ಹೈ ಕೋರ್ಟ್ ಆದೇಶದನ್ವಯ ಚುನಾವಣೆ ನಡೆಸುತ್ತೇವೆ: ಸಚಿವ ಟಿ.ಬಿ. ಜಯಚಂದ್ರ

ಸರ್ಕಾರ ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತದೆ. ಹೈಕೋರ್ಟ್ ತೀರ್ಪನ್ನು ಆಧರಿಸಿ ಚುನಾವಣೆ ನಡೆಸುವುದು ಅನಿವಾರ್ಯ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ...
ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ
ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ
Updated on

ಬೆಂಗಳೂರು: ಸರ್ಕಾರ ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತದೆ. ಹೈಕೋರ್ಟ್ ತೀರ್ಪನ್ನು ಆಧರಿಸಿ ಚುನಾವಣೆ ನಡೆಸುವುದು ಅನಿವಾರ್ಯ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ನ್ಯಾಯಾಲಯ ಸರ್ಕಾರಕ್ಕೆ ದಂಡದ ಜತೆಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಚುನಾವಣೆ ಮುಂದೂಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. `2001ರ ಜನಗಣತಿ ಬದಲು 2011ರ ಜನಗಣತಿ ವರದಿ ಆಧರಿಸಿ ಮೀಸಲು ಮತ್ತು ವಾರ್ಡ್ ಮರು ವಿಂಗಡಣೆ
ಮಾಡಬೇಕು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯನ್ನು ಇದೇ ವರದಿ ಮೇಲೆ ನಡೆಸಿರುವುದರಿಂದ ಬಿಬಿಎಂಪಿಗೂ ಇದೇ ಸೂತ್ರ ಪಾಲನೆಯಾಗಲಿ' ಎಂದು ಪ.ಜಾತಿ,
ಪಂಗಡಗಳ ಆಯೋಗ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿತ್ತು.

2001ರ ಜನಗಣತಿ ವರದಿ ಆಧರಿಸಿ ಚುನಾವಣೆ ನಡೆಸುವುದರಿಂದ ಸಂವಿಧಾನದ 243 (ಟಿ) ವಿಧಿಗೆ ಧಕ್ಕೆಯಾಗುತ್ತದೆ ಎಂದು ನ್ಯಾ. ರಾಘವೇಂದ್ರ ಚೌಹಾಣ್ ಅವರ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಆಯೋಗ ಅರ್ಜಿ ಸಲ್ಲಿಸಿತ್ತು. ನಮಗೆ ನ್ಯಾಯಾಲಯದ ಭಾಗಶಃ ತೀರ್ಪು ಮಾತ್ರ ಲಭಿಸಿದೆ. ಆದಾಗ್ಯೂತೀರ್ಪಿಗೆ ಸರ್ಕಾರ ಗೌರವ ನೀಡುತ್ತದೆ. ದಂಡ ಹಾಗೂ ಮೇಲ್ಮನವಿ ವಿಚಾರ ಸಂಬಂಧ ನಾವು ವಸ್ತುಸ್ಥಿತಿ ಅಧ್ಯಯನ ನಡೆಸುತ್ತೇವೆ. ಜತೆಗೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ನ್ಯಾಯಾಲಯದ ತೀರ್ಪಿನ ಪ್ರಕಾರ ಸರ್ಕಾರ ಈಗ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ. ಈಗಾಗಲೇ ನಾವು ನ್ಯಾಯಾಲಯಕ್ಕೆ ಮೀಸಲು ಪಟ್ಟಿ ಸಲ್ಲಿಸಿದ್ದೇವೆ. ಶೇ.50ರಷ್ಟು ಮಹಿಳಾ ಮೀಸಲು ನೀತಿ ಜಾರಿಗೆ ತರುತ್ತಿದ್ದೇವೆ. ಈಗ ಮೀಸಲು ಪಟ್ಟಿ ಬದಲಾವಣೆ ಮಾಡುವುದು ಕಷ್ಟ ಎಂದು ಜಯಚಂದ್ರ ಅಭಿಪ್ರಾಯಪಟ್ಟರು.

ಆಯೋಗ ಸಜ್ಜು

ಬಿಬಿಎಂಪಿ ಚುನಾವಣೆಗೆ ರಾಜ್ಯಚುನಾವಣಾ ಆಯೋಗ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ ಎಂದು ಆಯೋಗದ ಆಯುಕ್ತ ಶ್ರೀನಿವಾಸಚಾರಿ ತಿಳಿಸಿದ್ದಾರೆ. ಚುನಾವಣೆ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪಿಗೂ ನಮಗೂ ಸಂಬಂಧವಿಲ್ಲ. ಏಕೆಂದರೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆಯೋಗ ಚುನಾವಣೆ ನಡೆಸಲು ಸಿದಟಛಿತೆ ಪೂರ್ಣಗೊಳಿಸಿದೆ. ಬಿಬಿಎಂಪಿ ಚುನಾವಣೆಯನ್ನು ಆ. 5ರ ಒಳಗಾಗಿ ನಡೆಸಬೇಕೆಂದು ಕೋರ್ಟ್ ಮೇ 5ರಂದೇ ಆದೇಶಿಸಿತ್ತು. ಅದರಂತೆ ಆಯೋಗ ಸಿದ್ಧತೆ ನಡೆಸುತ್ತಾ ಬಂದಿದೆ. ಚುನಾವಣೆ ನಡೆಸಲು ತೊಂದರೆ ಇಲ್ಲ ಎಂದರು.

ಚುನಾವಣಾ ದಿನಾಂಕ ಪ್ರಕಟಿಸುವ ಸಂಬಂಧ ಚರ್ಚೆ ನಡೆಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ದಿನಾಂಕ ಪ್ರಕಟಿಸುವ ತಯಾರಿ ಮಾಡಲಾಗುತ್ತಿದೆ ಎಂದು ಶ್ರೀನಿವಾಸಚಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com