ಮಾರ್ಟರ್ ಬಾಂಬ್‌ ಸ್ಫೋಟಿಸಿ ಆತಂಕ ದೂರ ಮಾಡಿದ ಸಿಆರ್‌ಪಿಎಫ್ ಸಿಬ್ಬಂದಿ

ಬೆಳಗಾವಿಯ ಹೊರವಲಯದಲ್ಲಿರುವ ಸೋನೋಳಿ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿದ್ದ ಸಜೀವ ಮಾರ್ಟರ್ ಬಾಂಬ್‌ನ್ನು ಸಿಆರ್‌ಪಿಎಫ್ ಸಿಬ್ಬಂದಿ...
ಮಾರ್ಟರ್ ಬಾಂಬ್
ಮಾರ್ಟರ್ ಬಾಂಬ್

ಬೆಳಗಾವಿ: ಬೆಳಗಾವಿಯ ಹೊರವಲಯದಲ್ಲಿರುವ ಸೋನೋಳಿ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿದ್ದ ಸಜೀವ ಮಾರ್ಟರ್ ಬಾಂಬ್‌ನ್ನು ಸಿಆರ್‌ಪಿಎಫ್ ಸಿಬ್ಬಂದಿ ಸ್ಪೋಟಗೊಳಿಸಿ, ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದ್ದಾರೆ.

ಮಾರ್ಟರ್ ಬಾಂಬ್ ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಬೆಳಗಾವಿಗೆ ಬರಬೇಕಿತ್ತು. ಆದರೆ ಬೆಂಗಳೂರಿನಿಂದ ಬೆಳಗಾವಿ ಬಾಂಬ್ ನಿಷ್ಕ್ರಿಯ ದಳ ತಲುಪುದು ವಿಳಂಬವಾಗುವುದರಿಂದ ಮಾರ್ಟರ್ ಬಾಂಬ್ ಸ್ಫೋಟಗೊಳ್ಳುವ ಆತಂಕವಿತ್ತು.

ಇದರಿಂದಾಗಿ ಕಾರ್ಯಾಚರಣೆಯನ್ನು ಆರಂಭಿಸಿದ ಸಿಆರ್‌ಪಿಎಫ್ ಸಿಬ್ಬಂದಿ ಬ್ಯಾಟರಿ ಬಾಂಬ್ ಬಳಸಿ ಮಾರ್ಟರ್‌ನ್ನು ಸ್ಫೋಟಿಸಿದ್ದಾರೆ. ಆ ಮೂಲಕ ಸ್ಥಳೀಯರಲ್ಲಿ ಆವರಿಸಿದ್ದ ಆತಂಕ ದೂರ ಮಾಡಿದ್ದಾರೆ.

ಅಶೋಕ ಪಾಟೀಲ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸಜೀವ ಮಾರ್ಟರ್ ಬಾಂಬ್ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com