
ಕೋಲಾರ: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ನಿಗೂಢ ಸಾವಿನಿಂದ ಮನನೊಂದು ಅವರ ಅಭಿಮಾನಿಯೊಬ್ಬ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಕೋಲಾರದ ತಿರುಮಣಹಳ್ಳಿಯ ನಿವಾಸಿ 40 ವರ್ಷದ ಗೋಪಾಲ್ ಆತ್ಮಹತ್ಯೆಗೆ ಶರಣಾದ ಅಭಿಮಾನಿ. ಗೋಪಾಲ್ ಹಲವಾರು ವರ್ಷಗಳಿಂದ ಜಮೀನು ವಿವಾದವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಡಿ.ಕೆ. ರವಿಯವರು ಕೋಲಾರಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ಬಳಿಕ ಗೋಪಾಲ್ ಅವರ ಸಮಸ್ಯೆ ಬಗೆಹರಿದಿತ್ತು.
ರವಿಯವರು ಅಕಾಲಿಕ ಮರಣದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದಂತೆ ಗೋಪಾಲ್ ಖಿನ್ನತೆಗೊಳಗಾಗಿದ್ದರು. ಡಿ.ಕೆ ರವಿಯವರ ಫ್ಲೆಕ್ಸ್ ಮಾಡಿಸಿಕೊಂಡು ಊರಲ್ಲಿ ಅದನ್ನು ನೇತು ಹಾಕಿ ಅದಕ್ಕೆ ಹಾರ ಹಾಕಿ ಮನೆಗೆ ಬಂದಿದ್ದರು. ಪತ್ನಿ ಹಾಗೂ ಮಕ್ಕಳು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಅವರು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
Advertisement