
ಬೆಂಗಳೂರು: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ? ಹಾಗಾದರೆ ಜುಲೈ 15ರವರೆಗೆ ಇರುವ ಅವಕಾಶ ಬಳಸಿಕೊಂಡು ಕೂಡಲೇ ಅರ್ಜಿ ಸಲ್ಲಿಸಿ.
ಬಿಬಿಎಂಪಿ ಚುನಾವಣೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅಂತಿಮ ದಿನದವರೆಗೂ ಸಾರ್ವಜನಿಕರಿಗೆ ಅವಕಾಶವಿದೆ. ಬಿಬಿಎಂಪಿಯ 8 ವಲಯಗಳ 198 ವಾರ್ಡ್ ಗಳ ವಾರ್ಡ್ ಕಚೇರಿ, ಬಿಬಿೆಪಿ ಸಹಾಯಕ ಕಂದಾಯಾಧಿಕಾರಿ ಕಚೇರಿ, ಬೆಂಗಳೂರು-1 ಕೇಂದ್ರ, ಚುನಾವಣಾ ಆಯೋಗದ ಕಚೇರಿ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅರ್ಜಿ ನೀಡಿ ಪಟ್ಟಿಗೆ ಸೇರ್ಪಡೆಯಾಗಬಹುದು.
ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವುದಾದರೆ ಅರ್ಜಿ 'ನಮೂನೆ 6, ಈಗಾಗಲೇ ಪಟ್ಟಿಯಲ್ಲಿರುವ ಹೆಸರು ತೆಗೆದು ಹಾಕುವುದಾದರೆ ನಮೂನೆ 7 ಹಾಗೂ ತಿದ್ದುಪಡಿ ಮಾಡುವುದಾದರೆ ನಮೂನೆ 8 ರಲ್ಲಿ ವಿವರಗಳನ್ನು ಭರ್ತಿ ಮಾಡಬೇಕು. ವರ್ಗಾವಣೆ ಮಾಡಿಕೊಳ್ಳಲು ಮೊದಲು ನಮೂನೆ 7ರ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಿ, ಹೆಸರು ರದ್ದು ಮಾಡಬೇಕು. ನಂತರ ಹೊಸದಾಗಿ ನಮೂನೆ 6ರ ಅರ್ಜಿ ಪಡೆದು ಸಲ್ಲಿಸಬೇಕು.
ಆನ್ ಲೈನ್ ಅರ್ಜಿ:
http://www.voterreg.kar.nic.in ಭೇಟಿ ನೀಡಿ ನ್ಯೂ ಯೂಸರ್ ಪಕ್ಕಕ್ಕಿರುವ ರಿಜಿಸ್ಟರ್ ಆಯ್ಕೆಯ ಮೂಲಕ ಹೊಸದಾಗಿ ಅಕೌಂಟ್ ತೆರೆಯಬೇಕು. ಇಲ್ಲಿ ಹೆಸರು, ಇ-ಮೇಲ್ ಐಡಿ, ಮೊಬೈಲು ಸಂಖ್ಯೆ ದಾಖಲಿಸಿ ಲಾಗಿನ್ ಮಾಡಿದರೆ, ವೆಬ್ ಸೈಟ್ ನಿಂದ ಹೊಸದಾಗಿ ಸೃಷ್ಟಿಯಾದ ಪಾಸ್ ವರ್ಡ್ ಹಾಗೂ ಐಡಿ, ಮೊಬೈಲು ಹಾಗೂ ಇಮೇಲ್ ಗೆ ಬರುತ್ತದೆ. ಇದೇ ಐಡಿ ಹಾಗೂ ಪಾಸ್ ವರ್ಡ್ ಬಳಸಿ ವೆಬ್ ಸೈಟ್ ಗೆ ಲಾಗಿನ್ ಆಗಬೇಕು. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಅರ್ಜಿ ಲಭ್ಯವಿದೆ.
ಮನೆ ದಾಖಲೆ ಪತ್ರ, ವಯಸ್ಸಿನ ದಾಖಲೆಪತ್ರ(ಅಂಕಪಟ್ಟಿ ಅಥವಾ ಇತರ ದಾಖಲೆ), ರೇಷನ್ ಕಾರ್ಡು, ಭಾವಚಿತ್ರ ಸೇರಿದಂತೆ ಅರ್ಜಿಯಲ್ಲಿ ಹೆಸರಿಸಿರುವ ಅಗತ್ಯ ದಾಖಲೆಗಳನ್ನು ಕಂಪ್ಯೂಚರ್ ಮೂಲಕ ಅಪ್ ಲೋಡ್ ಮಾಡಬೇಕು. ವಿವರಗಳನ್ನು ಭರ್ತಿ ಮಾಡಿದ ಬಳಿಕ ಅಕ್ ನಾಲೆಡ್ಜ್ ಮೆಂಟ್ ಎಂಬ ದಾಖಲೆ ಸೃಷ್ಟಿಯಾಗುತ್ತದೆ. ಇದನ್ನು ಪ್ರಿಂಟ್ ತೆಗೆದು ಸಹಿ ಮಾಡಿ, ಸಂಬಂಧಪಟ್ಟ ಚುನಾವಣಾಧಿಕಾರಿ ಕಚೇರಿಗೆ ಅಂಚೆ ಮೂಲಕ ಕಳಿಸಬೇಕು. ನಂತರ ಸಂಬಂಧಿಸಿದ ವಾರ್ಡ್ ಕಚೇರಿ, ಚುನಾವಣಾಧಿಕಾರಿ ಕಚೇರಿಯಲ್ಲಿ ಫೋನ್ ಮೂಲಕವೇ ವಿಚಾರಿಸಿದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. www.ceokarnataka.kar.nic.inನಲ್ಲಿರುವ ಆಯ್ಕೆಯಲ್ಲಿ ಜಿಲ್ಲೆ ಹಾಗೂ ಮೊಬೈಲ್ ಸಂಖ್ಯೆ ನೀಡುವ ಮೂಲಕ ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬಹುದು. ಬಿಬಿಎಂಪಿಯ 198 ವಾರ್ಡ್ ಕಚೇರಿಗಳಲ್ಲೂ ಈ ಬಗ್ಗೆ ಮಾಹಿತಿ ಪಡೆಯಬಹುದು.
Advertisement