ಬಾಲಕಿ ಶವ ಹೂಳಲು ನಿರಾಕರಣೆ; ಗೊಂದಲ

ಅನಾರೋಗ್ಯದಿಂದ ಮೃತಪಟ್ಟ ಬಾಲಕಿ ಶವವನ್ನು ಸ್ಮಶಾನದಲ್ಲಿ ಹೂಳಲು ಸ್ಥಳೀಯರು ಅನುಮತಿಗೆ ನಿರಾಕರಿಸಿರುವ ಘಟನೆ ಹೆಣ್ಣೂರಿನ ಬಾಬುಸಾಬ್‍ಪಾಳ್ಯದಲ್ಲಿ ಭಾನುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನಾರೋಗ್ಯದಿಂದ ಮೃತಪಟ್ಟ ಬಾಲಕಿ ಶವವನ್ನು ಸ್ಮಶಾನದಲ್ಲಿ ಹೂಳಲು ಸ್ಥಳೀಯರು ಅನುಮತಿಗೆ ನಿರಾಕರಿಸಿರುವ ಘಟನೆ ಹೆಣ್ಣೂರಿನ ಬಾಬುಸಾಬ್‍ಪಾಳ್ಯದಲ್ಲಿ ಭಾನುವಾರ ನಡೆದಿದೆ.

ಬಾಬುಸಾಬ್‍ಪಾಳ್ಯದಲ್ಲಿ ಹಲವು ವರ್ಷ ಗಳಿಂದ ವಾಸವಿದ್ದ ಶ್ವೇತಾ(11) ಅನಾರೋಗ್ಯದಿಂದ ಮೃತಪಟ್ಟಿದ್ದಳು. ಹೀಗಾಗಿ, ಆಕೆಯ ಶವವನ್ನು ಹೂಳಲು ಹೆಣ್ಣೂರು ಪೊಲೀಸ್ ಠಾಣೆ ಹಿಂಭಾಗದಲ್ಲೇ ಕೆರೆಗೆ ಹೊಂದಿಕೊಂಡಂತೆ ಇರುವ ಸ್ಮಶಾನಕ್ಕೆ ಶವವನ್ನು ಭಾನುವಾರ ಮಧ್ಯಾಹ್ನ ತರಲಾಗಿತ್ತು. ಈ ವೇಳೆ ಸ್ಥಳೀಯ ಮುಖಂಡರು ಶವ ಹೂಳಲು ಅವಕಾಶ ನಿರಾಕರಿಸಿದ್ದರು.

ಕೆಲವು ಸ್ಥಳೀಯ ದಲಿತ ಸಂಘಟನೆಗಳ ಮುಖಂಡರು, ಇದು ತಮ್ಮ ಸಮುದಾಯಕ್ಕೆ ಸೇರಿದ ಜಾಗ. ಅಲ್ಲದೇ ಇಲ್ಲಿ ಜಾಗವೂ ಇಲ್ಲ. ಹೀಗಾಗಿ, ನೀವು ಬೇರೆ ಕಡೆ ಹೋಗಿ ಶವವನ್ನು ಹೂಳಿ ಎಂದಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಶ್ವೇತಾ ಪಾಲಕರು ಹಾಗೂ ಸಂಬಂ„ಗಳು, ತಾವು ಕಳೆದ 35 ವರ್ಷದಿಂದ ಇದೇ ಪ್ರದೇಶದಲ್ಲೇ ವಾಸಿಸುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ತಮ್ಮ ಅಜ್ಜ ಸೇರಿದಂತೆ ಮೃತ ಹಿರಿಯರ ಶವಗಳನ್ನು ಇಲ್ಲೇ ಹೂಳಲಾಗಿದೆ. ಹೀಗಾಗಿ, ಶ್ವೇತಾ ಶವ ಇಲ್ಲೇ ಹೂಳುವುದಾಗಿ ಹೇಳಿದರು. ಆದರೆ, ಇದಕ್ಕೆ ಅವಕಾಶ ನೀಡದ ಸ್ಥಳೀಯ ಸಂಘಟನೆಗಳು, ಬೇರೆ ಕಡೆ ಹೋಗುವಂತೆ ಪಟ್ಟು ಹಿಡಿದರು. ಕೊನೆಗೆ ಮೃತ ಶ್ವೇತಾ ಪಾಲಕರು ಅನಿವಾರ್ಯವಾಗಿ ಪೊಲೀಸರ ಮೊರೆ
ಹೋಗಬೇಕಾಯಿತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಕಡೆಯವರೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಕೆರೆಗೆ ಹೊಂದಿಕೊಂಡಿರುವ ಸ್ಮಶಾನವೇ ಒತ್ತುವರಿಯಾಗಿದೆ. ಹೀಗಾಗಿ, ಅಲ್ಲಿ ಶವ ಹೂಳಲು ಅವಕಾಶ ಇಲ್ಲ ಎಂದು ಮೃತ ಬಾಲಕಿ ಪಾಲಕರು ಹಾಗೂ ಸಂಬಂಧಿಗಳಿಗೆ ತಿಳಿಸಿದ್ದಾರೆ. ಶವ ಹೂಳಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಪಾಲಕರು ಹಾಗೂ ಸಂಬಂಧಿಗಳು ಶವವನ್ನು ವಾಹನ ಮಾಡಿಕೊಂಡು ತಮಿಳುನಾಡಿಗೆ ತೆರಳಿದರು. ಕೆರೆ ಜಾಗದಲ್ಲಿ ಶವ ಹೂಳಲು ಯತ್ನಿಸಲಾಗುತ್ತಿತ್ತು. ಹೀಗಾಗಿ, ಅದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬೇರೆ ಕಡೆ ಶವ ಹೂಳಲು ಮುಂದಾದರೆ, ಭದ್ರತೆ ನೀಡುವುದಾಗಿ ಹೇಳಿದೆವು. ಆದರೆ, ಪಾಲಕರು ತಾವಾಗಿಯೇ ಶವವನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com