ರೈತರಿಗೆ ಹಾಲು ದರ ಇಳಿಕೆ: ಕೋಡಿಹಳ್ಳಿ ಚಂದ್ರಶೇಖರ್ ಖಂಡನೆ

ಒಂದೆಡೆ ಹಾಲಿನ ಉತ್ಪಾದನೆಯ ಜಾಸ್ತಿಯಾಗುತ್ತಿದ್ದರೆ ರಾಜ್ಯದ ಹಾಲು ಒಕ್ಕೂಟಗಳು ಮಾತ್ರ ರೈತರಿಗೆ ನೀಡಲಾಗುತ್ತಿದ್ದ ಹಾಲಿನ ದರದಲ್ಲಿ...
ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು
ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು

ಬೆಂಗಳೂರು: ಒಂದೆಡೆ ಹಾಲಿನ ಉತ್ಪಾದನೆಯ ಜಾಸ್ತಿಯಾಗುತ್ತಿದ್ದರೆ ರಾಜ್ಯದ ಹಾಲು ಒಕ್ಕೂಟಗಳು ಮಾತ್ರ ರೈತರಿಗೆ ನೀಡಲಾಗುತ್ತಿದ್ದ ಹಾಲಿನ ದರದಲ್ಲಿ 1 ರುಪಾಯಿಂದ 4 ರುಪಾಯಿವರೆಗೆ ಕಡಿತ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್ ಅವರು, ಹಾಲಿನ ಉತ್ಪಾದನೆ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಹಾಲಿನ ಬೆಲೆ ಮಾತ್ರ ಕಡಿಮೆಯಾಗುತ್ತಿದೆ. ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ರೈತರಿಗೆ 35 ರುಪಾಯಿ ಖರ್ಚಾಗುತ್ತೆ. ಬೆಲೆ ಮಾತ್ರ 20ರಿಂದ 25 ರುಪಾಯಿ ಆಸುಪಾಸಿನಲ್ಲೇ ಇದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ವಿರೋಧಿಸಿ ಜೂನ್ 29 ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com