ಬಣ್ಣ ಬದಲಾಯಿಸಲಿದೆ ಬಿಎಂಟಿಸಿ

ಬಿಎಂಟಿಸಿ ಬಸ್ ಎಂದಾಕ್ಷ ಣ ನೀಲಿ, ಕೆಂಪು, ಹಸಿರು ಬಣ್ಣದ ಬಸ್‍ಗಳು ನಿಮ್ಮ ಕಣ್ಮುಂದೆ ಬರುತ್ತವೆ. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ಎಲ್ಲ ಬಸ್‍ಗಳೂ...
ಬಿಎಂಟಿಸಿ ಬಸ್
ಬಿಎಂಟಿಸಿ ಬಸ್

ಬೆಂಗಳೂರು: ಬಿಎಂಟಿಸಿ ಬಸ್ ಎಂದಾಕ್ಷಣ ನೀಲಿ, ಕೆಂಪು, ಹಸಿರು ಬಣ್ಣದ ಬಸ್‍ಗಳು ನಿಮ್ಮ ಕಣ್ಮುಂದೆ ಬರುತ್ತವೆ. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ಎಲ್ಲ ಬಸ್‍ಗಳೂ
ಒಂದೇ ರೀತಿಯ ಬಣ್ಣದಲ್ಲಿ ಗೋಚರಿಸಲಿವೆ. ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಗಳು   ಕೇಸರಿ  , ನೀಲಿ,  ಹಸಿರು ಬಣ್ಣದ ಯುನಿಫಾರ್ಮ್
ತೊಟ್ಟು ರಸ್ತೆಗಿಳಿಯಲಿವೆ. ತನ್ನೆಲ್ಲಾ ಬಸ್‍ಗಳ ಬಣ್ಣದಲ್ಲಿ ಸಾಮ್ಯತೆ ಕಾಯ್ದುಕೊಳ್ಳಲು ಬಿಎಂಟಿಸಿ ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ತ್ರಿವರ್ಣ ಬಸ್‍ಗಳ ಪ್ರಾಯೋ ಗಿಕ ಸಂಚಾರಕ್ಕೆ ಬುಧವಾರ ಚಾಲನೆ ದೊರೆಯಿತು. ವರ್ಷದೊಳಗೆ ಎಲ್ಲ 6,800 ಬಿಎಂಟಿಸಿ ಬಸ್‍ಗಳು ಮೂರು ಬಣ್ಣಗಳಲ್ಲಿ ಕಂಗೊಳಿಸಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 62ನೇ ಬಸ್ ದಿನಾಚರಣೆ ಅಂಗವಾಗಿ ನೈಸ್ ರಸ್ತೆ ಮುಖಾಂತರ ಕಾರ್ಯಾಚರಣೆ ಮಾಡುವ ಬಸ್‍ಗಳ ನೂತನ ಸೇವೆ ಹಾಗೂ ಹೊಸ ವಿನ್ಯಾಸದ ಬಸ್‍ಗಳಿಗೆ ಚಾಲನೆ ನೀಡಿದ ನಂತರ ಅವರು ಈ ವಿಷಯ ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಏಕ್‍ರೂಪ್ ಕೌರ್ ಭಾಗವಹಿಸಿದ್ದರು.

ತ್ರಿವರ್ಣ ಯಾಕೆ?
ಬಿಎಂಟಿಸಿಯಲ್ಲಿ ಕೆಂಪು, ನೀಲಿ, ಹಸಿರು, ಕಂದು, ಕೇಸರಿ, ಬಿಳಿ ಹೀಗೇ  ಹಲವು ಬಣ್ಣಗಳ ಬಸ್‍ಗಳಿವೆ. ಇದರಿಂದ ಸಾರ್ವಜನಿಕರಿಗೆ ಬಿಎಂಟಿಸಿ ಬಸ್  ಯಾವುದು ಎಂದು
ಗುರುತಿಸುವುದು ಕಷ್ಟ. ಅಲ್ಲದೆ, ವಜ್ರ ಹಾಗೂ ಸಾಮಾನ್ಯ ಬಸ್‍ಗಳ ವ್ಯತ್ಯಾಸ ತಿಳಿಯುವುದೂ ಕಷ್ಟವಾಗಿದೆ. ಆದ್ದರಿಂದ ಎಲ್ಲಾ ಬಸ್‍ಗಳ ಬಣ್ಣದಲ್ಲಿ ಸಾಮ್ಯತೆ ಕಾಪಾಡಿಕೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಇಲಾಖೆ ಮುಂದಾಗಿದೆ. ಯಾವ ಬಸ್‍ಗೆ ಯಾವ ಬಣ್ಣ? ಉದ್ಯಾನ ನಗರಿ ಪ್ರತೀಕವಾಗಿ ಹಸಿರು ಬಣ್ಣವನ್ನು ಆಯ್ಕೆ ಮಾಡಲಾಗಿದೆ. ಈ ಬಣ್ಣವನ್ನು ಬಿಗ್ 10, ಬಿಗ್‍ಟ್ರಂಕ್, ಬಿಗ್ ಸರ್ಕಲ್ ಸೇವೆ ಹಾಗೂ ನಗರದಲ್ಲಿ ಸಂಚರಿಸುವ
ಸಾಮಾನ್ಯ ದರದ ಬಸ್‍ಗಳಿಗೆ ಲೇಪಿಸಲಾಗುತ್ತದೆ. ಈ ಬಸ್‍ಗಳ ಮೇಲೆ ಹೂವಿನ ದಳದ ಚಿತ್ರ, ನೇರಗೆರೆಯ ಗ್ರಾಪಿsಕ್ ಹಾಗೂ ಕಬ್ಬಿನ ಜಲ್ಲೆಯ ಚಿತ್ರ ಇರುತ್ತದೆ. ಪ್ರಶಾಂತತೆಯ ಪ್ರತೀಕವಾದ ನೀಲಿ ಬಣ್ಣವನ್ನು ವಾಯುವಜ್ರ ಬಸ್‍ಗಳಿಗೆ ಲೇಪಿಸಲಾಗುತ್ತದೆ. ಹಾಗಾಗಿ ನೀಲಿ ಬಣ್ಣವಿರುವ ಬಸ್‍ಗಳು ವಾಯು ವಜ್ರ ಎಂದು ಗುರುತಿಸಬಹುದು. ಈ ಬಣ್ಣ ಹೊಂದಿರುವ ಬಸ್‍ಗಳ ಮೇಲೆ ವಜ್ರದ ಹರಳುಗಳಿರುವ ಗ್ರಾಪಿsಕ್ ಇರುತ್ತದೆ. ಕೇಸರಿ ಬಣ್ಣವನ್ನು ಸಂಪರ್ಕ ಸಾರಿಗೆ ಬಸ್‍ಗಳಿಗೆ ಲೇಪಿಸಲಾಗುತ್ತಿದ್ದು, ಈ ಬಸ್‍ಗಳ ಮೇಲೆ ದ್ರಾಕ್ಷಿಗೊಂಚಲ ಗ್ರಾಫಿ ಕ್ ಇರಲಿದೆ. ಅಟಲ್ ಸಾರಿಗೆ ಬಸ್‍ಗಳ ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com