
ಬೆಂಗಳೂರು: ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಕರ್ನಾಟಕ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಮುಚ್ಚುವಂತ ಸ್ಥಿತಿ ಎದುರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಖಾಸಗಿ ಪಾಲಿಟೆಕ್ನಿಕ್ ಸಂಘದ ಡಿ.ಎಸ್ ವೀರಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವಿದ್ಯಾರ್ಥಿಗಳು ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸೇರ್ಪಡೆಗೊಳ್ಳುತ್ತಿಲ್ಲ. ಡಿಪ್ಪೋಮೋ ವಿದ್ಯಾರ್ಥಿಗಳಿಗೆ ವಿಭಿನ ಷರತ್ತುಗಳನ್ನು ಸರ್ಕಾರ ನಿಗದಿಪಡಿಸಿದ್ದು, ಇದಕ್ಕೆ ಹೆದರಿ ವಿದ್ಯಾರ್ಥಿಗಳು ಡಿಪ್ಲೋಮೋ ಕೋರ್ಸ್ ತೆಗೆದುಕೊಳ್ಳಲು ಹಿಂದೇಟಾಗುತ್ತಿದ್ದಾರೆ ಎಂದು ದೂರಿದ್ದಾರೆ.
ಸರ್ಕಾರದ ಕೆಲಸಗಳಿಗೆ ಕನಿಷ್ಠ ಪಿಯುಸಿ ಶಿಕ್ಷಣವೆಂದು ನಿಗಧಿಪಡಿಸುವ ಷರತ್ತನ್ನು ಡಿಪ್ಲೋಮಾ ಶಿಕ್ಷಣಕ್ಕೂ ವಿಸ್ತರಿಸುವುದು ಡಿಪ್ಲೋಮೋ ಮೊದಲನೇ ವರ್ಷದ ಶಿಕ್ಷಣವನ್ನು ವಾರ್ಷಿಕ ಪದ್ಧತಿ ಮಾಡಿ ಪಿಯುಸಿ ತರಹ ಕಾಲೇಜು ಮಟ್ಟದ ಪರೀಕ್ಷೆಗಳನ್ನು ನಡೆಸವಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement