
ಶಿರಹಟ್ಟಿ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತಹಸೀಲ್ದಾರ್ ವಸಂತಕುಮಾರ ದುರುಗಪ್ಪ ಸಜ್ಜನ ಅವರ ಮೇಲೆ ಭಾನುವಾರ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ತಹಸೀಲ್ದಾರ್ ಅವರು ಪಟ್ಟಣದ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30ರ ವರೆಗೆ ನಡೆದ ಸಾಮಾಜಿಕ ಮತ್ತು ಆರ್ಥಿಕ ಗಣತಿ ಕಾರ್ಯಾಗಾರ ಮುಗಿಸಿಕೊಂಡು ಮನೆಗೆ ತೆರಳುವಾಗ ಬಸವೇಶ್ವರ ವೃತ್ತದ ಬಳಿ ಘಟನೆ ನಡೆದಿದೆ.
ಮಹಮ್ಮದ್ ಅಖಿಫಿಕ್ ಮಾಬುಸಾಬ್ ಮನಿಯಾರ್ ಹಲ್ಲೆ ನಡೆಸಿದ್ದು, ಶಿರಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Advertisement