ಕೆ ಎಸ್ ಆರ್ ಟಿ ಸಿ: ಟಿಕೆಟ್ ರದ್ದತಿಗೆ ಹೊಸ ಶುಲ್ಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.

ಪ್ರಯಾಣದ ಪ್ರಾರಂಭಕ್ಕಿಂತಲೂ ೭೨ ಘಂಟೆ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ, ಮೂಲ ಟಿಕೆಟ್ ದರದ ೧೦% ಶುಲ್ಕದೊಂದಿಗೆ ಮುಂಗಡ ಕಾಯ್ದಿರಿಕೆ ಶುಲ್ಕವನ್ನು ತೆರಬೇಕಾಗುತ್ತದೆ. ಪ್ರಯಾಣಕ್ಕು ಮುಂಚೆ ೨೪ ಘಂಟೆಗಳಿಂದ ೭೨ ಘಂಟೆಗಳವರೆಗೆ ರದ್ದು ಪಡಿಸಿದರೆ ಈ ಶುಲ್ಕ ೨೫% ಏರಿ, ಮುಂಗಡ ಕಾಯ್ದಿರಿಕೆ ಶುಲ್ಕವನ್ನು ತೆತ್ತಬೇಕಾಗುತ್ತದೆ. ಪ್ರಯಾಣಕ್ಕೂ ಮೊದಲ ೨ ಘಂಟೆಯಿಂದ ೨೪ ಘಂಟೆಗೆ ಮುಂಚಿತವಾಗಿ ರದ್ದು ಪಡಿಸಿದಾಗ ಟಿಕೆಟ್ ದರದ ೫೦% ಶುಲ್ಕ ಹಾಗೂ ಮುಂಗಡ ಕಾಯ್ದಿರಿಕೆ ಶುಲ್ಕವನ್ನು ಹಿಡಿದುಕೊಳ್ಳಲಾಗುತ್ತದೆ. ಪ್ರಯಾಣಕ್ಕೂ ಎರಡು ಘಂಟೆಗ ಒಳಗೆ ಟಿಕೆಟ್ ರದ್ದುಪಡಿಸಲು ಸಾಧ್ಯವಿಲ್ಲ.

ಈ ಹಿಂದೆ ಪ್ರಯಾಣದ ಹಿಂದಿನ ೩೦ ನಿಮಿಷಗಳವರೆಗೂ ಟಿಕೆಟ್ ರದ್ದುಪಡಿಸುವ ಸೌಲಭ್ಯವಿತ್ತು ಹಾಗೂ ಅದಕ್ಕೆ ೫೦% ಟಿಕೆಟ್ ದರವನ್ನು ಹಿಂದಕ್ಕೆ ನೀಡಲಾಗುತ್ತಿತ್ತು. ಈ ಹೊಸ ಶುಲ್ಕಗಳು ಏಪ್ರಿಲ್ ೧ ರಿಂದ ಜಾರಿಗೆ ಬರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com