
ವಿಧಾನಪರಿಷತ್ತು: ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗುತ್ತೀರಿ. ಗೂಟದ ಕಾರು, ಸಿಬ್ಬಂದಿ, ಕಚೇರಿ ಏಕೆ ಬೇಕು?-- ಸದನಕ್ಕೆ ಹಾಜರಾಗದ ಸಚಿವರ ಬಗ್ಗೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ ರೀತಿ.
ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, ಸಚಿವರಿಗೆ ಸದನಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲ. ಅಂಥವರಿಗೆ ಸಚಿವರಾಗಲು ಯೋಗ್ಯತೆಯೂ ಇಲ್ಲ ಎಂದು ರೇಗಿದರು. ಆಗ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಕೆಲವು ಸಚಿವರು ಅನ ಪಡೆದಿದ್ದಾರೆ. ತಡವಾಗಿ ಬರುತ್ತಾರೆ ಎಂದು ಹೇಳಿದರು.
ಇದನ್ನು ಒಪ್ಪದ ಈಶ್ವರಪ್ಪ ಸರ್ಕಾರದದಲ್ಲಿ ಸಾಕಷ್ಟು ಅಸರ್ಮಥ ಸಚಿವರಿದ್ದಾರೆ. ಅಂಥವರನ್ನು ಏಕೆ ಇಟ್ಟುಕೊಂಡಿದ್ದೀರಿ. ದಯವಿಟ್ಟು ತೆಗೆದು ಹಾಕಿ. ಸಮರ್ಥರಿಗೆ ಮಂತ್ರಿ ಸ್ಥಾನ ನೀಡಿ. ಅಸಮರ್ಥರನ್ನು ಕೂಡಲೇ ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು. ಇದಕ್ಕೆ ಸಭಾನಾಯಕ ಎಸ್.ಆರ್. ಪಾಟೀಲ್ ಹೊರತುಪಡಿಸಿ ಮತ್ಯಾರೂ ತುಟಿ ಬಿಚ್ಚಲು ಯತ್ನಿಸಲಿಲ್ಲ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆಯಿತು.
Advertisement