
ಬೆಂಗಳೂರು: ಬಣ್ಣಗಳ ಹಬ್ಬ ಮತ್ತೊಮ್ಮೆ ಆಗಮಿಸಿದೆ! ಫೋರಂ ವ್ಯಾಲ್ಯೂ ಮಾಲ್ ಈ ವರ್ಷ ನಿಮ್ಮ ಈ ಬಣ್ಣಗಳ ಹಬ್ಬ ಹೋಳಿಯನ್ನು ಮತ್ತಷ್ಟು ವರ್ಣರಂಜಿತವಾಗಿ ಆಚರಿಸಲು ಸಜ್ಜಾಗಿದೆ.
2015ರ ಮಾರ್ಚ್ 7, ಶನಿವಾರದಂದು ಫೋರಂ ವ್ಯಾಲ್ಯೂ ಮಾಲ್, ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವರ್ಣರಂಜಿತ ಹೋಳಿ ಪಾರ್ಟಿಯನ್ನು ಆಯೋಜಿಸಿದೆ! ಈ ಪಾರ್ಟಿಯಲ್ಲಿ, ಪ್ರತಿಯೊಬ್ಬರೂ ಕುಣಿದು ಕುಪ್ಪಳಿಸಲು ದಿನ ಪೂರ್ತಿ ವಿನೋದಮಯ ಡಿಜೆ ಸಂಗೀತ ನುಡಿಸುವಿಕೆಯಿರುತ್ತದೆ. ಇದರ ಜೊತೆಗೆ ರುಚಿಕರವಾದ ಆಹಾರಗಳ ಮಳಿಗೆಗಳಿರುತ್ತವೆ. ಏಕೆಂದರೆ, ಯಾವುದೇ ಹಬ್ಬ ರುಚಿಕರವಾದ ಆಹಾರವಿಲ್ಲದೆ ಪರಿಪೂರ್ಣವೆನಿಸಿಕೊಳ್ಳುವುದಿಲ್ಲ!
ಫೋರಂ ವ್ಯಾಲ್ಯೂ ಮಾಲ್ ಮನರಂಜನೆಯೊಂದಿಗೆ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮಾಲ್‍ನಲ್ಲಿ ದೊರೆಯುವಂತಹ ಹೋಳಿಯ ಎಲ್ಲಾ ಬಣ್ಣಗಳು ಸಾವಯವ ಹಾಗೂ 100% ಸುರಕ್ಷಿತವಾಗಿರುತ್ತದೆ.
ಎಲ್ಲದ್ದಕ್ಕಿಂತ ಮುಖ್ಯ ಆಕರ್ಷಣೆಯೆಂದರೆ ಮಾಲ್‍ನಲ್ಲಿ ನಡೆಯುವ ‘ರೇನ್ ಡ್ಯಾನ್ಸ್’ (ಮಳೆ ನೃತ್ಯ)! ಜನರು ಈ ಬಣ್ಣದ ಮಳೆಯಲ್ಲಿ ಹಾಡುತ್ತಾ ಕುಣಿದು ಕುಪ್ಪಳಿಸಿ ಹೋಲಿಯ ನಿಜವಾದ ಆನಂದವನ್ನು ಸವಿಯಬಹುದು!
ಪ್ರವೇಶ ದರ ಇಬ್ಬರಿಗೆ ರು.500/- ನೀವು ಆನ್‍ಲೈನ್ https://www.payumoney.com/events/#/buyTickets/HoliGunsಮೂಲಕ ಟಿಕೆಟ್ ಬುಕ್ ಮಾಡಬಹುದು.
Advertisement