ಗ್ರೇಡಿಂಗ್ ಗೆ ಬದಲಾದ ವಿಟಿಯು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇನ್ನು ಮುಂದೆ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ(ಸಿಬಿಸಿಎಸ್) ಪದ್ಧತಿಯನ್ನು ಅಳಾವಡಿಸಿಕೊಳ್ಳುತ್ತಿದೆ.
ಗ್ರೇಡಿಂಗ್ ಗೆ ಬದಲಾದ ವಿಟಿಯು
Updated on

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇನ್ನು ಮುಂದೆ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ(ಸಿಬಿಸಿಎಸ್) ಪದ್ಧತಿಯನ್ನು ಅಳಾವಡಿಸಿಕೊಳ್ಳುತ್ತಿದ್ದು ವಿದ್ಯಾರ್ಥಿಗಳಿಗೆ ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಲಿದೆ.

2015 ರಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ಪದ್ಧತಿ ಅನ್ವಯವಾಗುವುದು. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಸೂಚನೆಯಂತೆ ಸಿಬಿಸಿಎಸ್ ಪದ್ಧತಿಯನ್ನು ಆರಂಭಿಸಲಾಗುತ್ತಿದ್ದು, ಇದನ್ನು ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ವಿಟಿಯು ಈಗ ನಡೆಸಿರುವ ಪೂರ್ವ ತಯಾರಿ ಮಾಹಿತಿಯಂತೆ ಸಿಬಿಸಿಎಸ್ವ್ಯವಸ್ಥೆಯಲ್ಲಿ ಓ ನಿಂದ ಎಫ್ ವರೆಗೆ ಎಂಟು ವರ್ಣಮಾಲೆಗಳು ಮಾಪನ ಸೂಚಕವಾಗಿರುತ್ತವೆ. ಉದಾಹರಣೆಗೆ ಓ ಎಂದರೆ ಅಸಮಾನ್ಯ ಸಾಧನೆ. ಎಫ್ ಎಂದರೆ ಅನುತ್ತೀರ್ಣ. 10 ಪಾಯಿಂಟ್ ಗಳಿಸಿದ ವಿದ್ಯಾರ್ಥಿ ಓ ಮಾನದಂಡಕ್ಕೆ ಅರ್ಹನಾಗುತ್ತಾನೆ. ಹಾಲಿ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನೇ ನಮೂದಿಸಿ ಶೇಕಡಾವಾರು ನಿಗದಿಪಡಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ವಿದ್ಯಾರ್ಥಿ ಪಡೆದ ಅಂಕಗಳನ್ನು ಎಐಸಿಟಿಇ ರೂಪಿಸಿರುವ ಸಮೀಕರಣದೊಳಗೆ ಮಿಳಿತಗೊಳಿಸಿ ಗ್ರೇಡಿಂಗ್ ನೀಡಲಾಗುತ್ತದೆ.

ಏಕೆ ಹೊಸ ವ್ಯವಸ್ಥೆ: ಈ ಕುರಿತು ಮಾಹಿತಿ ನೀಡಿರುವ ವಿಟಿಯು ಕುಲಪತಿ ಡಾ.ಹೆಚ್ ಮಹೇಶಪ್ಪ, ಸಿಬಿಸಿಎಸ್ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂಬುದು ಯುಜಿಸಿಯ ಮಾರ್ಗದರ್ಶನ. ನಾವು ಈ ಪದ್ಧತಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಆಲೋಚನೆ ಇತ್ತು. ಮಾರ್ಚ್ ನಲ್ಲಿ ಯುಜಿಸಿ ಈ ಸಂಬಂಧ ಆದೇಶ ಹೊರಡಿಸಿತು. ಅದರಂತೆ ಈ ವರ್ಷದಿಂದ ಹೊಸ ಪದ್ಧತಿ ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ಅಂಕ ನೀಡುವ ವಿಧಾನ ಇರುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಗ್ರೇಡಿಂಗ್ ಪದ್ಧತಿ ಇರುತ್ತದೆ. ಸಿಬಿಸಿಎಸ್ ವ್ಯವಸ್ಥೆಗೆ ತಕ್ಕಂತೆ ಪಠ್ಯ ಕ್ರಮವನ್ನು ರೂಪಿಸಲಾಗಿದೆ. ಮೊದಲೆರಡು ಸೆಮಿಸ್ಟರ್ ನ ಪಠ್ಯಕ್ರಮವೂ ಸಿದ್ಧವಾಗಿದೆ ಎಂದು ಅವರು ವಿವರಿಸಿದ್ದಾರೆ.

ವಿದೇಶಗಳಲ್ಲಿರುವಂತೆ ಈ ಪದ್ಧತಿಯನ್ನು ದೇಶದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಯುಜಿಸಿಯ ಸೂಚನೆ. ಈ ಪದ್ಧತಿ ಅಳವಡಿಕೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com