
ಮೈಸೂರು: ಪ್ರಾಮಾಣಿಕ ಅಧಿಕಾರಿಗಳಿಗೆ ಈ ಭ್ರಷ್ಟ ವ್ಯವಸ್ಥೆ ಕೆಲಸ ಮಾಡಲು ಬಿಡುವುದಿಲ್ಲ. ಪ್ರಾಮಾಣಿಕರು ಕೆಲಸ ಮಾಡಲು ಕಷ್ಟಪಡಬೇಕಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಮೈಸೂರು ಜಿಲ್ಲೆ ಟಿ. ನರಸೀಪುರ ಹಿರಿಯ ಉಪ ನೋಂದಣಾಧಿಕಾರಿ ಎಚ್. ಎಸ್. ಚೆಲುವರಾಜ್ ರಾಜಿನಾಮೆ ಉತ್ತಮ ನಿದರ್ಶನ.ಟಿ. ನರಸೀಪುರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಿಸಿ ಕ್ಯಾಮೆರ ಅಳವಡಿಸಲಾಗಿದೆ. ಅಳವಡಿಸಲಾಗಿದೆ. ಭ್ರಷ್ಟಾಚಾರ ತಡೆಯುವುದು ಇದರ ಉದ್ದೇಶ. ಉಪ ನೋಂದಣಾ„ಕಾರಿ ಕಚೇರಿಯಲ್ಲಿ ಈ ರೀತಿ ಸಿಸಿ ಕ್ಯಾಮೆರಾ ಅಳವಡಿಸಿರುವುದು ಇಡೀ ರಾಜ್ಯದಲ್ಲಿಯೇ ಮೊದಲು.ನೋಂದಣಿ ಕಾರ್ಯಕ್ಕೆ ಬರುವ ಸಾರ್ವಜನಿಕರಿಗೆ ಲಂಚ ನೀಡದೇ ಕೆಲಸ ಮಾಡಿಕೊಳ್ಳಲು ಬೇಕಾದ ಎಲ್ಲ ಮಾಹಿತಿಗಳ ಫಲಕ ಹಾಕಲಾಗಿದೆ. ಸ್ಥಿರ ಸ್ವತ್ತುಗಳ ನೋಂದಣಿ ಸಂಬಂಧ ದಸ್ತಾವೇಜನ್ನು ತಯಾರಿಸಲು ಪರವಾನಗಿ ಪಡೆದವರ ವಿವರ ನೀಡಲಾಗಿದೆ. ಅಲ್ಲದೇ ವಕೀಲರು ಕೂಡಾ ದಸ್ತಾವೇಜು ತಯಾರಿಸಬಹುದಾಗಿದೆ.ಇದರಿಂದ ಮೇಲಾಧಿಕಾರಿಗಳ ಕಣ್ಣು ಚೆಲುವರಾಜ್ ಅವರ ಮೇಲೆ ಬಿತ್ತು. ಬರುವ ಲಂಚಕ್ಕೆ ಕಲ್ಲು ಹಾಕಿದರೆಂಬ ಕಾರಣಕ್ಕೆ ಸಹೋದ್ಯೋಗಿಗಳು ಅಸಹ ಕಾರ ತೋರಿದರು. ಹೀಗಾಗಿ ಚೆಲುವರಾಜ್ ರಾಜಿನಾಮೆ ಸಲ್ಲಿಸಿದ್ದರು. ಈ ಸುದ್ಧಿ ಬಹಿರಂಗವಾಗುತ್ತಿದಂತೆಯೇ ರೈತ ಸಂಘ, ದಲಿತ ಸಂಘರ್ಷ ಸಮಿತಿ ಸೇರಿದಂತೆನಾನಾ ಸಂಘಟನೆಗಳು ಅವರ ಪರ ಹೋರಾಟಕ್ಕಿಳಿದವು. ರಾಜವಂಶಸ್ಥರಿಗೆ ಸೇರಿದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿರುವ ಪ್ರಕರಣದಲ್ಲಿ ಅಧಿಕಾರಿಗಳು ಚೆಕ್ ಮೂಲಕ ಲಂಚ ಪಡೆದಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ವಿಚಾರಣೆ ನಡೆಸುತ್ತಿದ್ದರು. ಕಂದಾಯ ಸಚಿವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉನ್ನತಾಧಿಕಾರಿಗಳು ಸುಧಾರಣೆಯ ಮಾತನ್ನಾಡಿದರು. ಆದರೆ ಅದನ್ನು ಅನುಷ್ಠಾನ ಮಾಡಲು ಹೋದ ಅಧಿ ಕಾರಿಗೆಇದೇ ಇಲಾಖೆಯ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಸಚಿವರು ಭಾಷಣ ಮಾಡುವುದರಲ್ಲೇ ಮಗ್ನರಾಗಿದ್ದಾರೆ.
Advertisement