ಕೆನಡಾದಲ್ಲಿ ಜೂನ್ 27ರಂದು ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

ಹೃದಯವಾಹಿನಿ ಕರ್ನಾಟಕ ಮತ್ತು ಕನ್ನಡ ಕಸ್ತೂರಿ ರೇಡಿಯೋ ಕೆನಡಾ ಸಹಯೋಗದಲ್ಲಿ 11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕೆನಡಾದಲ್ಲಿ...
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಇಂ.ಕೆ.ಪಿ ಮಂಜುನಾಥ್ ಸಾಗರ್, ಸಂಗೀತ ನಿರ್ದೇಶಕ ಚಿಕ್ಕೇರಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಇಂ.ಕೆ.ಪಿ ಮಂಜುನಾಥ್ ಸಾಗರ್, ಸಂಗೀತ ನಿರ್ದೇಶಕ ಚಿಕ್ಕೇರಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಬೆಂಗಳೂರು: ಹೃದಯವಾಹಿನಿ ಕರ್ನಾಟಕ ಮತ್ತು ಕನ್ನಡ ಕಸ್ತೂರಿ ರೇಡಿಯೋ ಕೆನಡಾ ಸಹಯೋಗದಲ್ಲಿ 11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕೆನಡಾದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜೂನ್ 27 ಮತ್ತು 28 ರಂದು ನಡೆಯಲಿದೆ.

ಸಮ್ಮೇಳನ ಕೆನಡಾದ ಮಿನಿಸ್ಸೋಟ್ಟಾದಲ್ಲಿರುವ ಪಾರ್ಕ್ ಇನ್ನ ಬೈ ರ್ಯಾಡಿಸನ್ ನ ಗ್ರ್ಯಾಂಡ್ ವಿಕ್ಟೋರಿಯನ್ ಕನ್ವೆನ್ ಷನ್ ಸೆಂಟರ್ ನಲ್ಲಿ ನಡೆಯಲಿದ್ದು, ಸಚಿವ ಎಚ್ ಆಂಜನೇಯ ಉದ್ಘಾಟಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಇಂ.ಕೆ.ಪಿ ಮಂಜುನಾಥ್ ಸಾಗರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್ ಹನುಮಂತಯ್ಯ ವಹಿಸಲಿದ್ದು, ಹಿರಿಯ ಸಾಹಿತಿಗಳು, ನಟ ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದ ಅವರು, ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವೀಣಾವಾದನ, ಜಾನಪದ ನೃತ್ಯ, ಫ್ಯಾಶನ್ ಶೋ ಹಾಗೂ ವಿಚಾರಗೋಷ್ಠಿ, ಬಹುಭಾಷಾ ಕವಿಗೋಷ್ಠಿ ಸೇರಿದಂತೆ ಇತರೆ ಗೋಷ್ಠಿಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com