ಮಾ.15ಕ್ಕೆ ವಿವೇಕ ಸ್ಕಾಲರ್ ಪ್ರೋಗ್ರಾಮ್ ಪ್ರವೇಶ ಪರೀಕ್ಷೆ

ಮಾ.15ಕ್ಕೆ ವಿವೇಕ ಸ್ಕಾಲರ್ ಪ್ರೋಗ್ರಾಮ್ ಪ್ರವೇಶ ಪರೀಕ್ಷೆ

ಬೆಂಗಳೂರು: ಪ್ರಸ್ತುತ ಎಸ್.ಎಸ್.ಎಲ್.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ, 2015-16ರ ಸಾಲಿಗೆ ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಿಚ್ಚಿಸುವ ವಿದ್ಯಾರ್ಥಿಗಳಿಗಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ವಿವೇಕ ಸ್ಕಾಲರ್ ಪ್ರೋಗ್ರಾಮ್‍ನಿಂದ ಮಾರ್ಚ್ 15 ರಂದು ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ.

ಈ ಪ್ರವೇಶ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಎರಡು ವರ್ಷಗಳ ಕಾಲ ಶೈಕ್ಷಣಿಕ ಸವಲತ್ತುಗಳೊಂದಿಗೆ ಜೀವನಕೌಶಲ್ಯ, ವೃತ್ತಿಪರ ಮಾರ್ಗದರ್ಶನದ ಸೌಲಭ್ಯಗಳನ್ನು ನೀಡುವುದು ಯೋಜನೆಯ ಗುರಿ ಮತ್ತು ಉದ್ದೇಶ.

ಪ್ರವೇಶ ಪರೀಕ್ಷೆಯನ್ನು ಮಾರ್ಚ್ 15 (ಭಾನುವಾರ), 2015 ರಂದು ಬೆಂಗಳೂರು ಮತ್ತು ದಾರವಾಡ ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
For Dharward centre contact 96866 87750 / 96866 25758
For Bangalore centres contact 96866 25785 /  96866 66316 / 96866 87751

ವಿವೇಕ ಸ್ಕಾಲರ್ ಪ್ರೋಗ್ರಾಮ್” - ಸಂಕ್ಷಿಪ್ತ ಪರಿಚಯ
ವಿವೇಕ ಸ್ಕಾಲರ್ ಪ್ರೋಗ್ರಾಮ್” ಯೋಜನೆಯು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಶಿಕ್ಷಣಾಧಾರಿತ ಯೋಜನೆಗಳಲ್ಲಿ ಒಂದಾಗಿದ್ದು,  ಮೈಸೂರಿನಲ್ಲಿ ಕಳೆದ ಏಳು ವರ್ಷಗಳಿಂದ   ಕಾರ್ಯನಿರ್ವಹಿಸುತ್ತಾ, ಪದವಿ ಪೂರ್ವ ತರಗತಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡುತ್ತಿರುವ ‘ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಶ್ಯಕ ಬೆಂಬಲ ನೀಡಿ, ಅವರು ಉತ್ತಮ ಗುಣಮಟ್ಟದ ವೃತ್ತಿಪರ ಶಿಕ್ಷಣವನ್ನು ಪಡೆದು ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗುವಂತೆ ಮಾಡುತ್ತಿದೆ’. ಇದಕ್ಕಾಗಿ ಅವರಿಗೆ ವಿಶೇಷ ತರಗತಿಗಳು, ಜೀವನ ಕೌಶಲ್ಯ, ಸಾಮಾಜಿಕ ಕೌಶಲ್ಯ, ಉತ್ತಮ ಮೌಲ್ಯಗಳು, ವೃತ್ತಿಪರ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ, ಪ್ರೋತ್ಸಾಹ ಧನ, ಹಾಗೂ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಾ ಬರುತ್ತಿದೆ.

ಇಲ್ಲಿಯವರೆಗೆ ಅಂದರೆ 2007 ರಿಂದ 2014 ರವರೆಗೆ ಒಟ್ಟು 873 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭಾವಿಗಳಾಗಿರುತ್ತಾರೆ. ಈ ವರ್ಷ ರಾಜ್ಯದ ಹಾಸನ, ತುಮಕೂರು, ಬೆಂಗಳೂರು, ಮೈಸೂರು, ವಿಜಯಪುರ, ಯಾದಗಿರಿ ಒಟ್ಟಾರೆ ಆರು ಜಿಲ್ಲೆಗಳಲ್ಲಿ  ಈ ಯೋಜನೆಯು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 523  ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com