ಮಾರ್ಚ್ ಅಂತ್ಯಕ್ಕೆ ಕೃಷಿಗೆ 57 .853 ಕೋಟಿ ಸಾಲ

ರಾಜ್ಯದ ಆದ್ಯತಾ ರಂಗಗಳ ಬೇಡಿಕೆಗೆ ಅನುಸಾರವಾಗಿ 2015 ಮಾರ್ಚ್ ಅಂತ್ಯದ ವೇಳೆಗೆ 10 ,00 ,283 ಕೋಟಿ ಸಾಲವನ್ನು ಬ್ಯಾಂಕ್ ಗಳು ನೀಡಿವೆ- ಸಿಂಡಿಕೇಟ್ ಬ್ಯಾಂಕ್ ಸಿಇಒ
ಮಾರ್ಚ್ ಅಂತ್ಯಕ್ಕೆ ಕೃಷಿಗೆ 57 .853 ಕೋಟಿ ಸಾಲ

ಬೆಂಗಳೂರು: ರಾಜ್ಯದ ಆದ್ಯತಾ ರಂಗಗಳ ಬೇಡಿಕೆಗೆ ಅನುಸಾರವಾಗಿ 2015 ಮಾರ್ಚ್ ಅಂತ್ಯದ ವೇಳೆಗೆ 10 ,00 ,283 ಕೋಟಿ ಸಾಲವನ್ನು ಬ್ಯಾಂಕ್ ಗಳು ನೀಡಿವೆ ಎಂದು ಸಿಂಡಿಕೇಟ್ ಬ್ಯಾಂಕ್ ಸಿಇಒ ಹಾಗೂ ರಾಜ್ಯಮಟ್ಟದ ಬ್ಯಾಂಕರ್ ಗಳ ಸಮಿತಿ ಅಧ್ಯಕ್ಷ ಅರುಣ್ ಶ್ರೀವಾಸ್ತವ ಹೇಳಿದ್ದಾರೆ.

ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಮಟ್ಟದ 131 ನೇ ಬ್ಯಾಂಕರ್ ಗಳ ಸಭೆಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 89 ,821 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ 1 ,00 ,283 ಕೋಟಿ ಸಾಲವನ್ನು ಆದ್ಯತಾ ರಂಗಕ್ಕೆ ನೀಡಲಾಗಿದ್ದು ಶೇ.111 .65  ರಷ್ಟು ಪ್ರಗತಿ  ಸಾಧಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ 57 , 853 ಕೋಟಿ ಸಾಲ ವಿತರಿಸಿ ಶೇ.101 .6 ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಬೆಳೆ ಸಾಲಕ್ಕೆ ರೂ. 39 ,255 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ 38 , 506 ಕೋಟೊ ಸಾಲ ವಿತರಿಸಿ ಶೇ.98 .10 ರಷ್ಟು ಪ್ರಗತಿ ಸಾಧಿಸಲಾಗಿದೆ. ಕಿರು ಉದ್ದಿಮೆ ಹಾಗೂ ಇತರೆ ಆದ್ಯತಾ ರಂಗದಲ್ಲಿ ಶೇ.130 .26  ರಷ್ಟು ಸಾಧನೆ ಮಾಡಲಾಗಿದೆ ಎಂದರು.

2015 -16  ನೇ ಸಾಲಿನಲ್ಲಿ ಅದ್ಯಾತ ರಂಗಕ್ಕೆ 1 ,12 , 460  ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ನಬಾರ್ಡ್ ನಿರೀಕ್ಷಣಾ ಗುರಿ 1 ,08000  ಕೋಟಿಗೂ ಮಿಗಿಲಾಗಿದೆ. ಕೃಷಿ ಕ್ಷೇತ್ರದ ಪಾಲು 62 ,620  ಎಂದು ನಿರೀಕ್ಷಿಸಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com