ಮಹಿಳೆಗೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ಅಧಿಕಾರ ನೀಡಿ

ಸಮಾಜದಲ್ಲಿ ಯಾವ ಕಾನೂನಿನಿಂದಲೂ ಮನುಷ್ಯನ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬನೂ ತನ್ನ ಕರ್ತವ್ಯ ವನ್ನು ಅರಿತು ಮುನ್ನಡೆದಾಗ ಮಾತ್ರ ಸಮಾಜ ದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು ಕೇಂದ್ರದ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕಲ್‍ರಾಜ್ ಮಿಶ್ರಾ...
ಕೋವೆ ಸಂಸ್ಥೆ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಕೊಂಡಿದ್ದ ಮಹಿಳಾ ಸಬಲೀಕರಣ ಕುರಿತ ಚರ್ಚೆಯನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮಾಧ್ಯಮ ಕೈಗಾರಿಕಾ ಸಚಿವ ಕಲ್ ರಾಜ್ ಮಿಶ್ರಾ ಉದ್ಘಾ
ಕೋವೆ ಸಂಸ್ಥೆ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಕೊಂಡಿದ್ದ ಮಹಿಳಾ ಸಬಲೀಕರಣ ಕುರಿತ ಚರ್ಚೆಯನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮಾಧ್ಯಮ ಕೈಗಾರಿಕಾ ಸಚಿವ ಕಲ್ ರಾಜ್ ಮಿಶ್ರಾ ಉದ್ಘಾ

ಬೆಂಗಳೂರು: ಸಮಾಜದಲ್ಲಿ ಯಾವ ಕಾನೂನಿನಿಂದಲೂ ಮನುಷ್ಯನ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬನೂ ತನ್ನ ಕರ್ತವ್ಯ ವನ್ನು ಅರಿತು ಮುನ್ನಡೆದಾಗ ಮಾತ್ರ ಸಮಾಜ ದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು ಕೇಂದ್ರದ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕಲ್‍ರಾಜ್ ಮಿಶ್ರಾ ಹೇಳಿದ್ದಾರೆ.

ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಜತೆಗೆ ಕಚೇರಿಯಲ್ಲಿ ಕಿರುಕುಳ, ಅತ್ಯಾಚಾರದಂತಹ ಕ್ರೂರ ಕೃತ್ಯಗಳೂ ನಡೆಯುತ್ತಿವೆ. ಹೆಣ್ಣಿಗೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ಅಧಿಕಾರ ನೀಡಬೇಕು. ಮಹಿಳೆಯ ಮನಸ್ಸಿನಲ್ಲಿರುವ ಆತಂಕವನ್ನು ಹೋಗಲಾಡಿಸಿ ಧೈರ್ಯ ತುಂಬುವಂಥ ಕೆಲಸ ನಡೆಯಬೇಕು ಎಂದು ಕೋವೆ ಸಂಸ್ಥೆ ಮಹಿಳಾ ದಿನಾ ಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕುರಿತ ಚರ್ಚೆ ಯಲ್ಲಿ ಅವರು ನುಡಿದರು.

ಎನ್‍ಎಸ್‍ಐಸಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ನಾಥ್, ಎಫ್ ಕೆಸಿಸಿಐ ಅಧ್ಯಕ್ಷ ಸಂಪತ್‍ರಾಮನ್, ವಿಟಿಯು ಬೆಳಗಾವಿಯ ರಿಜಿಸ್ಟ್ರಾರ್ ಕೆ.ಎ. ಪ್ರಕಾಶ್ ಉಪಸ್ಥಿತ ರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com