ಕಂದಕಕ್ಕೆ ಬಿದ್ದಿದ್ದ 5 ವಿದ್ಯಾರ್ಥಿಗಳ ರಕ್ಷಣೆ

ಯುಗಾದಿ ಹಬ್ಬದಂದು ಬೆಟ್ಟ ಹತ್ತಿ ಸಾಹಸ ಮಾಡಲು ಹೋದ ಆರು ಮಂದಿ ವಿದ್ಯಾರ್ಥಿಗಳ ಪೈಕಿ 5 ಮಂದಿ ವಿದ್ಯಾರ್ಥಿಗಳು 150 ಅಡಿ ಆಳದ ಕಂದಕಕ್ಕೆ ಬಿದ್ದು, ನಂತರ ಅವರನ್ನು ರಕ್ಷಣೆ ಮಾಡಿದ ಘಟನೆ ತಾಲೂಕಿನ ಸಾವನದುರ್ಗದಲ್ಲಿ ನಡೆದಿದೆ...
ರಕ್ಷಣೆಗೊಂಡ 6 ವಿದ್ಯಾರ್ಥಿಗಳು
ರಕ್ಷಣೆಗೊಂಡ 6 ವಿದ್ಯಾರ್ಥಿಗಳು

ಮಾಗಡಿ: ಯುಗಾದಿ ಹಬ್ಬದಂದು ಬೆಟ್ಟ ಹತ್ತಿ ಸಾಹಸ ಮಾಡಲು ಹೋದ ಆರು ಮಂದಿ ವಿದ್ಯಾರ್ಥಿಗಳ ಪೈಕಿ 5 ಮಂದಿ ವಿದ್ಯಾರ್ಥಿಗಳು 150 ಅಡಿ ಆಳದ ಕಂದಕಕ್ಕೆ ಬಿದ್ದು, ನಂತರ ಅವರನ್ನು ರಕ್ಷಣೆ ಮಾಡಿದ ಘಟನೆ ತಾಲೂಕಿನ ಸಾವನದುರ್ಗದಲ್ಲಿ ನಡೆದಿದೆ.

ಬೆಂಗಳೂರುನ ಪೀಣ್ಯಾ ಮೂಲದ 6 ಮಂದಿ ವಿದ್ಯಾರ್ಥಿಗಳಾದ ಅಜಿತ್ (18), ಹೇಮಂತ್ (17), ಮಂಜು (14), ನಿಕ್ಸನ್ (17), ಶ್ರೀಧರ್ (18) ಮತ್ತು ಲಕ್ಷ್ಮಣ್ (18) ಪಿಕ್ ನಿಕ್ ಗೆಂದು ಬೈಕ್ಗಳಲ್ಲಿ ಸಾವನದುರ್ಗಕ್ಕೆ ಬಂದಿದ್ದಾರೆ.

ಸಾವನದುರ್ಗದಲ್ಲಿರುವ ದೊಡ್ಡ ಏಕಶಿಲಾ ಬೆಟ್ಟವೆಂದೇ ಖ್ಯಾತಿಗಳಿಸಿರುವ ಸುಮಾರು 3 ಸಾವಿರ ಅಡಿ ಎತ್ತರದ ಬಿಳಿಕಲ್ಲು-ಕರಿಕಲ್ಲು ಬೆಟ್ಟವನ್ನ ಹತ್ತಿದ್ದಾರೆ. ಬೆಟ್ಟವನ್ನ ಹತ್ತಿದ ವಿದ್ಯಾರ್ಥಿಗಳು ಎರಡು ಬೆಟ್ಟದ ನಡುವಿನ ಕಂದಕದ ನಡುವೆ ಇಳಿಯಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದಿದ್ದಾರೆ. ಬೆಟ್ಟದ ನಡುವಿನ ಕಂದಕಲ್ಲೇ ಸಿಲುಕಿದ್ದವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com