ಈಜಿಪ್ಟ್ ನಂತಾದೀತು ಬೆಂಗಳೂರು!

ಭವಿಷ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಲಿದ್ದು, ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ಎಚ್ಚರಿಕೆ ನೀಡಿದ್ದಾರೆ...
ವಿಶ್ವಜಲ ದಿನಾಚರಣೆ
ವಿಶ್ವಜಲ ದಿನಾಚರಣೆ
Updated on

ಬೆಂಗಳೂರು: ಭವಿಷ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಲಿದ್ದು, ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ಎಚ್ಚರಿಕೆ ನೀಡಿದ್ದಾರೆ.

ವೈಎಂಸಿಎ ಎನ್ವೈರ್ನಮೆಂಟ್ ಮತ್ತು ಯೂತ್ ಇಸ್ಸ್ಯೂವಿಂಗ್ ಸಹಯೋಗದೊಂದಿಗೆ ಭಾನುವಾರ ಪುರಭವನದ ಮುಂಭಾಗ ಏರ್ಪಡಿಸಿದ್ದ ವಿಶ್ವಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, `ಮುಂದಿನ ದಿನಗಳಲ್ಲಿ ಬೆಂಗಳೂರು ಮಾತ್ರ ವಲ್ಲದೆ ಇತರೆ ನಗರ ಗಳಲ್ಲೂ ಜಲದ ಅಭಾವ ಎದುರಾಗುವ ಸಾಧ್ಯತೆ ಇದ್ದು, ಸರ್ಕಾರ ಇತರೆ ನಗರ ಗಳನ್ನು ಬೆಳೆಸು ವತ್ತ ಆಸಕ್ತಿ ವಹಿಸ ಬೇಕಾದ ಅಗತ್ಯತೆಯಿದೆ.

ಬಂಡವಾಳ ದಾರರಿಗೆಲ್ಲಾ ಭೂಮಿ ನೀಡುವ ಆಮಿಷ ತೋರಿಸಲಾಗುತ್ತಿದೆ. ದೊಡ್ಡ ಮಾಲ್‍ಗಳು, ಮೆಟ್ರೊ ಮುಂತಾದ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುತ್ತಿವೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಬೆಂಗಳೂರು ಈಜಿಪ್ಟ್‍ನಂತೆ ಬರಡಾಗುತ್ತದೆ' ಎಂದು ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಜಲಮಂಡಳಿ ನಡೆಸಿದ ಅಧ್ಯಯನ ಪ್ರಕಾರ ಬೆಂಗಳೂರು ಅಂತರ್ಜಲ ಮಟ್ಟ 1000ದಿಂದ 1400 ಅಡಿ ಆಳಕ್ಕೆ ಹೋಗಿದೆ. ನೀರಿನ ಲಭ್ಯತೆಯಲ್ಲಿ ಹಿಂದಿದ್ದು, ಕೆಂಪು ವಲಯ ಎಂದು ಗುರುತಿಸಿಕೊಂಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತೆ ಶೈಲಾ ಪ್ರಭು, ಬೆರ್ನಾರ್ಡ್ ಚೆಟ್ಟಿ, ವೈಎಂಸಿಎ ಅಧ್ಯಕ್ಷ ಡಾ.ಜೆ. ಅಲೆಕ್ಸಾಂಡರ್, ಲಯನ್ ಸಂಸ್ಥೆಯ ಚಿನ್ನಪ್ಪ ಥಾಮಸ್, ವೈಎಂಸಿಎ ಎನ್ವೈರ್ನಮೆಂಟ್ ಮತ್ತು ಯೂತ್ ಇಸ್ಸ್ಯೂ ವಿಂಗ್ ಅಧ್ಯಕ್ಷೆ ಪ್ರೊ.ಪ್ರಮೋದಿನಿ ನರೇಂದ್ರನಾಥ್ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com