
ಬೆಂಗಳೂರು: ಧರ್ಮರಾಯ ಸ್ವಾಮಿ ದೇವಾಲಯದ ಕರಗ ಮಹೋತ್ಸವವನ್ನು ಏ. 4ರ ಬದಲು ಏ. 3ರಂದೇ ನಡೆಸಲಾಗುವುದು ಎಂದು ಬೆಂಗಳೂರು ನಗರ ಮುಜರಾಯಿ ಸಹಾಯಕ ಆಯುಕ್ತ ಜಯಪ್ರಕಾಶ್ ತಿಳಿಸಿದ್ದಾರೆ. ಈ ಮೊದಲು ಏ. 4ರಂದು ಕರಗ ಶಕ್ತ್ಯೋತ್ಸವವನ್ನು ಆಯೋಜಿಸಲಾಗಿತ್ತು. ಈ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಆದರೆ, ಧಾರ್ಮಿಕ ಅಡಚಣೆ ಉಂಟಾಗುವುದರಿಂದ ಒಂದು ದಿನ ಮೊದಲೇ ಕಾರ್ಯಕ್ರಮವನ್ನು
ಆಜಿಸಲಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಸಮಿತಿ ಸದಸ್ಯ ಔರಾಗಿನಿ ರಾಮಚಂದ್ರ ಮಾತನಾಡಿ, ಏ. 4ರಂದು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಚಂದ್ರಗ್ ರಹಣವಿರುತ್ತದೆ. ಜತೆಗೆ ಚೈತ್ರ ಶುಕ್ಲ ಪೂರ್ಣಿಮೆ ಅಂದು ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಚಂದ್ರಗ್ರಹಣ ಸಂದರ್ಭದಲ್ಲಿ ಕರಗವನ್ನು ನಡೆಸಲಾಗುವುದಿಲ್ಲ. ಹೀಗಾಗಿ ಹೇಗೂ ಏ. 3ರಿಂದಲೇ ಪೂರ್ಣಿಮೆ ಪ್ರಾರಂಭವಾಗುವುದರಿಂದ ಅಂದೇ ಉತ್ಸವ ನಡೆಸುವ ಬಗ್ಗೆ ದೇವಸ್ಥಾನ ಆಡಳಿತ ಸಮಿತಿ ಹಾಗೂ ಉತ್ಸವ ಸಮಿತಿ ನಿರ್ಧರಿಸಿದೆ ಎಂದು ತಿಳಿಸಿದರು. ಈ ವೇಳೆ ದೇವಸ್ಥಾನದ ಕರಗ ಅರ್ಚಕ
ಅಬಿsಮನ್ಯು, ಸಮಿತಿ ಸದಸ್ಯ ಕೇಶವ ಮೂರ್ತಿ ಇದ್ದರು.
.
Advertisement