ಪವಾಡ ಪುರುಷರಿಗೆ ಸ್ಪಷ್ಟ ಮೂಲವೇ ಇಲ್ಲ

ಪುರಾಣ ಪುರುಷರು ಹಾಗೂ ಪವಾಡ ಪುರುಷರು ಎನಿಸಿಕೊಳ್ಳುವವರಿಗೆ ಅಂತೆ-ಕಂತೆ, ಊಹಾಪೋಹ ಬಿಟ್ಟರೆ ಸ್ಪಷ್ಟ ಮೂಲವೇ ಇರುವುದಿಲ್ಲ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಹೇಳಿದ್ದಾರೆ...
ಹಿರಿಯ ಸಾಹಿತಿ ಡಾ.ನಾ.ಡಿಸೋಜ
ಹಿರಿಯ ಸಾಹಿತಿ ಡಾ.ನಾ.ಡಿಸೋಜ

ಬೆಂಗಳೂರು: ಪುರಾಣ ಪುರುಷರು ಹಾಗೂ ಪವಾಡ ಪುರುಷರು ಎನಿಸಿಕೊಳ್ಳುವವರಿಗೆ ಅಂತೆ-ಕಂತೆ, ಊಹಾಪೋಹ ಬಿಟ್ಟರೆ ಸ್ಪಷ್ಟ ಮೂಲವೇ ಇರುವುದಿಲ್ಲ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಹೇಳಿದ್ದಾರೆ.

ನವ ಕರ್ನಾಟಕ ಪ್ರಕಾಶನ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಶ್ವಮಾನ್ಯರು ಮಾಲಿಕೆಯ 100 ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 100 ಕೃತಿಗಳನ್ನು ಹೊರ ತರುವ ಪ್ರಯತ್ನದಲ್ಲಿ ಪುರಾಣ ಮತ್ತು ಪವಾಡ ಪುರುಷರನ್ನು ಹೊರಗಿಟ್ಟಿರುವುದರಿಂದ ಜನರಲ್ಲಿ ಅಂಧ ಶ್ರದ್ಧೆ ದೂರ ಮಾಡಿದಂತಾಗಿದೆ. ಮೌಢ್ಯಕ್ಕೆ ಅವಕಾಶ ನೀಡದಂತಾಗಿದೆ. ಇದಕ್ಕೆ ಉದಾಹರಣೆ ಎಂದರೆ ಕನಕದಾಸರ ಬಗ್ಗೆ ಹೊರ ತಂದಿರುವ ಕೃತಿಯಲ್ಲಿ ಕನಕನಕಿಂಡಿಯ ಬಗ್ಗೆ ಇರುವ ಮೌಢ್ಯ ಮತ್ತು ತಪ್ಪು ಮಾಹಿತಿಗಳನ್ನು ಸರಿಪಡಿಸಲಾಗಿದೆ ಎಂದು ನಾ. ಡಿಸೋಜ ಬಣ್ಣಿಸಿದರು.

ಇಂದಿನ ಮಕ್ಕಳಲ್ಲಿ ಪುಸ್ತಕಗಳಿಗಿಂತ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್‍ಗಳ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಇಂಥ ಮಕ್ಕಳಲ್ಲಿ ಉತ್ತಮ ಜ್ಞಾನ ಒದಗಿಸಲು ಈ ಪುಸ್ತಕಗಳು ಅದ್ಭುತ ಕೈಪಿಡಿಯಾಗಲಿವೆ.ಆದ್ದರಿಂತ  ಈ ಕೃತಿಗಳನ್ನು ಖರೀದಿಸಿ ಓದಬೇಕು. ಮಕ್ಕಳನ್ನೂ ಓದು ವಂತೆ ಮಾಡಬೇಕು ಎಂದು ಸಲಹೆ ನೀಡಿದರು. 100 ಕೃತಿಗಳಿಗೂ ಪ್ರತ್ಯೇಕ ಸಂಪಾದಕೀಯ ಬರೆದಿರುವ ಡಾ.ನಾ.ಸೋಮೇಶ್ವರ ಅವರು ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಏಕೆಂದರೆ ಒಬ್ಬ ಲೇಖಕ ಒಂದು ಕೃತಿ ರಚಿಸಲು 10 ಮಂದಿಯನ್ನು ಸಂಪರ್ಕಿಸಿದರೆ, ಸಂಪಾದಕೀಯ ಬರೆಯಬೇಕಾದ ಸಂಪಾದಕ ಕನಿಷ್ಠ 20 ಮಂದಿಯನ್ನು ಸಂಪರ್ಕಿಸ ಬೇಕಾಗುತ್ತದೆ. ಹಾಗಿದ್ದರೆ ಸೋಮೇಶ್ವರ ಅವರು 100 ಕೃತಿಗಳಿಗೂ ಸಂಪಾದಕೀಯ ಬರೆಯಲು ಎಷ್ಟು ಮಂದಿಯನ್ನು ಸಂಪರ್ಕಿಸಿರಬೇಕು, ಎಷ್ಟೆಲ್ಲಾ ಶ್ರಮಿಸಿಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅವರ ಸಂಪಾದಕೀಯವನ್ನೇ ಒಂದು ಪುಸ್ತಕವಾಗಿ ಹೊರತರಬೇಕು ಎಂದು ಡಿಸೋಜ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com