ಕೆಸಿಡಿಸಿಯಲ್ಲಿ ಬಾಲಕ ಸಾವು ನಾಲ್ವರು ಸಿಬ್ಬಂದಿ ಬಂಧನ

ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮ (ಕೆಸಿಡಿಸಿ) ಕಾರ್ಖಾನೆ ಆವರಣದಲ್ಲಿ ಬಾಲಕ ನರಸಿಂಹಮೂರ್ತಿ (10) ಸಾವಿನ ಪ್ರಕರಣ ಸಂಬಂಧ ಕಾರ್ಖಾನೆಯ ನಾಲ್ವರನ್ನು ಎಚ್ಎಸ್‍ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...
ಕೆಸಿಡಿಸಿಯಲ್ಲಿ ಬಾಲಕ ಸಾವು ನಾಲ್ವರು ಸಿಬ್ಬಂದಿ ಬಂಧನ (ಸಾಂದರ್ಭಿಕ ಚಿತ್ರ)
ಕೆಸಿಡಿಸಿಯಲ್ಲಿ ಬಾಲಕ ಸಾವು ನಾಲ್ವರು ಸಿಬ್ಬಂದಿ ಬಂಧನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮ (ಕೆಸಿಡಿಸಿ) ಕಾರ್ಖಾನೆ ಆವರಣದಲ್ಲಿ ಬಾಲಕ ನರಸಿಂಹಮೂರ್ತಿ (10) ಸಾವಿನ ಪ್ರಕರಣ ಸಂಬಂಧ ಕಾರ್ಖಾನೆಯ ನಾಲ್ವರನ್ನು ಎಚ್ಎಸ್‍ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಬಾಲಕನ ಸಾವು ಸಂಭವಿಸಿದೆ. ಹೀಗಾಗಿ ಉತ್ಪಾದನಾ ವಿಭಾಗದ ವ್ಯವಸ್ಥಾಪಕ ನಾಗರಾಜ್, ಮೇಲ್ವಿಚಾರಕ ಮುನಿರಾಜು, ಕಸ ಸಂಸ್ಕರಣ ಯಂತ್ರದ ಆಪರೇಟರ್ ಧರ್ಮೇಂದ್ರ ಹಾಗೂ ಜೆಸಿಬಿ ಆಪರೇಟರ್ ಬಸುದೇಬ್‍ರಾಯ್ ಎಂಬುವರನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೇಪಟ್ ತಿಳಿಸಿದರು.

ಬಾಲಕನ ತಲೆ, ಕಾಲು ಹಾಗೂ ಮರ್ಮಾಂಗಕ್ಕೆ ಗಾಯಗಳಾಗಿದ್ದವು. ಜತೆಗೆ ಮೂಳೆ ಮುರಿತಗೊಂಡಿದೆ. ಆತ ಕಸ ಸಂಸ್ಕರಣ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಶವಪರೀಕ್ಷೆ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

ಸೋಮಸುಂದರಹಳ್ಯ ಸಮೀಪದ ಕೆಸಿಡಿಸಿ ಸಮೀಪದ ಶೆಡ್‍ನಲ್ಲಿ ತಾಯಿ ಜತೆ ನೆಲೆಸಿದ್ದ ಬಾಲಕ, ಗುರುವಾರ ಮಧ್ಯಾಹ್ನ ಕಾರ್ಖಾನೆ ಆವರಣದಲ್ಲಿರುವ ಕಸ ಸಂಸ್ಕರಣಯಂತ್ರದ ಬಳಿ ಶವವಾಗಿ ಪತ್ತೆಯಾಗಿದ್ದ. ಕಾರ್ಖಾನೆ ಸಿಬ್ಬಂದಿಯ ದೌರ್ಜನ್ಯದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಬಾಲಕನ ತಾಯಿ ವರಲಕ್ಷ್ಮೀ ದೂರು ಕೊಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com