
ಬೆಂಗಳೂರು: ಬಿರ್ಲಾ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ ಯಶ್ ಬಿರ್ಲಾ ಗ್ರೂಪ್ ಬೆಂಗಳೂರಿನಲ್ಲಿ ಬಿರ್ಲಾ ಹೋಮ್ಸ್ ಅನ್ನು ಘೋಷಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿರ್ಲಾ ಹೋಮ್ಸ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಸಿಂಗ್, ಬೆಂಗಳೂರಿನಲ್ಲಿ ಮನೆಗಳು ಅತಿ ದುಬಾರಿಯಾಗಿದ್ದು, ಸಾಮಾನ್ಯರ ಕೈಗೆಟಕುವುದು ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಬಿರ್ಲಾ ಹೋಮ್ಸ್ ಗೆ ಚಾಲನೆ ನೀಡಲಾಗಿದ್ದು, ಜನಸಮೂಹಕ್ಕೆ ಕೈಗೆಟಕುವ ಬೆಲೆಯಲ್ಲಿ ಸುಂದರ ಮನೆಗಳನ್ನು ಒದಗಿಸುವ ಪ್ರಯತ್ನವೇ ಬಿರ್ಲಾ ಹೋಮ್ಸ್ ಆಗಿದೆ ಎಂದು ಹೇಳಿದ್ದಾರೆ.
ಲಕ್ಷುರಿ ಬಜೆಟ್ ಮನೆಗಳನ್ನು ಅತಿ ಕಡಿಮೆ ದರದಲ್ಲಿ ನೀಡಲಾಗುವುದು. ಬಿರ್ಲಾ ಹೋಮ್ಸ್, ಯಶ್ ಬಿರ್ಲಾ ಗ್ರೂಪ್ನ ಭಾಗವಾಗಿದೆ. ಬಿರ್ಲಾ ಹೋಮ್ಸ್ ಮೊದಲ ಬ್ರಾಂಡ್ ಸಹಯೋಗವನ್ನು ಬೆಂಗಳೂರು ಮೂಲದ ಡೆವಲಪರ್ ಆದ ಆಪಲ್ ಸ್ಪೈಲ್ ಪ್ರೈ.ಲಿ.ನ ಜೊತೆಗೆ ಘೋಷಿಸಿದೆ. ಮೈಸೂರು ರಸ್ತೆಯಲ್ಲಿ ಬಿರ್ಲಾ ಆಪಲ್ ಸ್ಪೈರ್ ಲಕ್ಷುರಿ ಮನೆಗಳು ದೊರೆಯಲಿವೆ ಎಂದು ಅವರು ತಿಳಿಸಿದ್ದಾರೆ.
Advertisement