ಎಲ್ಲ ಉದ್ಯಾನಗಳಲ್ಲಿ ಜಿಮ್ ಅಗತ್ಯ

ನಗರದ ಉದ್ಯಾನಗಳಲ್ಲಿ ಸುಲಭ ಜಿಮ್(ವ್ಯಾಯಾಮ ಶಾಲೆ) ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ...
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್

ಬೆಂಗಳೂರು: ನಗರದ ಉದ್ಯಾನಗಳಲ್ಲಿ ಸುಲಭ ಜಿಮ್ (ವ್ಯಾಯಾಮ ಶಾಲೆ) ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಬಸವನಗುಡಿಯ ಕೆ.ಎಸ್.ನರಸಿಂಹಸ್ವಾಮಿ ಪಾರ್ಕ್‍ನಲ್ಲಿ ನೀರಿನ ಘಟಕ, ಗ್ರಂಥಾಲಯ ಮತ್ತು ಇ-ಶೌಚಾಲಯ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಬಿಬಿಎಂಪಿ ಪ್ರಾಯೋಗಿಕವಾಗಿ ಕೆಲವೇ ಆಯ್ದ ಪಾರ್ಕ್‍ಗಳಲ್ಲಿ ತೆರೆದ ಜಿಮ್ ವ್ಯವಸ್ಥೆ ಕಲ್ಪಿಸಿದೆ.

ಇದೇ ಸೌಲಭ್ಯವನ್ನು ಎಲ್ಲಾ ಪಾರ್ಕ್ ಗಳಲ್ಲೂ  ಕಲ್ಪಿಸಬೇಕಿದ್ದು, ಇದಕ್ಕಾಗಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಎಲ್ಲೆಡೆ ಆರೋಗ್ಯ ಕಾಳಜಿ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಬಡವರು, ಮಧ್ಯಮವರ್ಗದವರು ಉಚಿತವಾಗಿ ಜಿಮ್ ಗಳನ್ನು ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಲು ಅನು ಕೂಲವಾಗುತ್ತದೆ. ಆದ್ದರಿಂದ ಜಿಮ್ ಗಳ ಆರಂಭಕ್ಕಾಗಿ ಕ್ರಮಕೈಗೊಳ್ಳ ಲಾಗಿದೆ ಎಂದರು.

ಶಾಸಕ ರವಿಸುಬ್ರಮಣ್ಯ ಮಾತನಾಡಿ, `ಸಚಿವ ಅನಂತಕುಮ್ರ್ ಬಸವನಗುಡಿ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸೂಚಿಸಿದ್ದರು. ಅದರಂತೆ ಉದ್ದೇಶಿತ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದಲ್ಲದೆ ಇನ್ನೂ ಅನೇಕ ಕಾಮಗಾರಿಗಳು ನಡೆಯಬೇಕಿದ್ದು, ಸದ್ಯದಲ್ಲೇ ಆರಂಭವಾಗಲಿವೆ' ಎಂದರು. ಸ್ಥಳೀಯ ಪಾಲಿಕೆ ಸದಸ್ಯ ವೆಂಕಟೇಶಮೂರ್ತಿ ಮಾತನಾಡಿ, `ಆ ಭಾಗದಲ್ಲಿ ಗ್ರಂಥಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ವಿಶೇಷವಾಗಿ ಶೌಚಾಲಯ ತೀರ್ವವಾಗಿತ್ತು. ಅದನ್ನು  ಪರಿಹರಿಸುವ ನಿಟ್ಟಿನಲ್ಲಿ ಸಚಿವರಾದ ಅನಂತಕುಮಾರ್ ಮತ್ತು ಶಾಸಕರಾದ ರವಿಸುಬ್ರಮಣ್ಯ ವಿಶೇಷ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕಾಲಮಿತಿಯಲ್ಲೇ ನಡೆಯುತ್ತಿವೆ' ಎಂದರು.

ಪ್ರಧಾನಿ ಮೋದಿ ಬಡವರು ಮತ್ತು ಮಧ್ಯಮ ವರ್ಗದವರಿಗಾಗಿ ಬಜೆಟ್‍ನಲ್ಲಿ ಅನೇಕ ಯೋಜನೆಗಳನ್ನು ಜಾರಿ ಗೊಳಿಸಿದ್ದಾರೆ. ಅವುಗಳ ಬಗ್ಗೆ ಗೊತ್ತಿಲ್ಲದವರು ಶಾಸಕರು, ಪಾಲಿಕೆ ಸದಸ್ಯರು, ಬಿಜೆಪಿ ಕಚೇರಿಗೆ ಭೇಟಿ ನೀಡಿ ತಿಳಿದುಕೊಳ್ಳಬೇಕು.

-ಅನಂತಕುಮಾರ್, ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com