ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ

ಆತುರದಿಂದ ಪೀಠ ತ್ಯಜಿಸಿಲ್ಲ, ಅದು ಪಿತೂರಿ

`ನನ್ನನ್ನು ವಿನಕಾರಣ ಪಿತೂರಿ ಮಾಡಿ ಪೀಠದಿಂದ ಇಳಿಸಲಾಯಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಪೇಜಾವರ ಮಠಾಧೀಶ..
Published on

ಬೆಂಗಳೂರು: `ನನ್ನನ್ನು ವಿನಕಾರಣ ಪಿತೂರಿ ಮಾಡಿ ಪೀಠದಿಂದ ಇಳಿಸಲಾಯಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ
ಸ್ವಾಮೀಜಿ ಮಾತ್ರವಲ್ಲ, ಅಷ್ಟಮಠದ ಎಲ್ಲ ಸ್ವಾಮೀಜಿಗಳೂ ಹೊಣೆ. ಆದರೆ ಅಂದು ಆದ ಘಟನೆಗೆ ಇಂದು ಆರೋಪ ಪ್ರತ್ಯಾರೋಪ ಮಾಡಿ ಪ್ರಯೋಜನವಿಲ್ಲ. ಬದಲಾಗಿ ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಅಷ್ಟಮಠಕ್ಕೊಂದು ಸಂವಿಧಾನ, ನಿಯಮ ರೂಪಿಸೋಣ.' -
- ಇದು ವಿದೇಶ ಪ್ರವಾಸದ ಕಾರಣಕ್ಕೆ ಪೇಜಾವರ ಮಠದ ಉತ್ತರಾ„ಕಾರಿ ಹುದ್ದೆ ತ್ಯಜಿಸಿದ ವಿಶ್ವವಿಜಯಅವರ ಮಾತು.
`ನಾನು ಆತುರದಿಂದ ಪೀಠ ತ್ಯಜಿಸಿದೆ ಎಂಬುದು ಸರಿಯಲ್ಲ. ಆಗ ಇದ್ದ ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ನಾನು ಪೀಠ ತ್ಯಜಿಸಬೇಕಾಯಿತು. ಹಾಗೆ ಮಾಡುವಂತೆ
ನನ್ನ ಮೇಲೆ ಭಾರೀ ಒತ್ತಡ ಹೇರಲಾಯಿತು. ಈಗ ನಾನು ಮರಳಿ ಬರುತ್ತೇನೆ ಎಂದು ಹೇಳುತ್ತಿಲ್ಲ. ಅಂತಹ ಉದ್ದೇಶವೂ ನನಗಿಲ್ಲ. ಅಷ್ಟ ಮಠಗಳ ಮತ್ತು ಮಾಧ್ವರ
ಭವಿಷ್ಯದ ಒಳಿತಿಗಾಗಿ ಮಠಗಳ ಸ್ವಾಮೀಜಿಗಳಿಗೆ ಒಂದು ಸಂವಿಧಾನ, ನಿಯಮ ರೂಪಿಸಬೇಕಾದ ಅಗತ್ಯವಿದೆ' ಎಂದು ವಿಶ್ವವಿಜಯ ಅವರು ಅಭಿಪ್ರಾಯ
ಪಟ್ಟಿದ್ದಾರೆ.

`ಕನ್ನಡಪ್ರಭ'ದೊಂದಿಗೆ ಮಾತನಾಡಿ ಹೇಳಿದ್ದಿಷ್ಟು: ಮಂತ್ರಾಲಯದಲ್ಲಿ ಮಾತುಕತೆ ವೇಳೆ ಪೇಜಾವರ ಶ್ರೀಗಳು `ಅಷ್ಟ ಮಠಗಳ ಸ್ವಾಮೀಜಿಗಳ ಸಹಕಾರ ಇಲ್ಲ'
ಎಂದು ಹೇಳಿದ್ದರಿಂದಲೇ ನಾನು ಪರ್ಯಾಯದ ಸಂದರ್ಭ ಶಾಂತಿಯುತ ಪ್ರತಿಭಟನೆಯ ಮಾತನಾಡಿದ್ದು. ಸ್ವಾಮೀಜಿ ಯವರು ಅಷ್ಟಮಠಗಳ ಸಹಕಾರ ಪಡೆದು ಸಂವಿಧಾನ
ರಚಿಸುವುದಾಗಿ ಹೇಳಿದ್ದರೆ ನಾನು ಪ್ರತಿಭಟನೆಯ ಮಾತನಾಡುವ ಪ್ರಸಂಗವೇ ಉದ್ಭವಿಸುತ್ತಿರಲಿಲ್ಲ.
ಹೊಸ ಬೇಡಿಕೆಯಲ್ಲ: ಅಷ್ಟಮಠಕ್ಕೆ ಸಂವಿಧಾನ ಬೇಕೆಂಬುದು ಹೊಸ ಬೇಡಿಕೆಯಲ್ಲ. ನಾನು 2001ರಲ್ಲೇ ಈ ಒತ್ತಾಯ ಮಾಡಿದ್ದೆ. ಪುತ್ತಿಗೆ ಶ್ರೀಗಳ ಪರ್ಯಾಯದ ಸಂದರ್ಭ ಕೂಡ ಈ ಚರ್ಚೆ ನಡೆ ದಿತ್ತು. ನಿಜವಾಗಿಯೂ ಸಂವಿಧಾನ ರಚಿಸುವ ಮನಸಿದ್ದರೆ ಪೇಜಾವರ ಶ್ರೀಗಳೇ ನೇತೃತ್ವ ವಹಿಸಿಅದನ್ನು ಮಾಡಬೇಕಿತ್ತು.
ಆದರೆ ಸಂವಿಧಾನದ ಪ್ರಶ್ನೆ ಉದ್ಭವಿಸಿದಾಗೆಲ್ಲ `ನಾವು ಅಲಿಖಿತ ಸಂವಿಧಾನ ಹೊಂದಿದ್ದೇವೆ' ಎಂದು ಹೇಳಲಾಗು ತ್ತದೆ. ಅಂದರೆ ಅನುಕೂಲಕ್ಕೆ ತಕ್ಕಂತೆ ಭಾವಿಸಲು ಅವಕಾಶವಾಗುತ್ತದೆ. ಅದರ ಬದಲು ಅಷ್ಟಮಠಗಳ ಸ್ವಾಮೀಜಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬ ನಿಯಮ ರೂಪಿಸಬೇಕು. ಅದಕ್ಕೆ ತಪ್ಪಿ ನಡೆದವರಿಗೆ ಶಿಕ್ಷೆ ಆಗಬೇಕು. ಇದು ಮಠ ಮತ್ತು ಮಾಧ್ವರ ಹಿತದೃಷ್ಟಿಯಿಂದ ಒಳ್ಳೆಯದು. ಯಾರು ಎಷ್ಟು ಹೇಳಿದರೂ ನನಗೆ ಅನ್ಯಾಯವಾಗಿದ್ದು ನಿಜ. ಈಗ ನಾನು ತ್ರಿಶಂಕು ಸ್ಥಿತಿಯಲ್ಲಿದ್ದೇನೆ. ನಾನು ಯಾವ ತಪ್ಪು ಮಾಡಿದ್ದೇನೆಂದು ಈ ಶಿಕ್ಷೆ? ಆದರೂ ಅದರ ಬಗ್ಗೆ  ಚರ್ಚೆ , ಆರೋಪ, ಪ್ರತ್ಯಾರೋಪ ಮಾಡುವುದರಿಂದ ಪ್ರಯೋ ಜನವಿಲ್ಲ ಎಂಬುದರ ಅರಿವೂ ನನಗಿದೆ. ಆದರೆ ನನಗಾದ ಅನ್ಯಾಯ ಭವಿಷ್ಯದಲ್ಲಿ ಇನ್ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ಸಂವಿಧಾನ ರೂಪಿಸುವ ಒತ್ತಾಯ ಮಾಡುತ್ತಿದ್ದೇನೆ. ಪ್ರತಿಭಟನೆ ಖಚಿತ ಸಂವಿಧಾನ ರಚನೆ ಬಗ್ಗೆ ಈ ಪರ್ಯಾಯ ದೊಳಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರತಿಭಟನೆ ಮಾಡುವುದು ಖಚಿತ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ನನ್ನದು ಶಾಂತಿಯು ಪ್ರತಿಭಟನೆ ಎಂದು ಹೇಳಿದ್ದಾರೆ.

ವಿಶ್ವವಿಜಯರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಅಷ್ಟಮಠಗಳ ಬಗ್ಗೆ ಸಂವಿಧಾನ ರಚಿಸಬೇಕೆಂದು ಆಗ್ರಹಿಸಿದರು. ಅದಕ್ಕೆ ನಮ್ಮ ವಿರೋಧವಿಲ್ಲ. ಎಲ್ಲ ಅಷ್ಟ ಮಠಾಧಿಪತಿಗಳ ಜತೆಗೆ ವಿಚಾರ ಮಾಡಿ ಅವರ ಸಮ್ಮತಿಯಿಂದ ಸಂವಿಧಾನ ರಚಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದೇವೆಯೇ ಹೊರತಾಗಿ ಅಷ್ಟಮಠಗಳ ಸಹಕಾರವಿಲ್ಲ ಎಂದು ಹೇಳಿಲ್ಲ.
- ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ
ಪೇಜಾವರ ಮಠಾಧೀಶ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com