ಹೈಕೋರ್ಟ್
ಹೈಕೋರ್ಟ್

ಜನರು ನ್ಯಾಯಕ್ಕೆ ಅರ್ಜಿ ಹಾಕಿದರೆ ಚಪ್ಪಲಿ ಸವೆಯುತ್ತೆ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸಂಬಂಧಿಸಿದಂತೆ ಸಾರ್ವಜನಿಕರು ಯಾವುದಾದರೂ ಅರ್ಜಿ ದಾಖಲಿಸಿದರೆ...
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ  ಪ್ರಾಧಿಕಾರಕ್ಕೆ (ಬಿಡಿಎ) ಸಂಬಂಧಿಸಿದಂತೆ ಸಾರ್ವಜನಿಕರು ಯಾವುದಾದರೂ ಅರ್ಜಿ ದಾಖಲಿಸಿದರೆ ಅರ್ಜಿದಾರರ ಚಪ್ಪಲಿ
ಸವೆಯುವವರೆಗೂ ಬಿಡಿಎ ಅವರನ್ನು ಅಲೆಸುತ್ತದೆ. - ಹೀಗೆ ಬಿಡಿಎ ಕಾರ್ಯವೈಖರಿಗೆ ಶಾಲುಸುತ್ತಿಕೊಂಡು ಬಾರಿಸಿರೋದು ರಾಜ್ಯ ಹೈಕೋರ್ಟ್.
ಎಚ್‍ಎಸ್‍ಆರ್ ಬಡವಾಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಮೈದಾನ ಜಾಗದಲ್ಲಿ ಬಿಡಿಎ 10 ವಸತಿ ನಿವೇಶನ ನಿರ್ಮಾಣ ಮಾಡಿ ಹಂಚಿಕೆ ಮಾಡಿತ್ತು.
ನಂತರ ಅದು ಸಿಎ ಜಾಗವೆಂದು ತಿಳಿದ ಬಿಡಿಎ ಹಂಚಿಕೆಯನ್ನು ಏಕಪಕ್ಷೀಯವಾಗಿರದ್ದುಪಡಿಸಿ ಮತ್ತೊಂದೆಡೆ ನಿವೇಶನ ನೀಡುವುದಾಗಿ ತಿಳಿಸಿತ್ತು. ಆದರೆ ಈ ವರೆಗೂ
ಬಿಡಿಎ ನಿವೇಶನ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ಸರಸ್ವತಮ್ಮ ಸೇರಿ ಮೂವರು ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ.ವೇಣುಗೋಪಾಲ್ ಅವರಿದ್ದ ಪೀಠ, ಅರ್ಜಿ ಕುರಿತಂತೆ ನಿವೇಶನ ರದ್ದು ಪಡಿಸಿದ ದಾಖಲೆಯನ್ನು ಬಿಡಿಎ ನೀಡದೆ, 2013ರಿಂದ ವಿಚಾರಣೆ
ಮುಂದೂಡುವಂತೆ ಕೋರಿದೆ. ಇದನ್ನು ಗಮನಿಸಿದರೆ ಬಿಡಿಎ ಕೋರ್ಟ್‍ಗೆ ಉತ್ತರ ದಾಯಿತ್ವ ಅಲ್ಲವೆಂಬಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿತು. ಒಂದು
ಹಂತದಲ್ಲಿ ಸೋಮವಾರವೇ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡಿಎ ಕೋರ್ಟ್‍ಗೆ ಹಾಜರುಪಡಿಸಬೇಕು. ಯುಗಾದಿ ಹಬ್ಬವನ್ನು ಬಿಡಿಎ ಅಧಿಕಾರಿಗಳು ಕಚೇರಿ ಯಲ್ಲೇ ಆಚರಿಸಲಿ ಎಂದು ಮೌಖಿಕವಾಗಿ ಸೂಚಿಸಿತು.ಇದಕ್ಕೆ ಬಿಡಿಎ ಪರ ವಕೀಲರು ಇನ್ನಷ್ಟು ಕಾಲಾವಕಾಶ
ನೀಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಏಕಸದಸ್ಯ ಪೀಠ ವಿಚಾರಣೆಯನ್ನು ಏ.6ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆ ಬಿಡಿಎ ಉಪ ಕಾರ್ಯದರ್ಶಿ ಖುದ್ದು ಹಾಜರಾಗಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‍ಗೆ ಹಾಜರುಪಡಿಸಬೇಕು.ಅರ್ಜಿಗೆ ಸಂಬಂ„ಸಿದಂತೆ ಬಿಡಿಎಗೆ ಕೋರ್ಟ್ ನೀಡುತ್ತಿರುವ ಕೊನೆ ಅವಕಾಶ ಇದಾಗಿದ್ದು, ದಾಖಲೆಗಳನ್ನು ಸಲ್ಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವೇತನಹಾಗೂ ಇತರೆ ಸೌಲಭ್ಯವನ್ನು ಸ್ಥಗಿತಗೊಳಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com