ಆರು ಮಂದಿ ಬಲಿ ಪಡೆದ ಹತಾಶೆ

ತಂದೆ-ತಾಯಿ ಹಾಗೂ ಮೂವರು ಸಹೋದರಿಯರಿಗೆ ವಿಷ ನೀಡಿ, ಅವರು ಮೃತಪಟ್ಟ ನಂತರ 24 ತಾಸುಗಳ ಕಾಲ ಶವಗಳೊಂದಿಗೆ ಕಾಲ ಕಳೆದ ಯುವಕನೊಬ್ಬ ಬಳಿಕ...
ಯತೀಶ್, ನೇತ್ರಾವತಿ
ಯತೀಶ್, ನೇತ್ರಾವತಿ
Updated on

ಬೆಂಗಳೂರು: ತಂದೆ-ತಾಯಿ ಹಾಗೂ ಮೂವರು ಸಹೋದರಿಯರಿಗೆ ವಿಷ ನೀಡಿ, ಅವರು ಮೃತಪಟ್ಟ ನಂತರ 24 ತಾಸುಗಳ ಕಾಲ ಶವಗಳೊಂದಿಗೆ ಕಾಲ ಕಳೆದ ಯುವಕನೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಬಾವಿ ಎಂಪಿಎಂ ಬಡಾವಣೆಯಲ್ಲಿ ನಡೆದಿದೆ.


ಮಲ್ಲೇಶ್ವರದ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಟೆಲಿಫೋನ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಗಂಗಹನುಮಯ್ಯ(57), ಪತ್ನಿ ಜಯಲಕ್ಷ್ಮಿ(54), ಇವರ ಮೊದಲ ಮಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಹೇಮಲತಾ(30), 2ನೇ ಮಗಳು ಕೆಪಿಟಿಸಿಎಲ್‍ನಲ್ಲಿ ಕಿರಿಯ ಎಂಜಿನಿಯರ್ ಆಗಿರುವ ವಿಮಲಾ(28) ಹಾಗೂ ಕೊನೆಯ ಮಗಳು ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇತ್ರಾವತಿ(24) ಮೃತಪಟ್ಟವರು.


ನಿರುದ್ಯೋಗಿಯಾಗಿದ್ದ ಮಗ ಯತೀಶ್(26) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಕುಟುಂಬದ ಸದಸ್ಯರು ಕಳೆದ ಎರಡು ದಿನಗಳಿಂದ ಹೊರಗೆ ಕಾಣಿಸಿರಲಿಲ್ಲ.

ಇವರ ಮನೆಯ ಮೊದಲನೇ ಮಹಡಿಯಲ್ಲಿ ಬಾಡಿಗೆಗಿದ್ದ ಚಂದ್ರಶೇಖರ್ ಎಂಬುವವರು ಇದನ್ನು ಗಮನಿಸಿದ್ದರೂ ತಮ್ಮ ಖಾಸಗಿ ಕೆಲಸದಲ್ಲಿ ಮಗ್ನರಾಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ, ಗುರುವಾರ ಬೆಳಗ್ಗೆಯೂ ಅವರು ಕಾಣಿಸದ ಕಾರಣ ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ.

 ಆದರೆ, ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಗಂಗಹನುಮಯ್ಯ ಅವರ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಆದರೂ, ಪ್ರತಿಕ್ರಿಂಯೆ ಬಂದಿರಲಿಲ್ಲ.

ಹೀಗಾಗಿ ಅನುಮಾನಗೊಂಡು ಕಿಟಕಿ ಮೂಲಕ ಇಣುಕಿ ನೋಡಿದ್ದಾರೆ. ಆಗ, ಯತೀಶ್ ಶವ ನೇತಾಡುತ್ತಿತ್ತು. ತಂದೆಯ ಶವ ಹಾಲ್ ನಲ್ಲಿ ಬಿದ್ದಿತ್ತು. ತಾಯಿ ನೇತ್ರಾವತಿ ಶವ ಮಲಗುವ ಕೊಠಡಿಯಲ್ಲಿ ಇತ್ತು. ಹೇಮಲತಾ ಹಾಗೂ ವಿಮಾಲಾ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮನೆಯಿಂದ
ದುರ್ವಾಸನೆ ಬಂದಿದೆ. ಯತೀಶ್ ಶವ ನೇತಾಡುತ್ತಿತ್ತು. ತಂದೆಯ ಶವ ಹಾಲ್‍ನಲ್ಲಿ ಬಿದ್ದಿತ್ತು. ತಾಯಿ ನೇತ್ರಾವತಿ ಶವ ಮಲಗುವ ಕೊಠಡಿಯಲ್ಲಿ ಇತ್ತು. ಹೇಮಲತಾ ಹಾಗೂ ವಿಮಲಾ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ.

ಮೃತಪಟ್ಟಿರುವವರ ಮೇಲೆ ಬಲಪ್ರಯೋಗದಿಂದ ಉಂಟಾಗುವ ಗಾಯಗಳು ಅಥವಾ ಒದ್ದಾಟದ
ಕುರುಹುಗಳು ಕಂಡುಬಂದಿಲ್ಲ. ಮಗನೇ ಪಾಲಕರು ಹಾಗೂ ಸಹೋದರಿಯರಿಗೆ ವಿಷ ನೀಡಿರಬಹುದು.

ಅವರು ಮೃತಪಡುವವರೆಗೆ ಕಾಯ್ದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪಶ್ಚಿಮ ವಿಭಾಗ ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ. ಅಡುಗೆ ಕೆಲಸದವಳನ್ನು ಕಳುಹಿಸಿದ್ದ: ಇವರ ಮನೆಗೆ ಕಸ್ತೂರಿ ಎಂಬುವರು ಕೆಲಸಕ್ಕೆ ಬರುತ್ತಿದ್ದರು.

ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದಾಗ ಇನ್ನು ಮುಂದೆ ಕೆಲಸಕ್ಕೆ ಬರಬೇಡ ಎಂದು ಜೋರಾಗಿ ಮಾತನಾಡಿ ಕಳುಹಿಸಿದ್ದ. ಮನೆಯ ವ್ಯಕ್ತಿಯೇ ಆಗಿದ್ದರಿಂದ ಹೆಚ್ಚು ಮಾತನಾಡದೇ ಸುಮ್ಮನೇ ಹೋಗಿರುವುದಾಗಿ ವಿಚಾರಣೆ ವೇಳೆ ಕಸ್ತೂರಿ ಪೊಲೀಸರಿಗೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com