ಭೈರಪ್ಪನವರ ಮಾತು ಕೇಳಿ ಹೃದಯ ಚೂರಾಯ್ತು: ಜನಾರ್ದನ ಪೂಜಾರಿ

ಉಚಿತ ಅನ್ನಭಾಗ್ಯ ಕುರಿತು ಹೇಳಿಕೆ ನೀಡಿರುವ ಸಾಹಿತಿಗಳಾದ ಭೈರಪ್ಪ, ದೇ.ಜವರೇಗೌಡ ಮತ್ತು ಕುಂ.ವೀರಭದ್ರಯ್ಯ ನವರು ಕೀಳು ಮಟ್ಟದ...
ಜನಾರ್ಧನ ಪೂಜಾರಿ
ಜನಾರ್ಧನ ಪೂಜಾರಿ
Updated on

ಬೆಂಗಳೂರು: ಉಚಿತ ಅನ್ನಭಾಗ್ಯ ಕುರಿತು ಹೇಳಿಕೆ ನೀಡಿರುವ ಸಾಹಿತಿಗಳಾದ ಭೈರಪ್ಪ, ದೇ.ಜವರೇಗೌಡ ಮತ್ತು ಕುಂ.ವೀರಭದ್ರಪ್ಪ ನವರು ಕೀಳು ಮಟ್ಟದ ಮಾತುಗಳನ್ನಾಡಿ, ಇಡೀ ಬಡವರ್ಗದ ಜನತೆಯನ್ನು ಅಲ್ಲಗೆಳೆದಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಪಿಎಲ್ ಕಾರ್ಡ್ ದಾರರರಿಗೆ ಉಚಿತ ಅಕ್ಕಿ ಕಾರ್ಯಕ್ರಮವನ್ನು ಹೊರತಂದಿದ್ದಾರೆ. ಆದರೆ, ಈ ಕಾರ್ಯಕ್ರಮದ ಬಗ್ಗೆ ಸಾಹಿತಿಗಳಾದ ಎಸ್,ಎಲ್ ಭೇರಪ್ಪ, ದೇ.ಜವರೇಗೌಡ ಮತ್ತು ಕುಂ.ವೀರಭದ್ರಪ್ಪನವರು ಬಹಳ ಟೀಕಿಸಿದ್ದಾರೆ. ಅವರು ಯಾವ ಮಟ್ಟಕ್ಕೆ ಹೋಗಿದ್ದಾರೆಂದರೆ ಬಡವರಿಗೆ ಉಚಿತ ಅಕ್ಕಿ ನೀಡಿದರೆ ಸೋಮಾರಿಗಳಾಗುತ್ತಾರೆ ಎಂದು ಕೀಳು ಮಟ್ಟದ ಮಾತುಗಳನ್ನಾಡಿದ್ದಾರೆ ಎಂದು ಹೇಳಿದ್ದಾರೆ.

ಬಡವರಿಗೆ ಹೊಟ್ಟೆ ತುಂಬಾ ಪೌಷ್ಠಿಕಾಂಶದ ಆಹಾರ ಕೊಟ್ಟರೆ ಅವರು ಹೆಚ್ಚಾಗಿ ದುಡಿಯುತ್ತಾರೆ. ಇದು ಸಾಹಿತಿಗಳಿಗೆ ತಿಳಿದಿರಬೇಕಾದಂತದ್ದು, ಆದರೆ, ಹಸಿವಿನಿಂದ ಬಳಲುತ್ತಿರುವ ಕುಟುಂಬಕ್ಕೆ ಅನ್ನ ನೀಡಿದರೆ ಅವರು ಸೋಮಾರಿಗಳಾಗುತ್ತಾರೆ ಎಂಬ ಈ ಸಾಹಿತಿಗಳ ಮಾತುಗಳನ್ನು ಕೇಳಿ ನನ್ನ ಹೃದಯ ಚೂರಾಯ್ತು ಎಂದ ಅವರು, ಭೈರಪ್ಪನವೇರೇ ನಿಮಗೇನಾಗಿದೇ? ಒಬ್ಬ ಸಾಹಿತಿಯಾಗಿ ಈ ರೀತಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದಿದ್ದಾರೆ.

ಸುಷ್ಮಾ ಸ್ವರಾಜ್, ವಸುಂದರ ರಾಜ್ ವಜಾಕ್ಕೆ ಆಗ್ರಹ
ಒಬ್ಬ ಭ್ರಷ್ಟಾಚಾರಿಗೆ ಸಹಾಯ ಮಾಡಿರುವ ಸುಷ್ಮಾ ಸ್ವರಾಜ್ ಮತ್ತು ವಸುಂದರೆ ರಾಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಜಾಗೊಳಿಸಬೇಕು ಎಂದು ಜನಾರ್ಧನ ಪೂಜಾರಿ ಆಗ್ರಹಿಸಿದ್ದಾರೆ.

ಮೋದಿ ಅಧಿಕಾರಕ್ಕೆ ಬರುವ ಮೊದಲು ಭ್ರಷ್ಟಾಚಾರತೆಯನ್ನು ಹೊಡೆದೋಡಿಸುತ್ತೇವೆ ಎಂಬ ಭರವಸೆ ನೀಡಿದ್ದರು. ಆದರೆ, ಈಗ ಮಾತ್ರ ಏನು ತಿಳಿಯದಂತೆ ಏಕಿದ್ದಾರೆ. ಅವರ ಸಂಪುಟದವರೇ ಕೋಟಿಗಟ್ಟಲೇ ಭ್ರಷ್ಟಚಾರವೆಸಗಿರುವ ಲಲಿತ್ ಮೋದಿ ಬೆಂಬಲಕ್ಕೆ ನಿಂತಿರುವುದು ವಿಷಾದನೀಯ. ಈಗಾಗಲೇ ಜನರು ಮೋದಿ ಮೇಲೆ ಇಟ್ಟ ಭರವಸೆ ಕಳೆದುಕೊಂಡಿದ್ದಾರೆ. ಮತ್ತೆ ಆ ಭರವಸೆ ಉಳಿಸಿಕೊಳ್ಳಬೇಕಾದರೆ, ಮೋದಿ ಅವರು ಸುಷ್ಮಾ ಸ್ವರಾಜ್ ಮತ್ತು ವಸುಂದರ ರಾಜ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪೂಜಾರಿ ಒತ್ತಾಯಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com