
ಬೀದರ್: ಲಾರಿ ಡಿಕ್ಕಿಯಾಗಿ ಒಂದೇ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ಶುಕ್ರವಾರ ಬೀದರ್ ಜಿಲ್ಲೆಯ ಔರಾದ್‌ನ ಡಿಗ್ಗಿ ಎಂಬಲ್ಲಿ ಸಂಭವಿಸಿದೆ.
ಮೃತಪಟ್ಟವರನ್ನು ಮಹಾದೇವ(27), ಉಮೇಶ(23), ಪಪ್ಪು(21) ಹಾಗೂ ಸಂತೋಷ್ ಕಾಂಬ್ಳೆ(28) ಎಂದು ಗುರುತಿಸಲಾಗಿದೆ. ಇವರೆಲ್ಲರು ಮಹಾರಾಷ್ಟ್ರದ ಉದಗೀರ್ ನಿವಾಸಿಗಳಾಗಿದ್ದು, ಉದಗೀರ್‌ನಿಂದ ಔರಾದ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕಮಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement