ನಾಕೋಡರಿಗೆ ಸ್ವರ ನಮನ ಇಂದು

ಗಾನಭಾನು ಪಂಡಿತ್ ಅರ್ಜುನ್‍ಸಾ ನಾಕೋಡ್... ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಅಪ್ರತಿಮ ಹೆಸರು. ಈ ಕ್ಷೇತ್ರಕ್ಕೆ ಅವರ ಅಪ್ರತಿಮ ಹೆಸರು. ಈ ಕ್ಷೇತ್ರಕ್ಕೆ ಅವರ ಕೊಡುಗೆ ಬೆಟ್ಟದಷ್ಟು. ಮೂಲತಃ ಧಾರವಾಡದ ಅರ್ಜುನ್ ಸಾ ನಾಕೋಡ್ ಅವರಿಗೆ ಉತ್ತರ ಕರ್ನಾಟಕ...
ಗಾನಭಾನು ಪಂಡಿತ್ ಅರ್ಜುನ್‍ಸಾ ನಾಕೋಡ್
ಗಾನಭಾನು ಪಂಡಿತ್ ಅರ್ಜುನ್‍ಸಾ ನಾಕೋಡ್

ಬೆಂಗಳೂರು: ಗಾನಭಾನು ಪಂಡಿತ್ ಅರ್ಜುನ್‍ಸಾ ನಾಕೋಡ್... ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಅಪ್ರತಿಮ ಹೆಸರು. ಈ ಕ್ಷೇತ್ರಕ್ಕೆ ಅವರ ಅಪ್ರತಿಮ ಹೆಸರು. ಈ ಕ್ಷೇತ್ರಕ್ಕೆ ಅವರ ಕೊಡುಗೆ ಬೆಟ್ಟದಷ್ಟು. ಮೂಲತಃ ಧಾರವಾಡದ ಅರ್ಜುನ್ ಸಾ ನಾಕೋಡ್ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಶಾಸ್ತ್ರೀಯ ಸಂಗೀತವನ್ನು ಮನೆ ಮಾತಾಗಿಸಿದ ಹೆಗ್ಗಳಿಕೆ. ಅಷ್ಟೇ ಅಲ್ಲ, ನಾಡಿನ ಉದ್ದಗಲಕ್ಕೂ ಸಾವಿರಾರು ಶಿಷ್ಯರನ್ನು ತಯಾರು ಮಾಡಿದ ಕೀರ್ತಿಯಿದೆ.

ಬಡ ನೇಕಾರ ಕುಟುಂಬದಲ್ಲಿ ಜನಿಸಿದ ಅವರು, ಗದುಗಿನ ವೀರೇಶ್ವರ ಪುಣ್ಯಾಶ್ರಮ ಪಂ.ಪುಟ್ಟರಾಜ ಗವಾಯಿಗಳಲ್ಲಿ ನಿಷ್ಣಾಂತ, ಅಷ್ಟೇ ಅಲ್ಲ, ಪೈಲ್ವಾನ, ನಾಟಕ ಕಂಪನಿಯ ಮಾಲೀಕ, ಸಂಗೀತ ಶಾಲೆಯ ಪ್ರಾಂಶುಪಾಲ, ಹೀಗೆ ವೈವಿಧ್ಯಮಯ ದುಡಿಮೆಯ ನಡುವೆಯೇ ಹಿಂದೂಸ್ತಾನಿ ಸಂಗೀತವನ್ನು ತಮ್ಮ ಜೀವನದ ಉದ್ದಕ್ಕೂ ಪೋಷಿಸಿಕೊಂಡ ಬಹುಮುಖ ಪ್ರತಿಭೆ.

ಸಂಗೀತ ಪರಂಪರೆ ಮುಂದುವರಿಕೆಗೆ 1967ರಲ್ಲಿ ಹುಬ್ಬಳ್ಳಿಯಲ್ಲಿ ರೇಣುಕಾ ಸಂಗೀತ ಸಭಾ ಸ್ಥಾಪನೆ ಮಾಡಿದರು. ತಮ್ಮ ಮಕ್ಕಳಿಗೂ ಸಂಗೀತದ ಧಾರೆ ಎರೆದರು. ಅವರ ಪುತ್ರ ಪಂಡಿತ್ ವಿಶ್ವನಾಥ್ ನಾಕೋಡ್, ತಂದೆಯ ಸಂಗೀತ ಧೀಕ್ಷೆ ಪಾಲಿಸಿ, ಸಂಗೀತವನ್ನೆ ಉಸಿರಾಡುತ್ತಿದ್ದಾರೆ. ತಂದೆಯ ನಿಧನದ ನಂತರ 1997ರಲ್ಲಿ ಬೆಂಗಳೂರಿನಲ್ಲಿ ರೇಣುಕಾ ಸಂಗೀತ ಸಭಾ ಸ್ಥಾಪಿಸಿದ ಇವರಿಗೆ ಈಗ ತಂದೆಯದ್ದೇ ಹಾದಿ.

ಪ್ರತಿ ವರ್ಷ ರೇಣುಕಾ ಸಂಗೀತ ಸಭಾದ ಸ್ಮೃತಿ ಸಂಗೀತೋತ್ಸವ ಪಂಡಿತ್ ಅರ್ಜುನ್ ಸಾ ನಾಕೋಡ್ ನಮನವೇ ಆಗಿದೆ. ಈ ಬಾರಿಯ 13ನೇ ಸ್ಮೃತಿ ಸಂಗೀತೋತ್ಸವ ಕೈ ಅದ್ಧೂರಿ ಸ್ವರೂಪ. ಮಾ.14 ರಂದು ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಅಹೋರಾತ್ರಿ ಸಂಗೀತೋತ್ಸವಕ್ಕೆ ರಾತ್ರಿ 9 ಕ್ಕೆ ಚಾಲನೆ ಸಿಗಲಿದೆ. ದೇಶದ ಹೆಸರಾಂತ ಕಲಾವಿದ ಗ್ರಾಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ವಿಶ್ವ ಮೋಹನ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಒಕ್ಕಳಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರೇಣುಕಾ ಸಂಗೀತ ಸಭಾದ ರುವಾರಿಗಳಾದ ಪ್ರಸಿದ್ಧ ತಬಲ ವಾದಕ ಪಂಡಿತ್ ರಘುನಾತ್ ನಾಕೋಡ್ ಹಾಗೂ ವಿದುಷಿ ರೇಣುಕಾ ನಾಕೋಡ್ ಅವರನ್ನು ಸನ್ಸಾನಿಸಲಾಗುತ್ತಿದೆ. ಒಂದೇ ವೇದಿಕೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರು ಮೇಳೈಸುವುದು ಈ ಸಂಗೀತೋತ್ಸವದ ವಿಶೇಷ.

ಪ್ರತಿ ವರ್ಷದ ಅಹೋರಾತ್ರಿ ಸಂಗೀತ ಪಂಡಿತ್ ಅರ್ಜುನ್‍ಸಾ ನಾಕೋಡ್ ಅವರಿಗೆ ಸಲ್ಲಿಸುತ್ತಿರುವ ಸ್ವರ ನಮನ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಒಂದೆಡೆ ಮೇಳೈಸುವ ಅಪೂರ್ವ ವೇದಿಕೆ. ಉತ್ತರ ಕರ್ನಾಟಕದ ಜನರ ಅಭಿರುಚಿಯ ಶೈಲಿಯಲ್ಲಿ ರಾತ್ರಿಯಿಡೀ ನಡೆಸಲಾಗುತ್ತಿದೆ. ಈ ಬಾರಿಯೂ ಸಾಕಷ್ಟು ಸಂಗೀತಾಸಕ್ತರ ನಿರೀಕ್ಷೆಯಿದೆ. ಇಂತಹ ಕಾರ್ಯಕ್ರಮ ಪ್ರಸ್ತುತಿಗೆ ಹೆಮ್ಮೆಯಿದೆ. ಪಂ. ವಿಶ್ವನಾಥ್ ನಾಕೋಡ್, ರೇಣುಕಾ ಸಂಗೀತ ಸಭಾ ಅಧ್ಯಕ್ಷರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com