಗಳ ಅಡಿಪಾಯಕ್ಕೆ ಸ್ವಲ್ಪಮಟ್ಟಿಗೆ ಹಾನಿಯಾಗಿದೆ.
Advertisement