ಭಗ್ನವಾಗಿರುವ ಮಹಿಷಾಸುರ ಪಾದ
ಭಗ್ನವಾಗಿರುವ ಮಹಿಷಾಸುರ ಪಾದ

ಚಾಮುಂಡಿಬೆಟ್ಟದ ಮಹಿಷಾಸುರ ಪಾದ ಭಗ್ನ

ನಗರದ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯ ಪಾದದ ಸ್ವಲ್ಪ ಭಾಗವು ಭಗ್ನವಾಗಿರುವುದು ಶನಿವಾರ ಬೆಳಕಿಗೆ ಬಂದಿದೆ...

ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯ ಪಾದದ ಸ್ವಲ್ಪ ಭಾಗವು ಭಗ್ನವಾಗಿರುವುದು ಶನಿವಾರ ಬೆಳಕಿಗೆ ಬಂದಿದೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಚಾಮುಂಡೇಶ್ವರಿ ದೇವಸ್ಥಾನದ ಅಧಿಕಾರಿಗಳು ಪಾದ ದುರಸ್ತಿಗೊಳಿಸಿದ್ದಾರೆ.

ಪ್ರತಿಮೆಯ ಪಾದದ ತುದಿಯಲ್ಲಿ 1.5 ಸೆಂ.ಮೀ ಭಗ್ನವಾಗಿತ್ತು. ಇುದ ಉದ್ದೇಶ ಪೂರ್ವಕವಾಗಿ ಮಾಡಿದ ಘಟನೆಯಲ್ಲ. ಆಕಸ್ಮಿಕವಾಗಿ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಸಮೀಪದಲ್ಲಿರುವ ಮಹಾಬಲೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ನಡೆಯಿತು. ಈ ಜಾತ್ರೆಯಲ್ಲಿ ಅನೇಕ ಭಕ್ತರು ರಥಕ್ಕೆ ತೆಂಗಿನ ಕಾಯಿ ಒಡೆಯುವ ಸಂಪ್ರದಾಯವಿದೆ.

ಆಕಸ್ಮಿಕವಾಗಿ ಪಾದದ ಮೇಲೆ ಕಾಯಿ ಬಿದ್ದು ಭಗ್ನಗೊಂಡಿರುವ ಸಾಧ್ಯತೆ ಇದೆ. ಪಾದದ ಬಳಿ ತೆಂಗಿನ ಕಾಯಿಯ ಚೂರುಗಳು ಪತ್ತೆಯಾಗಿವೆ. ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರುವುದಕ್ಕೆ ಯಾವುದೇ ಕುರುಹುಗಳು ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com