ಸೈಬರ್ ಕ್ರೈಂಗೆ ಬೇಕಿದೆ ವಿಶೇಷ ನ್ಯಾಯಾಲಯ

ಸೈಬರ್ ಕ್ರೈಂ ಅಪರಾಧಗಳನ್ನು ತಡೆಗಟ್ಟಲು ಉತ್ತಮ ಆಡಳಿತ, ನುರಿತ ವಿಶೇಷ ಸೈಬರ್ ತನಿಖಾ ತಂಡ ಹಾಗೂ ಪ್ರಕರಣಗಳನ್ನು ವ್ಯವಹರಿಸಲು ವಿಶೇಷ ನ್ಯಾಯಾಧೀಶರ ಅಗತ್ಯವಿದೆ ಲೋಕಾಯುಕ್ತ ನ್ಯಾ.ವೈ. ಭಾಸ್ಕರ್ ರಾವ್ ಹೇಳಿದರು...
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ಅಭಿಯೋಜನಾಧಿಕಾರಿಗಳ ಸಮೇಳನದಲ್ಲಿ ಲೋಕಾಯುಕ್ತ ನ್ಯಾ.ಬಾಸ್ಕರ್ ರಾವ್ ಹಾಗೂ ರಾಜ್ಯ ಅಡ್ವೊಕೇಟ್ ಜನರಲ್ ಪ್
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ಅಭಿಯೋಜನಾಧಿಕಾರಿಗಳ ಸಮೇಳನದಲ್ಲಿ ಲೋಕಾಯುಕ್ತ ನ್ಯಾ.ಬಾಸ್ಕರ್ ರಾವ್ ಹಾಗೂ ರಾಜ್ಯ ಅಡ್ವೊಕೇಟ್ ಜನರಲ್ ಪ್

ಬೆಂಗಳೂರು: ಸೈಬರ್ ಕ್ರೈಂ ಅಪರಾಧಗಳನ್ನು ತಡೆಗಟ್ಟಲು ಉತ್ತಮ ಆಡಳಿತ, ನುರಿತ ವಿಶೇಷ ಸೈಬರ್ ತನಿಖಾ ತಂಡ ಹಾಗೂ ಪ್ರಕರಣಗಳನ್ನು ವ್ಯವಹರಿಸಲು ವಿಶೇಷ ನ್ಯಾಯಾಧೀಶರ ಅಗತ್ಯವಿದೆ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಹೇಳಿದರು.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ಅಭಿಯೋಜನಾಧಿಕಾರಿಗಳ ಸಮೇಳನದಲ್ಲಿ ಮಾತನಾಡಿ, ಪ್ರಾಸಿಕ್ಯೂಷನ್ ಸಂಸ್ಥೆ ಮತ್ತು ಪೊಲೀಸ್ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದ ಪರಿಣಾಮ ತಪ್ಪಿತಸ್ಥರು ಇಂದು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ನ್ಯಾಯಾಲಯ ವ್ಯವಸ್ಥೆಯಲ್ಲಿನ ವಿಳಂಬವೇ ಅಪರಾಧ ಸಂಖ್ಯೆ ಹೆಚ್ಚಲು ಕಾರಣ. ಇವೆಲ್ಲವನ್ನು ತಡೆಗಟ್ಟಲು ನ್ಯಾಯಲಯಗಳಿಗೆ ಮಾತ್ರ ಸಾಧ್ಯ. ದೇಶದಲ್ಲಿ ಶೇ.79ರಷ್ಟು ಯುವಕರು ಅಶ್ಲೀಲ ದೃಶ್ಯ ಹಾಗೂ ವಿಡಿಯೋ ವೀಕ್ಷಿಸುವ ವ್ಯಸನಕ್ಕೆ ಬಿದ್ದಿದ್ದಾರೆ.

ಸಮೀಕ್ಷೆಯ ಪ್ರಕಾರ 2013ರಲ್ಲಿ 4356 ಸೈಬರ್ ಕ್ರೈಂ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ 1336 ಪ್ರಕರಣಗಳು ದಾಖಲಾಗಿವೆ. ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ.ಅಪರಾಧಗಳು ಹೊಸ ರೂಪು ಪಡೆದುಕೊಳ್ಳುತ್ತಿದ್ದು, ಸೈಬರ್ ಕ್ರೈಂ, ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಡ್ರಗ್ ಮಾಫಿಯಾದಂತಹ ಪ್ರಕರಣಗಳು ಸಮಾಜಕ್ಕೆ ಹಾನಿಕಾರಕವಾಗಿವೆ. ಇದನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ ಬೇಕಿದೆ ಎಂದರು.

ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರ ತಯಾರಿಕೆ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಕುರಿತು ತ್ವರಿತವಾಗಿ ಸರ್ಕಾರಗಳು ಚಿಂತಿಸಬೇಕಿದೆ. ಈ ರೀತಿಯ ಘಟನೆಗೆ ಕಡಿವಾಣ ಹಾಕಬೇಕಾದಲ್ಲಿ ನ್ಯಾಯಾಲಯಗಳು, ಪ್ರಾಸಿಕ್ಯೂಷನ್ ಮತ್ತು ಪೊಲೀಸ್ ಇಲಾಖೆ ಮಹತ್ತರ ಜವಬ್ದಾರಿ ಹೊಂದಿದೆ. ಕ್ರಿಮಿನಲ್ ನ್ಯಾಯಾಧೀಕರಣ ವ್ಯವಸ್ಥೆ ಪ್ರಬಲವಾಗಿ ಕಾರ್ಯನಿರ್ವಹಿಸುವ ಮೂಲಕ ಆರೋಪಿಗಳು ಶಿಕ್ಷೆಯಿಂದ ಪಾರಾಗದಂತೆ ಎಚ್ಚರವಹಿಸ ಬೇಕಿದೆ ಎಂದರು.

ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಒಂದು ಪ್ರಕರಣದಲ್ಲಿ ವಕೀಲರು ಪಡೆಯುವ ವೇತನವನ್ನು ಪ್ರಾಸಿಕ್ಯೂಟರ್‍ಗಳು ಒಂದು ತಿಂಗಳ ಸಂಬಳವಾಗಿ ಪಡೆಯುತ್ತಾರೆ. ಆದ್ದರಿಂದ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಪ್ರಾಸಿಕ್ಯೂಟರ್‍ಗಳ ವೇತನ ಪರಿಷ್ಕರಿಸಬೇಕು ಎಂದರು.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಮಾತನಾಡಿ, ಕ್ರಿಮಿನಲ್ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಕಾಲೇಜಿನ ಜತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಡಿಪ್ಲೊಮಾ ತರಗತಿಯನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಅಭಿಯೋಜಕರು ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು. ಪ್ರಾಸಿಕ್ಯೂಷನ್ ನಿರ್ದೇಶಕ ರಾಮಣ್ಣ, ಅಶೋಕ್ ತಲವಾರ್, ಬೆಳ್ಳಕ್ಕಿ, ರೇವಣ್ಣ ಸಿದ್ದಯ್ಯ ಉಪಸ್ಥಿತರಿದ್ದರು.

ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾನಸ್ಪದ ಸಾವಿನ ಘಟನೆ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಸಿಆರ್‍ಪಿಸಿ 174ರಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣ ಇದಾಗಿತ್ತು. ಆದರೆ ಇದನ್ನು ತಪ್ಪಾಗಿ ಬಿಂಬಿಸಿದ ಪರಿಣಾಮ ಸರ್ಕಾರ ಹಾಗೂ ತನಿಖಾಧಿಕಾರಿಯ ವಿರದಟಛಿ ಜನ ಆಕ್ರೋಶ ವ್ಯಕ್ತಪಡಸಿದರು. ಈ ಘಟನೆಯಿಂದ ಕೆಲವು ಪಟ್ಟಭಧ್ರ ಹಿತಾಸಕ್ತಿಗಳು ಲಾಭ ಪಡೆದುಕೊಂಡರು. ಇದೆಲ್ಲವನ್ನೂ ಗಮನಿಸಿ ನಾವು ಮೌನವಹಿಸಲಾಗದು. ಈ ಘಟನೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ತನಿಖಾ ಸಂಸ್ಥೆಗಳ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಕಡೆ ಗಮನಹರಿಸಬೇಕಿದೆ.

-ಪ್ರೊ.ರವಿವರ್ಮ ಕುಮಾರ್,
ರಾಜ್ಯ ಅಡ್ವೊಕೇಟ್ ಜನರಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com