ಅನ್ನಭಾಗ್ಯಕ್ಕೆ ನೀಡಿದ ಹಣದಲ್ಲಿ ರು.1,300 ಕೋಟಿ ಉಳಿಕೆ

ಅನ್ನಭಾಗ್ಯ ಯೋಜನೆಗಾಗಿ ಸರ್ಕಾರ ಈ ವರ್ಷ ಬಿಡುಗಡೆ ಮಾಡಿದ್ದ ಹಣದಲ್ಲಿ ರು.1,300 ಕೋಟಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಳಿತಾಯ ಮಾಡಿದೆ...
ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್
ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಅನ್ನಭಾಗ್ಯ ಯೋಜನೆಗಾಗಿ ಸರ್ಕಾರ ಈ ವರ್ಷ ಬಿಡುಗಡೆ ಮಾಡಿದ್ದ ಹಣದಲ್ಲಿ ರು.1,300 ಕೋಟಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಳಿತಾಯ ಮಾಡಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ್ದು, ಇಲಾಖೆಯಲ್ಲಿ ತೆಗೆದುಕೊಂಡ ಕೆಲವು ಸುಧಾರಣಾ ಕ್ರಮಗಳಿಂದ ಭಾರಿ ಪ್ರಮಾಣದಲ್ಲಿ ಉಳಿ ತಾಯ ಸಾಧ್ಯವಾಗಿದೆ. ಯೋಜನೆಯ ಜಾರಿ ಮತ್ತು ಗುಣಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

2014-15ನೇ ಸಾಲಿನಲ್ಲಿ ಆಯವ್ಯಯದಲ್ಲಿ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ರು.4,360 ಕೋಟಿ ನಿಗದಿಗೊಳಿಸಿತ್ತು. ಆದರೆ ಇಲಾಖೆ ಈ ವರ್ಷ ಹಲವು ಮುಂದಾಲೋಚನಾ ಕ್ರಮ ತೆಗೆದುಕೊಂಡಿದೆ. 8.74 ಲಕ್ಷ ಅನರ್ಹ ಪಡಿತರದಾರರನ್ನು ಗುರಿತಿಸಲಾಗಿದ್ದು, ಇದರಿಂದ ರು.10 ಕೋಟಿ ಉಳಿತಾಯವಾಗಿದೆ. ಅಕ್ಕಿ ಮತ್ತು ಗೋಧಿ ಖರೀದಿಯಲ್ಲಿ ಉಳಿತಾಯವಾಗಿದೆ.

ಕೇಂದ್ರ ಸರ್ಕಾರ 2,17,403 ಮೆಟ್ರಿಕ್ ಟನ್ ಆಹಾರ ಧಾನ್ಯ ಖರೀದಿಗೆ ಬಿಡುಗಡೆ ಮಾಡುವ ಹಣದಲ್ಲಿ ಸಂಪೂರ್ಣವಾಗಿ ಅಕ್ಕಿ ಖರೀದಿಸಲಾಗಿದ್ದು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ತೆಗೆದುಕೊಂಡಿದ್ದೇವೆ. ಒಟ್ಟಾರೆಯಾಗಿ ಇಲಾಖೆ ತೆಗೆದುಕೊಂಡ ಬಿಗು ಕ್ರಮಗಳಿಂದ ಅನುದಾನ ಸದ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ಪೌಷ್ಠಿಕ ಆಹಾರ: ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾದ ಪ್ರಕಾರ ಎಪಿಎಲ್ ಕಾರ್ಡ್‍ದಾರರಿಗೂ ಈ ವರ್ಷದಿಂದ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಈ ಬಗ್ಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಪ್ರಸಕ್ತ ಸಾಲಿನ ಬಜೆಟ್‍ನಲ್ಲೇ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಪ್ರಕಟಿಸುತ್ತಾರೆ. ದರ ಮತ್ತು ಪ್ರಮಾಣದ ಬಗ್ಗೆ ಬಜೆಟ್‍ನಲ್ಲೇ ಉತ್ತರ ಲಭಿಸಲಿದೆ. ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com