ಮಾತೃಭಾಷೆಯಲ್ಲೇ ಶಿಕ್ಷಣ ತಿದ್ದುಪಡಿಯಾಗಲಿದೆ ಸಂವಿಧಾನ

ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯವಲ್ಲ ಎಂಬ ತೀರ್ಪಿನ ಮರು ಪರಿಶೀಲನೆಗಾಗಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ (ಅಂತಿಮ ಮನವಿ)...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯವಲ್ಲ ಎಂಬ ತೀರ್ಪಿನ ಮರು ಪರಿಶೀಲನೆಗಾಗಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ (ಅಂತಿಮ ಮನವಿ) ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ತರುವ ಪ್ರಕ್ರಿಯೆಗಳಿಗೆ ಶೀಘ್ರ ಚಾಲನೆ ದೊರೆಯುವ ನಿರೀಕ್ಷೆ ಇದೆ.
ಸುಪ್ರೀಂ ಸಂವಿಧಾನ ಪೀಠ 2014, ಮೇ 6ರಂದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬುದು ಕಡ್ಡಾಯ ಅಲ್ಲ ಎಂದು ತೀರ್ಪು ನೀಡಿದಾಗಲೇ ಸಂವಿಧಾನ ತಿದ್ದುಪಡಿ
ತರುವ ಬಗ್ಗೆ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಆದರೆ, ಸರ್ಕಾರ ಮೇಲ್ಮನವಿ ಸಲ್ಲಿಸಿದ್ದರಿಂದ ನ್ಯಾಯಾಲಯವು ಅಂತಿಮ ಆದೇಶ ಪ್ರಕಟಿಸಿದ ನಂತರ
ತಿದ್ದುಪಡಿ ಪ್ರಕ್ರಿಯೆ  ಪ್ರಾರಂಭಿಸಲು ನಿರೀಕ್ಷಿಸಲಾಗಿತ್ತು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಮೇಲ್ಮನವಿ ತಿರಸ್ಕರಿಸಿತ್ತು. ನಂತರ ಕರ್ನಾಟಕ ಕ್ಯುರೇಟಿವ್ ಅರ್ಜಿ ಸಲ್ಲಿಸಿತ್ತು.
ಕ್ಯುರೇಟಿವ್ ಅರ್ಜಿ ನ್ಯಾಯಾಲಯದ ಮುಂದೆ ಸಲ್ಲಿಸುವ ಅಂತಿಮ ನ್ಯಾಯ ಕೋರಿಕೆ ಮನವಿ. ಇದು ಔಪಚಾರಿಕ ಪ್ರಕ್ರಿಯೆ . ತೀರ್ಪು ಮರು ಪರಿಶೀಲಿಸುವ ಸಾಧ್ಯತೆ ತೀರಾ ವಿರಳ.

ವಿವಾದವೇನು?

  • ರಾಷ್ಟ್ರಪತಿಗಳ ಮುಂದೆ ಇಟ್ಟಿರುವ ವಾದ ಶಿಕ್ಷಣ ಕಾಯ್ದೆ ಗೆ ತಿದ್ದುಪಡಿ ತರಬೇಕು
  • ಇಂಗ್ಲಿಷ್ ಭಾಷಾ ಮಾಧ್ಯಮ ಶಾಲೆಗಳಿಂದ ಶಿಕ್ಷಣದ ವ್ಯಾಪಾರೀಕರಣಕ್ಕೆ ದಾರಿಮಾಡಿಕೊಟ್ಟಂತಾಗಿದೆ.
  •  ಸಮಾನತೆಗೆ ಮಾತೃಭಾಷೆ ಶಿಕ್ಷಣ ಸಹಕಾರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com