
ಬೆಂಗಳೂರು: ಸುಬ್ರಹ್ಮಣ್ಯಪುರ ಸಮೀಪದ ಕೇತಮಾರನಹಳ್ಳಿಯಲ್ಲಿ 9ನೇ ತರಗತಿ ವಿದ್ಯಾರ್ಥಿ ಚೇತನ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೆಕ್ಯಾನಿಕ್ ಗೋವಿಂದರಾಜು ಮಗನಾದ ಚೇತನ್, ಶನಿವಾರ ಸಂಜೆ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾನೆ. ಈ ವೇಳೆ ಪಾಲಕರು ದೇವಸ್ಥಾನಕ್ಕೆ ಹೋಗಿದ್ದು ರಾತ್ರಿ 9 ಗಂಟೆಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಾಗಿಲು ಮುರಿದು ಕೋಣೆಯನ್ನು ಪ್ರವೇಶಿಸಿದ ಗೋವಿಂದರಾಜು, ಕೂಡಲೇ ಮಗನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟೊತ್ತಿಗೆ ಚೇತನ್ ಕೊನೆಯುಸಿರೆಳೆದಿದ್ದ. ಚೇತನ್‍ಗೆ ಚೆನ್ನಾಗಿ ಓದಿಕೊಳ್ಳುವಂತೆ ಪಾಲಕರು ಬುದ್ಧಿವಾದ ಹೇಳಿದ್ದರು. ಇದರಿಂದ ಬೇಸರ ಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement