ಉನ್ನತ ಹುದ್ದೆ ತಡೆಯಲು ಕನ್ನಡಿಗನ ವಿರುದ್ಧ ಪಿತೂರಿ

ಕನ್ನಡಿಗರೊಬ್ಬರು ದೂರದರ್ಶನದ ಮಹಾ ನಿರ್ದೇಶಕರ ಹುದ್ದೆಗೇರುವುದನ್ನು ತಡೆಯಲು ಲೈಂಗಿಕ ಕಿರುಕುಳ ಆರೋಪ ಮಾರ್ಗವನ್ನು ಪಟ್ಟಭದ್ರ ಹಿತಾಸಕ್ತಿಗಳು ಹಿಡಿದಿವೆ...
ನಾಡೋಜ ಡಾ.ಮಹೇಶ್ ಜೋಶಿ
ನಾಡೋಜ ಡಾ.ಮಹೇಶ್ ಜೋಶಿ

ನವದೆಹಲಿ: ಕನ್ನಡಿಗರೊಬ್ಬರು ದೂರದರ್ಶನದ ಮಹಾ ನಿರ್ದೇಶಕರ ಹುದ್ದೆಗೇರುವುದನ್ನು ತಡೆಯಲು ಲೈಂಗಿಕ ಕಿರುಕುಳ ಆರೋಪ ಮಾರ್ಗವನ್ನು ಪಟ್ಟಭದ್ರ ಹಿತಾಸಕ್ತಿಗಳು ಹಿಡಿದಿವೆ. ಮಹಾ ನಿರ್ದೇಶಕರ ಹುದ್ದೆಗೆ ಬಡ್ತಿ ಪಡೆಯಬೇಕಿರುವ ಹಾಲಿ ಹೆಚ್ಚುವರಿ ಮಹಾನಿರ್ದೇಶಕ ಹುದ್ದೆಯಲ್ಲಿರುವ ನಾಡೋಜ ಡಾ.ಮಹೇಶ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

ದೂರು ದಾಖಲಿಸಿರುವುದು ದೆಹಲಿ ದೂರದರ್ಶನದಲ್ಲಿ ಪ್ರೊಡಕ್ಷನ್ ಅಸಿಸ್ಟಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ಸಹೋದ್ಯೋಗಿ. ತಾನು ಸಿದ್ಧಪಡಿಸಿದ ಕಿರು ಸಾಕ್ಷ್ಯಚಿತ್ರವನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ರವಾನಿಸಲಿಲ್ಲ ಎಂಬ ಕಾರಣಕ್ಕಾಗಿ ಆಕೆ ಡಾ.ಮಹೇಶ್ ಜೋಶಿ ವಿರುದ್ಧ ಮಹಾ ನಿರ್ದೇಶಕರಿಗೆ ದೂರು ನೀಡಿದ್ದರು. ಆ ಸಂಬಂಧ ದೂರದರ್ಶನದ ಆಂತರಿಕ ದೂರು ಸಮಿತಿಯು ವಿಚಾರಣೆ ನಡೆಸಿತ್ತು ಮತ್ತು ದೂರಿನಲ್ಲಿ ಹುರುಳಿಲ್ಲ ಎಂದು ಮಹಾ ನಿರ್ದೇಶಕರಿಗೆ ವರದಿ ನೀಡಿತ್ತು.

ಪ್ರಶಸ್ತಿಗೆ ರವಾನಿಸಲು ಇದ್ದ ಮಾನದಂಡ ಗಳಿಗೆ ಚಿತ್ರ ಪೂರಕ ವಾಗಿರಲಿಲ್ಲ ಎಂಬ ಅಂಶಗಳನ್ನು ಚಿತ್ರ ವೀಕ್ಷಿಸಿದ ಕಿರಿಯ ಅಧಿಕಾರಿಗಳು ನೀಡಿದ ಟಿಪ್ಪಣಿ ಆಧರಿಸಿ ನಿರ್ಧಾರ ಕೈಗೊಳ್ಳಲಾಗಿತ್ತು. ದೂರದರ್ಶನದ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಡಾ.ಮಹೇಶ್ ಜೋಶಿ ಮತ್ತಿತರರ ಹೆಸರನ್ನು ಜ.21ರಂದು ಪ್ರಸಾರ ಭಾರತಿಯು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ವಿಜಿಲೆನ್ಸ್ ಕ್ಲಿಯರೆನ್ಸ್ ಗಾಗಿ ರವಾನಿಸಿತ್ತು. ಆಗಿಂದಲೇ ಜೋಷಿ ಉನ್ನತ ಹುದ್ದೆಗೇರುವುದನ್ನು ತಪ್ಪಿಸಲು ಯತ್ನಿಸುತ್ತಿದ್ದವರು ಈ ಪ್ರಕರಣವನ್ನು ಆಯುಧವಾಗಿ ಬಳಸಲೆತ್ನಿಸುತ್ತಿದ್ದಾರೆ.

ತಾಂತ್ರಿಕ ಅಡಚಣೆ ಕಾರಣ
ಕಿರು ಸಾಕ್ಷ್ಯಚಿತ್ರವನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ರವಾನಿಸಲು ತಾಂತ್ರಿಕ ಅಡಚಣೆ ಮತ್ತು ಲೋಪಗಳಿದ್ದವು. ಆದರೆ, ಈ ಕಾರಣದಿಂದ ಪ್ರಶಸ್ತಿಗೆ ರವಾನಿಸಿಲ್ಲ ಎಂಬ ವಾಸ್ತವತೆ ಮುಚ್ಚಿಟ್ಟು ಡಾ.ಮಹೇಶ್ ಜೋಶಿ ವಿರುದ್ಧ ಕಿರುಕುಳ ಆರೋಪ ಮಾಡಲಾಗಿತ್ತು. ಈ ನಡುವೆ ಸಾಕ್ಷ್ಯಚಿತ್ರ ಜತೆ ಸಲ್ಲಿಸಿದ್ದ ನೋಟರಿ ಪ್ರಮಾಣಪತ್ರದಲ್ಲಿ ಸುಳ್ಳು ಘೊಷಣೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ತನಿಖೆ ಮಾಡುವಂತೆ ದೂರದರ್ಶನದ  ವಿಜಿಲೆನ್ಸ್ ವಿಭಾಗಕ್ಕೆ ಮಾ. 4ರಂದು ಬೆಳಗ್ಗೆ ಡಾ.ಮಹೇಶ ಜೋಶಿ ಪತ್ರ ಬರೆದರು.

 ಅಂದು ಸಂಜೆಯೇ ಸಮೀಪದ ಠಾಣ್ಞೆಯಲ್ಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ದೂರು ಸಲ್ಲಿಸಲಾಗಿದೆ. ಡಾ.ಮಹೇಶ್ ಜೋಶಿ ವಿರುದ್ಧ ದೂರು ಸಲ್ಲಿಸಲು ಕಿರಿ ಸಹೋದ್ಯೋಗಿ ಮಹಾ ನಿರ್ದೇಶಕರ ಅನುಮತಿ ಕೋರಿದ್ದರು. ಆಂತ ರಿಕ ದೂರು ಸಮಿತಿ ವಿಚಾರಣೆ ನಡೆಸಿ ದೂರಿ ನಲ್ಲಿ ಹುರುಳಿಲ್ಲ ಎಂದಿದ್ದ ಹಿನ್ನೆಲೆಯಲ್ಲಿ ಮಹಾನಿರ್ದೇಶಕರು ಅನುಮತಿ ನೀಡಿರ ಲಿಲ್ಲ. ಆದರೆ, ನೋಟರಿ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿರುವ ಕಾರಣ  ವಿಜಿಲೆನ್ಸ್ ಘಟಕಕ್ಕೆ ವಿಚಾರಣೆಗೆ ಸೂಚಿಸಿದ ನಂತರ ಲೈಂಗಿಕ ಕಿರುಕುಳ ದೂರು ದಾಖಲಿಸಲಾಗಿದೆ.

ಡಾ.ಮಹೇಶ್ ಜೋಶಿ ಮಹಾ ನಿರ್ದೇಶಕರ ಹುದ್ದೆಗೆ ಏರುವುದನ್ನು ತಪ್ಪಿಸಲು ದೂರದರ್ಶನದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ದೂರಿಗೆ ಬೆನ್ನೆಲುಬಾಗಿವೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com