ಆಫ್ರಿಕನ್ನರ ಮೇಲೆ ಹಲ್ಲೆ

ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಫ್ರಿಕಾಮೂಲದ ಮೂವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಕೊತ್ತನೂರು ಸಮೀಪದ ಭೈರತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ...
ಆಫ್ರಿಕನ್ನರ ಮೇಲೆ ಹಲ್ಲೆ

ಬೆಂಗಳೂರು: ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಫ್ರಿಕಾಮೂಲದ ಮೂವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಕೊತ್ತನೂರು ಸಮೀಪದ ಭೈರತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಆಫ್ರಿಕಾ ಪ್ರಜೆ ಜಾನ್ ಎಂಬಾತ ಬೆಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ಬಂದಿದ್ದ. ಭೈರತಿಯಲ್ಲಿ ವಾಸವಿದ್ದ ಆಕೆ, ಜಾನ್ ಹಾಗೂ ಮತ್ತೊಬ್ಬ ಸ್ನೇಹಿತನೊಂದಿಗೆ ಮೂವರು ಪಾರ್ಟಿಗೆ ತೆರಳಿದ್ದರು. ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಮರಳುವಾಗ ಸ್ಥಳೀಯರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಹೋದರಿ ಹಾಗೂ ಆಕೆಯ ಸ್ನೇಹಿತ ದಾಳಿಕೋರರಿಂದ ತಪ್ಪಿಸಿಕೊಂಡು ಸಮೀಪದ ಚರ್ಚ್‍ನ ಒಳಗೆ ಆಶ್ರಯ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಜಾನ್‍ನನ್ನು ಅಟ್ಟಿಸಿಕೊಂಡು ಆತನ ಮನೆಗೆ ಹೋದ ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಥಳಿಸಿದ್ದು ತಲೆಗೆ ಗಾಯವಾಗಿ ರಕ್ತಸ್ರಾವವಾಗಿದೆ.

ಅಲ್ಲದೇ ಮನೆಯ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ. ಹಲ್ಲೆಕೋರರು ಸ್ಥಳದಿಂದ ತೆರಳಿದ ಬಳಿಕ ಜಾನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸುದ್ದಿ
ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಹಲ್ಲೆ ನಡೆಸಿದವರು ಮೊಬೈಲ್ ಫೋನ್ ಹಾಗೂ ಪರ್ಸ್‍ನ್ನು ಕೂಡಾ ಕಿತ್ತುಕೊಂಡು ಹೋಗಿದ್ದಾರೆ ಎಂದು ಜಾನ್ ಆರೋಪಿಸಿದ್ದಾರೆ.

ಮೂವರು ರಾತ್ರಿ ವೇಳೆ ಅನಾಗತ್ಯವಾಗಿ ಗಲಾಟೆ ಮಾಡುತ್ತಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ವಿಚಾರಕ್ಕಾಗಿಯೇ ಹಲ್ಲೆ ನಡೆದಿರಬಹುದು. ಜನಾಂಗೀಯ ನಿಂದನೆಯಂತಹ ಯಾವುದೇ ಆರೋಪ ಇಲ್ಲ ಎಂದು ಈಶಾನ್ಯ ವಿಭಾಗ ಡಿಸಿಪಿ ವಿಕಾಸ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com